Indian Navy Recruitment 2021: 10th, ITI ಪಾಸಾಗಿದ್ರೆ ತಿಂಗಳಿಗೆ ₹ 56,900 ಸಂಬಳ, ನೌಕಾಪಡೆಯಲ್ಲಿ ಉದ್ಯೋಗ

ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಹಾಗೂ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

Indian Navy

Indian Navy

  • Share this:
Indian Navy Recruitment 2021: ಭಾರತೀಯ ನೌಕಾಪಡೆ(Indian Navy)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 217 ಟ್ರೇಡ್ಸ್​ಮ್ಯಾನ್​ ಮೇಟ್(Tradesman Mate)​​ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ (ಪೋಸ್ಟ್​)​ ಮೂಲಕ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 21, 2021ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಹಾಗೂ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಭಾರತೀಯ ನೌಕಾಪಡೆ
ಹುದ್ದೆಯ ಹೆಸರು ಟ್ರೈನಿ
ಒಟ್ಟು ಹುದ್ದೆಗಳು 217
ವಿದ್ಯಾರ್ಹತೆ 10ನೇ ತರಗತಿ, ಐಟಿಐ ಪಾಸಾಗಿರಬೇಕು
ಸಂಬಳ ಮಾಸಿಕ ₹18,000-56,900
ಅರ್ಜಿ ಸಲ್ಲಿಸುವ ಬಗೆ ಆಫ್​ಲೈನ್​ (ಪೋಸ್ಟಲ್)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 18/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/10/2021ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/10/2021

ಅರ್ಜಿ ಶುಲ್ಕ:

ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ:Indian Navy Recruitment 2021: ಪಿಯುಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು ಖಾಲಿ ಇವೆ

ವಿದ್ಯಾರ್ಹತೆ:

ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ, ಐಟಿಐ ಪಾಸಾಗಿರಬೇಕು.

ವಯೋಮಿತಿ:

56 ವರ್ಷದವರೆಗೆ

ಇದನ್ನೂ ಓದಿ:Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, 12th ಪಾಸಾಗಿದ್ರೆ ಸಾಕು, ಭಾರತೀಯ ಸೇನೆಯಲ್ಲಿ ಉದ್ಯೋಗ

ಕೆಲಸದ ಸ್ಥಳ:

ನವದೆಹಲಿ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

 

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: