Indian Navy Recruitment 2021: ಬಿ.ಟೆಕ್​ ಕೆಡೆಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ - ಅಕ್ಟೋಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ..

B. Tech Cadet Entry Scheme: ಭಾರತೀಯ ನೌಕಾಪಡೆಯು ಒಟ್ಟು 35 ಸ್ಥಾನಗಳನ್ನು  ಘೋಷಿಸಿದೆ. ಈ ಖಾಲಿ ಹುದ್ದೆಗಳು ಶಿಕ್ಷಣ, ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಗಳಲ್ಲಿದ್ದು,  ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 1, 2021 ರಂದು ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10, 2021. ಈ ಅಧಿಸೂಚನೆಯ ಸಂಪೂರ್ಣ ವಿವರಗಳು ಇಲ್ಲಿದೆ.

ಭಾರತೀಯ ನೌಕಪಡೆಯಲ್ಲಿ ಬಿ.ಟೆಕ್  ಕೆಡೆಟ್  ಪ್ರವೇಶಕ್ಕೆ ಅರ್ಜಿ ಆಹ್ವಾನ

ಭಾರತೀಯ ನೌಕಪಡೆಯಲ್ಲಿ ಬಿ.ಟೆಕ್ ಕೆಡೆಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ

  • Share this:
ದ್ವಿತೀಯ ಪಿಯುಸಿ(2nd PUC) ಅಥವಾ ಅದಕ್ಕೆ ಸಮಾನಾಂತರ ವಿದ್ಯಾರ್ಹತೆ ಹೊಂದಿರುವ ವಿಧ್ಯಾರ್ಥಿಗಳಿಗೆ  ಸುವರ್ಣಾವಕಾಶವೊಂದು ಒದಗಿ ಬಂದಿದ್ದು, ಭಾರತೀಯ ನೌಕಾಪಡೆಯು(Indian Navy) 10 + 2 ಬಿ. ಟೆಕ್ ಕೆಡೆಟ್ (B.Tech)ಪ್ರವೇಶ ಯೋಜನೆಯನ್ನು ಘೋಷಿಸಿದ್ದು,  ಅಧಿಕೃತ ಅಧಿಸೂಚನೆ ಹೊರಡಿಸಿದೆ.  ಈ ಅಧಿಸೂಚನೆಗೆ ಅವಿವಾಹಿತ ಯುವಕರು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಕೇರಳದ ಈಜಿಮಾಲಾದ ಭಾರತೀಯ ನೌಕಾ ಅಕಾಡೆಮಿಯಲ್ಲಿ(Naval Academy Ezhimala) ನಾಲ್ಕು ವರ್ಷದ ಬಿ ಟೆಕ್ ಕೋರ್ಸ್ (B.Tech) ಮಾಡಬೇಕು. ಬಿ. ಟೆಕ್ ಪದವಿ ಕೋರ್ಸ್ ಜನವರಿ 2022 ರಲ್ಲಿ ಆರಂಭವಾಗಲಿದ್ದು, ಭಾರತೀಯ ನೌಕಾಪಡೆಯು ಒಟ್ಟು 35 ಸ್ಥಾನಗಳನ್ನು  ಘೋಷಿಸಿದೆ. ಈ ಖಾಲಿ ಹುದ್ದೆಗಳು ಶಿಕ್ಷಣ, ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಗಳಲ್ಲಿದ್ದು,  ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 1, 2021 ರಂದು ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10, 2021. ಈ ಅಧಿಸೂಚನೆಯ ಸಂಪೂರ್ಣ ವಿವರಗಳು ಇಲ್ಲಿದೆ.

ಭಾರತೀಯ ನೌಕಾಪಡೆ 10 + 2 ಬಿಟೆಕ್ ಕೆಡೆಟ್ ಪ್ರವೇಶ ಯೋಜನೆ: ಹುದ್ದೆಯ ವಿವರಗಳು ..ಒಟ್ಟು ಸೀಟ್​ಗಳು  35
 ಶೈಕ್ಷಣಿಕ ಶಾಖೆ 5
ಕಾರ್ಯನಿರ್ವಾಹಕ, ತಾಂತ್ರಿಕ ಶಾಖೆ 30

ಭಾರತೀಯ ನೌಕಾಪಡೆ 10 + 2 ಬಿ. ಟೆಕ್ ಕೆಡೆಟ್ ಪ್ರವೇಶ ಯೋಜನೆ:  ಅರ್ಜಿ  ಸಲ್ಲಿಕೆ ದಿನಾಂಕ ಆರಂಭ 1 ಅಕ್ಟೋಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಅಕ್ಟೋಬರ್ 2021
ಇಂಟರ್​ವ್ಯೂ ಅಕ್ಟೋಬರ್ ಅಥವಾ ನವೆಂಬರ್
ವಿದ್ಯಾರ್ಹತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯದಲ್ಲಿ 10 + 2 ನಲ್ಲಿ ಕನಿಷ್ಠ ಶೇ .70 ಅಂಕಗಳನ್ನು ಪಡೆದು ಪಾಸಾಗಿರಬೇಕು. ಜೆಇಇ ಮುಖ್ಯ ಪರೀಕ್ಷೆ ಬರೆದವರು ಅರ್ಜಿ ಸಲ್ಲಿಸಬೇಕು.  10th  ಮತ್ತು ದ್ವಿತೀಯ ಪಿಯುಸಿಯ ಇಂಗ್ಲಿಷ್ ನಲ್ಲಿ 50% ಅಂಕಗಳನ್ನು ಹೊಂದಿರುವುದು ಕಡ್ಡಾಯ.
 ವಯಸ್ಸು 2 ನೇ ಜುಲೈ 2002 ರಿಂದ 1 ಜನವರಿ 2005 ರ ನಡುವೆ ಜನಿಸಿದ ಅರ್ಜಿದಾರರು ಅರ್ಜಿ ಸಲ್ಲಿಸಬಹುದು.
ಕೋರ್ಸ್‌ಗಳು ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ.ಅರ್ಜಿ  ಸಲ್ಲಿಕೆ ದಿನಾಂಕ ಆರಂಭ: 1 ಅಕ್ಟೋಬರ್ 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಅಕ್ಟೋಬರ್ 2021

ಇಂಟರ್​ವ್ಯೂ: ಅಕ್ಟೋಬರ್ ಅಥವಾ ನವೆಂಬರ್

ವಿದ್ಯಾರ್ಹತೆ:  ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯದಲ್ಲಿ 10 + 2 ನಲ್ಲಿ ಕನಿಷ್ಠ ಶೇ .70 ಅಂಕಗಳನ್ನು ಪಡೆದು ಪಾಸಾಗಿರಬೇಕು. ಜೆಇಇ ಮುಖ್ಯ ಪರೀಕ್ಷೆ ಬರೆದವರು ಅರ್ಜಿ ಸಲ್ಲಿಸಬೇಕು.  10th  ಮತ್ತು ದ್ವಿತೀಯ ಪಿಯುಸಿಯ ಇಂಗ್ಲಿಷ್ ನಲ್ಲಿ 50% ಅಂಕಗಳನ್ನು ಹೊಂದಿರುವುದು ಕಡ್ಡಾಯ.

 ವಯಸ್ಸು- 2 ನೇ ಜುಲೈ 2002 ರಿಂದ 1 ಜನವರಿ 2005 ರ ನಡುವೆ ಜನಿಸಿದ ಅರ್ಜಿದಾರರು ಅರ್ಜಿ ಸಲ್ಲಿಸಬಹುದು.

ಕೋರ್ಸ್‌ಗಳು- ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ.

ಇದನ್ನೂ ಓದಿ: ಶೀಘ್ರದಲ್ಲಿಯೇ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿಗಳ ನೇಮಕಾತಿ

ಆಯ್ಕೆ ವಿಧಾನ- ಜೆಇಇ ಮುಖ್ಯ ಅಖಿಲ ಭಾರತ ಶ್ರೇಣಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

 ಭಾರತೀಯ ನೌಕಾಪಡೆ 10 + 2 ಬಿಟೆಕ್ ಕೆಡೆಟ್ ಪ್ರವೇಶ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ 

ಹಂತ 1- ಅಭ್ಯರ್ಥಿಗಳು https://www.joinindiannavy.gov.in/ ವೆಬ್‌ಸೈಟ್ ತೆರೆಯಬೇಕು.

ಹಂತ 2- ಮುಖಪುಟದಲ್ಲಿ 10 + 2 ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3- ಹೊಸ ಪುಟ ತೆರೆಯುತ್ತದೆ. ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ(Apply Online) ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4- ಅಭ್ಯರ್ಥಿಯು ತನ್ನ ವಿವರಗಳೊಂದಿಗೆ ಖಾತೆಯನ್ನು ರಚಿಸಬೇಕು.

ಹಂತ 5- ಅದರ ನಂತರ ನೀವು ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಹಂತ 6- ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ಅದರ ಅವಶ್ಯಕತೆ ಬೇಕಾಗಬಹುದು.

ಸಂದರ್ಶನ ನಡೆಯುವ ಸ್ಥಳ- ವಿಶಾಖಪಟ್ಟಣಂ, ಬೆಂಗಳೂರು, ಭೋಪಾಲ್, ಕೋಲ್ಕತಾ.

ಕೆಲಸ ಹುಡುಕುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಕೆಲಸ ಖಾಲಿ ಇರುವ ಹುದ್ದೆಗಳ ಮಾಹಿತಿ

https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html
Published by:Sandhya M
First published: