Indian Coast Guard Recruitment 2021: SSLC, ITI ಪಾಸಾದವರಿಗೆ ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ ಉದ್ಯೋಗ

10ನೇ ತರಗತಿ ಹಾಗೂ ಐಟಿಐ ಪಾಸಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 3ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 3, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
Indian Coast Guard Recruitment 2021: ಇಂಡಿಯನ್ ಕೋಸ್ಟ್​ ಗಾರ್ಡ್(Indian Coast Guard )​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 19 ಮಲ್ಟಿ ಟಾಸ್ಕಿಂಗ್​ ಸ್ಟಾಫ್(Multi Tasking Staff)​, ಎಂಜಿನ್​ ಡ್ರೈವರ್(Engine Driver), ಫಯರ್ ಮ್ಯಾನ್(Fire Man), ಸಿವಿಲಿಯನ್ ಎಂಟಿ ಡ್ರೈವರ್(Civilian MT Driver), ಫೋರ್ಕ್​ ಲಿಫ್ಟ್​ ಆಪರೇಟರ್(Fork Lift Operator), ಲಾಸ್ಕರ್ ಹುದ್ದೆಗಳು ಖಾಲಿ ಇವೆ. 10ನೇ ತರಗತಿ(SSLC) ಹಾಗೂ ಐಟಿಐ(ITI) ಪಾಸಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 3ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 3, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ joinindiacoastgurad.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡಿಯನ್ ಕೋಸ್ಟ್​ ಗಾರ್ಡ್​
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್​ ಸ್ಟಾಫ್​, ಎಂಜಿನ್​ ಡ್ರೈವರ್, ಫಯರ್ ಮ್ಯಾನ್, ಸಿವಿಲಿಯನ್ ಎಂಟಿ ಡ್ರೈವರ್, ಫೋರ್ಕ್​ ಲಿಫ್ಟ್​ ಆಪರೇಟರ್, ಲಾಸ್ಕರ್
ಒಟ್ಟು ಹುದ್ದೆಗಳು19
ವಿದ್ಯಾರ್ಹತೆ10ನೇ ತರಗತಿ, ಐಟಿಐ ಪಾಸ್
ಉದ್ಯೋಗದ ಸ್ಥಳಭುವನೇಶ್ವರ, ಕೊಲ್ಕತ್ತಾ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ3/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ3/12/2021ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 3/11/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3/12/2021

ಇದನ್ನೂ ಓದಿ:KPSC Recruitment 2021: ತಿಂಗಳಿಗೆ ₹ 48,000 ಸಂಬಳ, SSLC ಪಾಸಾದವರಿಗೆ ಬಂಪರ್ ಉದ್ಯೋಗ

ಹುದ್ದೆಯ ಮಾಹಿತಿ:

 • ಮಲ್ಟಿ ಟಾಸ್ಕಿಂಗ್​ ಸ್ಟಾಫ್​-01

 • ಎಂಜಿನ್​ ಡ್ರೈವರ್-01

 • ಫಯರ್ ಮ್ಯಾನ್-04

 • ಸಿವಿಲಿಯನ್ ಎಂಟಿ ಡ್ರೈವರ್- 08

 • ಫೋರ್ಕ್​ ಲಿಫ್ಟ್​ ಆಪರೇಟರ್-01

 • ಲಾಸ್ಕರ್- 01

 • ಎಂಟಿ ಫಿಟ್ಟರ್/ಎಂಟಿ(ಮೆಕ್ಯಾನಿಕಲ್)-03


ವಯೋಮಿತಿ:

 • ಎಂಜಿನ್ ಡ್ರೈವರ್ & ಲಾಸ್ಕರ್- 18-30 ವರ್ಷ

 • ಉಳಿದ ಹುದ್ದೆಗಳಿಗೆ- 18-27 ವರ್ಷ


ಉದ್ಯೋಗದ ಸ್ಥಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಡಿಶಾದ ಭುವನೇಶ್ವರ ಹಾಗೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: LIC Recruitment 2021: ತಿಂಗಳಿಗೆ ₹ 25,000 ಸಂಬಳ, ಪದವಿ ಪಾಸಾದವರಿಗೆ LICಯಲ್ಲಿ Part-Time ಉದ್ಯೋಗ

ಆಯ್ಕೆ ಪ್ರಕ್ರಿಯೆ:

 • ಲಿಖಿತ ಪರೀಕ್ಷೆ

 • ದಾಖಲಾತಿ ಪರಿಶೀಲನೆ

 • ವೈಯಕ್ತಿಕ ಸಂದರ್ಶನಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: