Indian Coast Guard Recruitment 2021: ತಿಂಗಳಿಗೆ ₹ 2,25,000 ಸಂಬಳ, ಇಂಡಿಯನ್ ಕೋಸ್ಟ್​ ಗಾರ್ಡ್​​ನಲ್ಲಿ ಉದ್ಯೋಗ

ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Indian Coast Guard Recruitment 2021: ಇಂಡಿಯನ್ ಕೋಸ್ಟ್​ ಗಾರ್ಡ್(Indian Coast Guard)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 50 ಟೆಕ್ನಿಕಲ್(ಎಂಜಿನಿಯರಿಂಗ್ & ಎಲೆಕ್ಟ್ರಿಕಲ್), ಜನರಲ್ ಡ್ಯೂಟಿ, ಜನರಲ್ ಅಸಿಸ್ಟೆಂಟ್ ಕಮಾಂಡಂಟ್ ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ joinindiancoastgaurd.gov.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ಇಂಡಿಯನ್ ಕೋಸ್ಟ್​ ಗಾರ್ಡ್​
ಹುದ್ದೆಯ ಹೆಸರು ಟೆಕ್ನಿಕಲ್(ಎಂಜಿನಿಯರಿಂಗ್ & ಎಲೆಕ್ಟ್ರಿಕಲ್), ಜನರಲ್ ಡ್ಯೂಟಿ, ಜನರಲ್ ಅಸಿಸ್ಟೆಂಟ್ ಕಮಾಂಡಂಟ್
ಒಟ್ಟು ಹುದ್ದೆಗಳು 50
ವಿದ್ಯಾರ್ಹತೆ ಬಿಇ, ಬಿ.ಟೆಕ್, ಡಿಪ್ಲೋಮಾ
ಉದ್ಯೋಗದ ಸ್ಥಳ ಭಾರತದ ಯಾವುದೇ ಸ್ಥಳ
ವೇತನ ಮಾಸಿಕ ₹ 56,100-2,25,000
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 06/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/12/2021

ಇದನ್ನೂ ಓದಿ: ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 1,12,400

ಹುದ್ದೆಯ ವಿವರ:
ಜನರಲ್ ಡ್ಯೂಟಿ- 30
ಕಮರ್ಷಿಯಲ್ ಪೈಲಟ್ ಎಂಟ್ರಿ(CPL-SSA)-10
ಟೆಕ್ನಿಕಲ್ (ಎಂಜಿನಿಯರಿಂಗ್ & ಎಲೆಕ್ಟ್ರಿಕಲ್)- 10
ಒಟ್ಟು 50 ಹುದ್ದೆಗಳು

ವಿದ್ಯಾರ್ಹತೆ:
ಜನರಲ್ ಡ್ಯೂಟಿ- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು. (ಬಿಇ, ಬಿ.ಟೆಕ್)
ಕಮರ್ಷಿಯಲ್ ಪೈಲಟ್ ಎಂಟ್ರಿ(CPL-SSA)- ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ/ಬೋರ್ಡ್​ನಿಂದ ಶೇ.60ರಷ್ಟ ಅಂಕಗಳೊಂದಿಗೆ 12ನೇ ತರಗತಿ ಪಾಸಾಗಿರಬೇಕು. (ಭೌತಶಾಸ್ತ್ರ, ಗಣಿತ)
ಟೆಕ್ನಿಕಲ್ (ಎಂಜಿನಿಯರಿಂಗ್ & ಎಲೆಕ್ಟ್ರಿಕಲ್)- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ:
ಜನರಲ್ ಡ್ಯೂಟಿ- ಜುಲೈ 1, 1997-ಜೂನ್​ 30, 2001ರೊಳಗೆ ಜನಿಸಿರಬೇಕು.
ಕಮರ್ಷಿಯಲ್ ಪೈಲಟ್ ಎಂಟ್ರಿ(CPL-SSA)-ಜುಲೈ 1, 1997-ಜೂನ್​ 30, 2003ರೊಳಗೆ ಜನಿಸಿರಬೇಕು.
ಟೆಕ್ನಿಕಲ್ (ಎಂಜಿನಿಯರಿಂಗ್ & ಎಲೆಕ್ಟ್ರಿಕಲ್)- ಜುಲೈ 1, 1997-ಜೂನ್​ 30, 2001ರೊಳಗೆ ಜನಿಸಿರಬೇಕು.

ಇದನ್ನೂ ಓದಿ: NHB Recruitment 2021: ನ್ಯಾಷನಲ್ ಹೌಸಿಂಗ್ ಬ್ಯಾಂಕ್​ನಲ್ಲಿ ಪದವಿ ಆದವರಿಗೆ ಉದ್ಯೋಗ; ಮಾಸಿಕ ವೇತನ ₹ 89,890

ಉದ್ಯೋಗದ ಸ್ಥಳ:
ಟೆಕ್ನಿಕಲ್(ಎಂಜಿನಿಯರಿಂಗ್ & ಎಲೆಕ್ಟ್ರಿಕಲ್), ಜನರಲ್ ಡ್ಯೂಟಿ, ಜನರಲ್ ಅಸಿಸ್ಟೆಂಟ್ ಕಮಾಂಡಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರೂ ಉದ್ಯೋಗ ನೀಡಬಹುದು.

ವೇತನ:
ಅಸಿಸ್ಟೆಂಟ್ ಕಮಾಂಡಂಟ್- ಮಾಸಿಕ ₹ 56,100
ಡೆಪ್ಯುಟಿ ಕಮಾಂಡಂಟ್- ಮಾಸಿಕ ₹ 67,700
ಕಮಾಂಡಂಟ್(JG)- ಮಾಸಿಕ ₹78,800
ಕಮಾಂಡಂಟ್- ಮಾಸಿಕ ₹ 1,23,100
ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್- ಮಾಸಿಕ ₹ 1,31,100
ಇನ್ಸ್​​ಪೆಕ್ಟರ್​ ಜನರಲ್- ಮಾಸಿಕ ₹ 1,44,200
ಅಡಿಶನಲ್ ಡೈರೆಕ್ಟರ್ ಜನರಲ್- ಮಾಸಿಕ ₹ 1,82,200
ಡೈರೆಕ್ಟರ್ ಜನರಲ್- ಮಾಸಿಕ ₹ 2,25,000

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್
ಪ್ರಿಲಿಮಿನರಿ ಸೆಲೆಕ್ಷನ್
ಅಂತಿಮ ಆಯ್ಕೆ
Published by:Latha CG
First published: