ಭಾರತೀಯ ಮಿಲಿಟರಿಯಲ್ಲಿ (India's Military) ನೀವು ವ್ಯಾಸಾಂಗ ಮಾಡ್ತಾ ಇದ್ದೀರಾ? ಉದ್ಯೋಗಕ್ಕಾಗಿ ಹುಡುಕಾಡುತ್ತಾ ಇದ್ದೀರಾ? ಭಾರತೀಯ ಮಿಲಿಟರಿಯು ಇಂಜಿನಿಯರಿಂಗ್ ಪಾಸಾದ ಮತ್ತು ಫೈನಲ್ ವರ್ಷದಲ್ಲಿ ಓದುತ್ತಿರುವ ಮದುವೆ ಆಗದೇ ಇರುವ ಪುರುಷರಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಎಸ್ಎಸ್ಸಿ ಟೆಕ್ ಎಂಟ್ರಿ ಸ್ಕೀಮ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ. ಮಿಲಿಟರಿ ಸಿಬ್ಬಂದಿಗಳ ವಿಧವಾ ಮಹಿಳಾ ಅಭ್ಯರ್ಥಿಗಳು ಸಹ ಬಿಇ ವಿದ್ಯಾರ್ಹತೆ ಪಡೆದಿದ್ದಲ್ಲಿ ಅರ್ಜಿ (Application) ಆಹ್ವಾನಿಸಲಾಗಿದೆ. ಪುರುಷರು 61ನೇ ಟೆಕ್ ಎಂಟ್ರಿ ಸ್ಕೀಮ್ ಕೋರ್ಸ್ಗೆ, 32ನೇ ಟೆಕ್ ಎಂಟ್ರಿ ಕೋರ್ಸ್ಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕೋರ್ಸ್ಗಳು 2023 ರ ಅಕ್ಟೋಬರ್ ನಿಂದ ಆಫೀಸರ್ ಟ್ರೈನಿಂಗ್ ಅಕಾಡೆಮಿ (OTA), ಚೆನ್ನೈ, ತಮಿಳುನಾಡು (Tamil Nadu)ನಲ್ಲಿ ಆರಂಭಿಸಲಾಗುತ್ತದೆ.
ನೇಮಕಾತಿ ಪ್ರಾಧಿಕಾರ | ಶಾರ್ಟ್ ಸರ್ವೀಸ್ ಕಮಿಷನ್ |
ವಿದ್ಯಾರ್ಹತೆ | ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪಾಸ್ / ಅಂತಿಮ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು. |
ಒಟ್ಟು ಹುದ್ದೆಗಳ ಸಂಖ್ಯೆ | 191 |
ಉದ್ಯೋಗ ಕ್ಷೇತ್ರ | ರಕ್ಷಣಾ ಇಲಾಖೆ ಉದ್ಯೋಗ |
ಲೆಫ್ಟಿನಂಟ್(ಲೆವೆಲ್ 10 ): Rs.56,100 - 1,77,500
ಕ್ಯಾಪ್ಟನ್ (ಲೆವೆಲ್ 10B) : Rs.61,300 - 1,93,900
ಮೇಜರ್ (ಲೆವೆಲ್ 11) : Rs.69,400 - 2,07,200
ಲೆಫ್ಟಿನಂಟ್ ಕಲೋನೆಲ್ (ಲೆವೆಲ್ 12A ): Rs.1,21,200 - 2,12,400
ಕಲೋನೆಲ್ (ಲೆವೆಲ್ 13): Rs.1,30,600 - 2,15,900
ಬ್ರಿಗೇಡಿಯರ್ (ಲೆವೆಲ್ 13A) : Rs.1,39,600 - 2,17,600
ಮೇಜರ್ ಜೆನೆರಲ್ (ಲೆವೆಲ್ 14) : Rs.1,44,200 - 2,17,600
ಲೆಫ್ಟಿನಂಟ್ ಜೆನೆರಲ್ / ಹೆಚ್ಎಜಿ ಸ್ಕೇಲ್ (ಲೆವೆಲ್ 15) : Rs.1,82,200 - 2,24,100
ಲೆಫ್ಟಿನಂಟ್ ಜೆನೆರಲ್ ಹೆಚ್ಎಜಿ + ಸ್ಕೇಲ್ ( ಲೆವೆಲ್ 16) : Rs.2,05,400 - 2,24,400
VCOAS / ಆರ್ಮಿ ಕಮಾಂಡರ್ / ಲೆಫ್ಟಿನಂಟ್ ಜೆನೆರಲ್ (NFSG) ( ಲೆವೆಲ್ 17): Rs.2,25,000 (Fixed)
ಮಿಲಿಟರಿ ಸಿಬ್ಬಂದಿ ಮುಖ್ಯಸ್ಥ (COAS) (ಲೆವೆಲ್ 18 ) : Rs.2,5೦,000 (Fixed)
ಅಪ್ಲಿಕೇಶನ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದ ಇಷ್ಟೊಂದು ಮಕ್ಕಳಿಗೆ ಓದೋಕೇ ಬರಲ್ವಂತೆ!
ಅರ್ಜಿಯನ್ನು ಹಾಕುವುದು ಹೇಗೆ?
ವೆಬ್ಸೈಟ್ ವಿಳಾಸ www.joinindianarmy.nic.in ಗೆ ಹೋಗಿ.
ಓಪನ್ ಆದ ಪೇಜ್ನಲ್ಲಿ 'Officer Entry Application / Login' ಎಂಬಲ್ಲಿ ಕ್ಲಿಕ್ ಮಾಡಿ.
ನಂತರ 'Registration' ಎಂಬಲ್ಲಿ ಕ್ಲಿಕ್ ಮಾಡಿ, ಅಗತ್ಯ ಮಾಹಿತಿ ನೀಡಿ ರಿಜಿಸ್ಟ್ರೇಷನ್ ಆಗಿ.
ತರಬೇತಿ ವಿಳಾಸ ಚೆನ್ನೈ, ದೇಶದ ಮಿಲಿಟರಿ ಘಟಕಗಳು ಸ್ಥಳವಾಗಿದೆ, ಪ್ರದೇಶ ತಮಿಳುನಾಡಿನಲ್ಲಿ ಇರುತ್ತದೆ, ಅಂಚೆ ಸಂಖ್ಯೆಯು 600001
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ