Indian Army Recruitment 2021: ಭಾರತೀಯ ಸೇನೆಯಲ್ಲಿ 191 ಹುದ್ದೆಗಳು ಖಾಲಿ; BE, B. Tech ಪದವೀಧರರು ಅರ್ಜಿ ಸಲ್ಲಿಸಿ

ಅಕ್ಟೋಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು.

ಭಾರತೀಯ ಸೇನೆ

ಭಾರತೀಯ ಸೇನೆ

  • Share this:
Join Indian Army Recruitment 2021: ಜಾಯಿನ್ ಇಂಡಿಯನ್ ಆರ್ಮಿ(Join Indian Army) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 191 ಡಿಫೆನ್ಸ್​ ಪರ್ಸನಲ್(Defence Personnel) ಹಾಗೂ ಶಾರ್ಟ್​ ಸರ್ವೀಸ್ ಕಮಿಷನ್(Short Service Commission) ಹುದ್ದೆಗಳು ಖಾಲಿ ಇದ್ದು, ಬಿಇ(BE), ಬಿ.ಟೆಕ್(B. Tech)​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆ.28ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಜಾಯಿನ್ ಇಂಡಿಯನ್ ಆರ್ಮಿ
ಹುದ್ದೆಯ ಹೆಸರುಡಿಫೆನ್ಸ್​ ಪರ್ಸನಲ್, ಶಾರ್ಟ್ ಸರ್ವೀಸ್ ಕಮಿಷನ್
ಒಟ್ಟು ಹುದ್ದೆಗಳು191
ವಿದ್ಯಾರ್ಹತೆಬಿಇ, ಬಿ.ಟೆಕ್
ಉದ್ಯೋಗದ ಸ್ಥಳಪ್ಯಾನ್ ಇಂಡಿಯಾ
ಸಂಬಳನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ28/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27/10/2021

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/10/2021

ಇದನ್ನೂ ಓದಿ:ONGC Recruitment 2021: ತಿಂಗಳಿಗೆ ₹66,000 ಸಂಬಳ, ನಿವೃತ್ತಿ ಹೊಂದಿದ ಹಿರಿಯರಿಗೆ ONGCಯಲ್ಲಿ ಉದ್ಯೋಗ

ಹುದ್ದೆಯ ಮಾಹಿತಿ:

ಎಸ್​ಎಸ್​ಸಿ(ಟೆಕ್​)-58 ಮೆನ್: 175 ಹುದ್ದೆಗಳು
ಎಸ್​ಎಸ್​ಸಿಡಬ್ಲೂ(ಟೆಕ್)-29: 14 ಹುದ್ದೆಗಳು
ವಿಡೋಸ್ ಆಫ್ ಡಿಫೆನ್ಸ್ ಪರ್ಸನಲ್: 02
ಒಟ್ಟು: 191 ಹುದ್ದೆಗಳು

ವಿದ್ಯಾರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ:

  • SSC(Tech) ಮತ್ತು SSCW(Tech) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 20-27 ವರ್ಷ.

  • ವಿಡೋಸ್ ಆಫ್ ಡಿಫೆನ್ಸ್​ ಪರ್ಸನಲ್​- 35 ವರ್ಷ


ಇದನ್ನೂ ಓದಿ:India Post GDS Recruitment 2021: 10ನೇ ತರಗತಿ ಪಾಸಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿಆಯ್ಕೆ ಪ್ರಕ್ರಿಯೆ: 

  • ಶಾರ್ಟ್​ಲಿಸ್ಟಿಂಗ್

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: