Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, 12th ಪಾಸಾಗಿದ್ರೆ ಸಾಕು, ಭಾರತೀಯ ಸೇನೆಯಲ್ಲಿ ಉದ್ಯೋಗ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅಕ್ಟೋಬರ್ 8ರಿಂದ ನವೆಂಬರ್ 08ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಸೇನೆ

ಭಾರತೀಯ ಸೇನೆ

  • Share this:
Indian Army Recruitment 2021: ಭಾರತೀಯ ಸೇನೆ(Indian Army)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  12ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಖಾಲಿ ಇರುವ ಟೆಕ್ನಿಕಲ್​ ಎಂಟ್ರಿ ಸ್ಕೀಂ 46 ಕೋರ್ಸ್​ (Technical Entry Scheme 46 Course)ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅಕ್ಟೋಬರ್ 8ರಿಂದ ನವೆಂಬರ್ 08ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ  ಭಾರತೀಯ ಸೇನೆ
ಹುದ್ದೆಯ ಹೆಸರು ಟೆಕ್ನಿಕಲ್ ಎಂಟ್ರಿ ಸ್ಕೀಂ 46 ಕೋರ್ಸ್ ಹುದ್ದೆ
ಒಟ್ಟು ಹುದ್ದೆಗಳು 90
ವಿದ್ಯಾರ್ಹತೆ 12ನೇ ತರಗತಿ ಉತ್ತೀರ್ಣರಾಗಿರಬೇಕು
ಕೆಲಸದ ಸ್ಥಳ ಪ್ಯಾನ್ ಇಂಡಿಯಾ
ಸಂಬಳ ತಿಂಗಳಿಗೆ ₹ 56,000- ₹ 2,50,000
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 08/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/11/2021

 

ಇದನ್ನೂ ಓದಿ:Indian Navy Recruitment 2021: ಪಿಯುಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು ಖಾಲಿ ಇವೆಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/11/2021

ವಿದ್ಯಾರ್ಹತೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇಕಡಾ 60 ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಓದಿರಬೇಕು.

ಅಭ್ಯರ್ಥಿಯು ಜೆಇಇ ಮೇನ್ಸ್​-2021 ಪರೀಕ್ಷೆಯನ್ನು ಬರೆದಿರಬೇಕು.

ಇದನ್ನೂ ಓದಿ:BSF Recruitment 2021: ಗಡಿ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳು ಖಾಲಿ; ಸಂಬಳ ತಿಂಗಳಿಗೆ ₹ 2,15,900

ವಯೋಮಿತಿ:

ಅಭ್ಯರ್ಥಿಯು 16 ವರ್ಷಕ್ಕಿಂತ ಕೆಳಗಿನವರಾಗಿರಬಾರದು ಹಾಗೂ 19ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಾರದು. ಕೋರ್ಸ್​ ಆರಂಭಗೊಳ್ಳುವ ತಿಂಗಳ ಮೊದಲ ದಿನ ಅಂದರೆ ಅಭ್ಯರ್ಥಿಯು ಜುಲೈ 02, 2002ಕ್ಕಿಂತ ಮೊದಲು ಜನಿಸಿರಬಾರದು ಹಾಗೂ ಜುಲೈ 01, 2005ರ ನಂತರ ಜನಿಸಿರಬಾರದು.

ಸಂಬಳ:

ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹ 56,100 ರೂ.ನಿಂದ 2,50,000ರೂ.ವರೆಗೆ ಸಂಬಳ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಶಾರ್ಟ್​ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

 

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

 
Published by:Latha CG
First published: