Indian Army Recruitment 2021: ಕೇಂದ್ರ ಸರ್ಕಾರದ ಉದ್ಯೋಗ(Job) ಅರಸುತ್ತಿರುವವರಿಗೆ ಭಾರತೀಯ ಸೇನೆ(Indian Army) ಒಂದು ಉತ್ತಮ ಅವಕಾಶ ನೀಡಿದೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಖಾಲಿ ಇರುವ 40 ಟೆಕ್ನಿಕಲ್ ಗ್ರಾಜುಯೇಟ್(Technical Graduate) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಇ, ಬಿ ಟೆಕ್(BE, B. Tech) ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿ ಮಾಹಿತಿಗಾಗಿ joinindianarmy.nic.inಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತೀಯ ಸೇನೆ |
ಹುದ್ದೆಯ ಹೆಸರು |
ಟೆಕ್ನಿಕಲ್ ಗ್ರಾಜುಯೇಟ್ |
ಒಟ್ಟು ಹುದ್ದೆಗಳು |
40 |
ವಿದ್ಯಾರ್ಹತೆ |
ಬಿಇ, ಬಿ ಟೆಕ್ |
ಉದ್ಯೋಗದ ಸ್ಥಳ |
ಭಾರತ |
ವೇತನ |
ಮಾಸಿಕ ₹ 56,100-2,50,000 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
06/12/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
04/01/2022 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/01/2022
ವಿದ್ಯಾರ್ಹತೆ:
ಟೆಕ್ನಿಕಲ್ ಗ್ರಾಜುಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಬಿಇ, ಬಿ ಟೆಕ್ ಪಾಸಾಗಿರಬೇಕು.
ಇದನ್ನೂ ಓದಿ: BHEL Recruitment 2021: ತಿಂಗಳಿಗೆ ₹ 50 ಸಾವಿರ ಸಂಬಳ, BE, B Tech ಆದವರಿಗೆ BHELನಲ್ಲಿ ಉದ್ಯೋಗ
ವಯೋಮಿತಿ:
ಟೆಕ್ನಿಕಲ್ ಗ್ರಾಜುಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20-27 ವರ್ಷದೊಳಗಿರಬೇಕು.
ಹುದ್ದೆಯ ಮಾಹಿತಿ:
ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕಲೋನೆಲ್, ಕಲೋನೆಲ್, ಬ್ರಿಗೇಡಿಯರ್, ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್ HAG ಸ್ಕೇಲ್, ಲೆಫ್ಟಿನೆಂಟ್ ಜನರಲ್ HAG + ಸ್ಕೇಲ್, VCOAS/ಆರ್ಮಿ ಕ್ಯಾಡರ್/ ಲೆಫ್ಟಿನೆಂಟ್ ಜನರಲ್(NFSG), COAS
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಅಥವಾ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಶಾರ್ಟ್ಲಿಸ್ಟಿಂಗ್
SSB ಸಂದರ್ಶನ
ವೈದ್ಯಕೀಯ ಪರೀಕ್ಷೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ