Indian Air Force recruitment 2021: ವಾಯು ಸೇನೆಯಲ್ಲಿ ಕೆಲಸ ಮಾಡುವ ಕನಸಿದ್ಯಾ? SSLC, PUC ಆದವರಿಗೂ ಇಲ್ಲಿದೆ ಉತ್ತಮ ಅವಕಾಶ

ಎಸ್​ಎಸ್​ಎಲ್​ಸಿ , ಪಿಯುಸಿ ಮತ್ತು ಪದವೀಧರರು ತಮ್ಮ ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್​ಎಸ್​ಎಲ್​ಸಿ , ಪಿಯುಸಿ ಮತ್ತು ಪದವೀಧರರು ತಮ್ಮ ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್​ಎಸ್​ಎಲ್​ಸಿ , ಪಿಯುಸಿ ಮತ್ತು ಪದವೀಧರರು ತಮ್ಮ ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

  • Share this:
    ದೇಶದ ಸೇವೆ ಮಾಡಬೇಕು ಎಂಬುದು ಅನೇಕ ಯುವಜನತೆ ಕನಸು. ಭೂ ಸೇನೆ, ವಾಯು ಸೇನೆ ಅಥವಾ ನೌಕ ಸೇನೆಯಲ್ಲಿ ಕೆಲಸ ಪಡೆಯಲು ಅನೇಕ ಜನರು ತರಬೇತಿ ಪಡೆಯುತ್ತಿರುತ್ತಾರೆ. ಅಂತಹ ಕನಸು ನಿಮಗಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಭಾರತೀಯ ವಾಯು ಸೇನೆಯಲ್ಲಿನ (Indian Air Force )ಗ್ರೂಪ್​ ಸಿ ವಿಭಾಗದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಮುಂದಾಗಿದೆ. ಈಗಾಗಲೇ ಅರ್ಜಿ ಆಹ್ವಾನ ಮಾಡಲಾಗಿದ್ದು, ಸೆ. 30 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ.

    250 ಹುದ್ದೆಗೆ ಅರ್ಜಿ ಆಹ್ವಾನ
    ಗ್ರೂಪ್​ ಸಿ ವಿಭಾಗದ ಸುಮಾರು 250 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಮೆಸ್​ ಸ್ಟಾಫ್​, ಎಂಟಿಎಸ್​, ಲಾಂಡ್ರಿಮ್ಯಾನ್​, ಸ್ಟೋರ್​ ಕೀಪರ್​, ಕಾರ್ಪೆಂಟರ್​, ಫೈರ್​ ಮ್ಯಾನ್​, ಬಾಣಸಿಗ ಸೇರಿದಂತೆ ವಿವಿಧ ಹುದ್ದೆಗಳಿವೆ.

    ಅರ್ಹತೆ
    ಇನ್ನು ವಿವಿಧ ಉದ್ಯೋಗ ಅನುಸಾರವಾಗಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಎಸ್​ಎಸ್​ಎಲ್​ಸಿ , ಪಿಯುಸಿ ಮತ್ತು ಪದವೀಧರರು ತಮ್ಮ ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

    ವಯಸ್ಸು- ಸಂಬಳ
    ವಾಯು ಸೇನೆಗೆ ಸೇರ ಬಯಸುವ ಅಭ್ಯರ್ಥಿ ಅರ್ಜಿ ಸಲ್ಲಿಸಿದ ದಿನಾಂಕದೊಳಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು 25 ವರ್ಷ. ಇನ್ನು ಕೇಂದ್ರ ಸರ್ಕಾರದ ವೇತನ ಆಯೋಗದ ಅನುಸಾರ ತಿಂಗಳಿಗೆ 18 ಸಾವಿರ ದಿಂದ 25. 500 ರೂ ಗಳವರೆಗೆ ವೇತನ ಇರಲಿದೆ

    ವಯೋಮಿತಿ ಸಡಿಲಿಕೆ
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್​ಸಿ ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ ಇದೆ. ಇನ್ನು ಈ ಹುದ್ದೆಗಳಿಗೆ ಸಶಸತ್ರ ಪಡೆಗಳಲ್ಲಿ 6 ತಿಂಗಳಿಗಿಂತ ಕಡಿಮೆ ನಿರಂತರ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೂ ಅವಕಾಶವಿದೆ.

    ಇದನ್ನು ಓದಿ: ಪದವಿ ಆದ್ರೂ ಪರವಾಗಿಲ್ಲ, IT Sectorನಲ್ಲಿ ಕೆಲಸ ಪಡೆಯಬೇಕು ಅಂದ್ರೆ ಈ ಐದು Skill ಕಲಿಯಿರಿ ಸಾಕು

    ಅರ್ಜಿ ಸಲ್ಲಿಸುವ ವಿಧಾನ
    ಅಭ್ಯರ್ಥಿಗಳ ಹುದ್ದೆ ಮತ್ತು ವಿದ್ಯಾರ್ಹತೆ ಅನುಸಾರ ತಮ್ಮ ಆಯ್ಕೆಯ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಈ ಲಿಂಕ್​ಗೆ ಕ್ಲಿಕ್​ ಮಾಡಬಹುದಾಗಿದೆ. ಇಲ್ಲಿ ಸೂಚಿಸಿರುವ ಅರ್ಜಿ ಅನುಸಾರವಾಗಿ ಅಭ್ಯರ್ಥಿಗಳು ಪಾಸ್​ಪೋರ್ಟ್​ ಫೋಟೋ ಅಂಟಿಸಿ. ಈ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಅರ್ಜಿಯನ್ನು ಹಿಂದಿ ಅಥವಾ ಇಂಗ್ಲೀಷ್​ನಲ್ಲಿ ಟೈಪ್​ ಮಾಡಬೇಕು. ಇದಾದ ಬಳಿಕ ಉಲ್ಲೇಖಿಸಿದ ವಿಳಾಸ ಅಭ್ಯರ್ಥಿ ಅರ್ಜಿಯ ಲಕೋಟೆಯಲ್ಲಿ ಸ್ವಯಂ ವಿಳಾಸ ದಾಖಲಿಸಿ, ವಾಯುಪಡೆ ಕಚೇರಿಗೆ ರವಾನಿಸಬೇಕು.

    ಇದನ್ನು ಓದಿ: TET Result 2021: 21 ಅಭ್ಯರ್ಥಿಗಳ ಫಲಿತಾಂಶಕ್ಕೆ ತಡೆ; ಶೇ 19ರಷ್ಟು ಅಭ್ಯರ್ಥಿಗಳು ಉತ್ತೀರ್ಣ

    ಆಯ್ಕೆ ವಿಧಾನ:
    ಅಭ್ಯರ್ಥಿಗಳ ಅರ್ಜಿ ಪರಿಶೀಲನೆ ಬಳಿಕ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಈ ಲಿಖಿತ ಪರೀಕ್ಷೆಯಲ್ಲಿ ಜನರಲ್​ ಇಂಟೆಲಿಜೆನ್ಸ್​​ ಮತ್ತು ರೀಸನಿಂಗ್​, ಸಂಖ್ಯಾತ್ಮಕ ಸಾಮರ್ಥ್ಯ, ಜನರಲ್​ ಇಂಗ್ಲೀಷ್​, ಸಾಮಾನ್ಯ ಜ್ಞಾನ ಕುರಿತು ಪ್ರಶ್ನೆಗಳಿರಲಿದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುವುದು. ಬಳಿಕ ಈ ಎರಡು ಪರೀಕ್ಷೆಗಳಲ್ಲಿ ಆಯ್ಕೆಗೊಂಡವರಿಗೆ ವಾಯು ಸೇನೆಯಿಂದ ಕರೆ ಮಾಡಲಾಗುವುದು

    ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: