IAF Recruitment: ಇಂಡಿಯನ್ ಏರ್‌ಫೋರ್ಸ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

Indian Air Force Recruitment 2021: AFCAT ಪರೀಕ್ಷೆ ತೆಗೆದುಕೊಳ್ಳಲು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಶೇಕಡ.50 ಅಂಕಗಳೊಂದಿಗೆ ಪಿಯುಸಿ ಪಾಸ್‌ ಮಾಡಿರಬೇಕು.

Jobs

Jobs

  • Share this:
    ಇಂಡಿಯನ್ ಏರ್‌ಫೋರ್ಸ್​ನಲ್ಲಿ ಖಾಲಿ ಇರುವ 334 ಕಮಿಷನ್ಡ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.  ಜೂನ್ 30,2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

    ವಿದ್ಯಾರ್ಹತೆ:

    AFCAT ಪರೀಕ್ಷೆ ತೆಗೆದುಕೊಳ್ಳಲು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಶೇಕಡ.50 ಅಂಕಗಳೊಂದಿಗೆ ಪಿಯುಸಿ ಪಾಸ್‌ ಮಾಡಿರಬೇಕು. ಶೇಕಡ.60 ಅಂಕಗಳೊಂದಿಗೆ ಬಿಇ ಅಥವಾ ಬಿ.ಟೆಕ್ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ:

    ಹುದ್ದೆಗಳ ಅನ್ವಯ ಕನಿಷ್ಟ 20 ರಿಂದ ಗರಿಷ್ಟ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವೇತನ:

    ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರಿಂದ 1,77,500ರೂ ವರೆಗೆ ವೇತನವನ್ನು ನೀಡಲಾಗುವುದು.

    ಆಯ್ಕೆ ಹೇಗೆ?:

    ಅಭ್ಯರ್ಥಿಗಳನ್ನು ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌ (AFCAT) ಮೂಲಕ ಆಯ್ಕೆ ಮಾಡಲಾಗುತ್ತದೆ. AFCAT ಆನ್‌ಲೈನ್ ಪರೀಕ್ಷೆ, ದೈಹಿಕ ಪರೀಕ್ಷೆ.ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಶುಲ್ಕ:

    ಅರ್ಜಿ ಸಲ್ಲಿಸುವವರು  250ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ?:

    ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://indianairforce.nic.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ  ಭರ್ತಿ ಮಾಡಬೇಕು. ಜೂನ್ 1 ರಿಂದ ಜೂನ್ 30,2021ರೊಳಗೆ ಅರ್ಜಿಯನ್ನು ಸಲ್ಲಿಸಸಲು ಸಮಯವಕಾಶ ನೀಡಲಾಗಿದೆ
    Published by:Harshith AS
    First published: