India Postal Recruitment 2021: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ, ತಿಂಗಳಿಗೆ ₹81,000 ಸಂಬಳ

10ನೇ ತರಗತಿ, 12ನೇ ತರಗತಿ ಪಾಸಾದವರು, ಪದವೀಧರರು, ಕ್ರೀಡಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Post Office

Post Office

  • Share this:
North Eastern Postal Recruitment 2021: ಈಶಾನ್ಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 23 ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​ಮ್ಯಾನ್​, ಅಸಿಸ್ಟೆಂಟ್ ಬ್ರಾಂಚ್​ ಪೋಸ್ಟ್​​ಮಾಸ್ಟರ್​ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ ಪಾಸಾದವರು, ಪದವೀಧರರು, ಕ್ರೀಡಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಈಶಾನ್ಯ ಅಂಚೆ ಇಲಾಖೆ
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್​ ಸ್ಟಾಫ್, ಪೋಸ್ಟ್​ಮ್ಯಾನ್, ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ಮಾಸ್ಟರ್
ಒಟ್ಟು ಹುದ್ದೆಗಳು23
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಪದವಿ, ಕ್ರೀಡಾ ಕೋಟಾ
ಉದ್ಯೋಗದ ಸ್ಥಳಶಿಲ್ಲಾಂಗ್
ವೇತನಮಾಸಿಕ ₹ 18,000-81,000
ಅರ್ಜಿ ಸಲ್ಲಿಸುವ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03/12/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/12/2021



ಇದನ್ನೂ ಓದಿ: BSNL Recruitment 2021: ಡಿಪ್ಲೋಮಾ ಆದವರಿಗೆ ಬಿಎಸ್​ಎನ್​ಎಲ್​ ಕಂಪನಿಯಲ್ಲಿ ಉದ್ಯೋಗಾವಕಾಶ



ಹುದ್ದೆಯ ಮಾಹಿತಿ:

  • ಪೋಸ್ಟಲ್​ ಅಸಿಸ್ಟೆಂಟ್​-08

  • ಪೋಸ್ಟ್​​ಮ್ಯಾನ್​ -04

  • ಮಲ್ಟಿ ಟಾಸ್ಕಿಂಗ್​ ಸ್ಟಾಫ್​- 11

  • ಒಟ್ಟು -23 ಹುದ್ದೆಗಳು


ಅರ್ಜಿ ಶುಲ್ಕ:

ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಗಣಕೀಕೃತ ಪೋಸ್ಟ್​ ಆಫೀಸ್​​ಗಳಲ್ಲಿ ಇ-ಮೇಮೆಂಟ್ ಮೂಲಕ ಚಲನ್​ ಬಳಸಿ ಪಾವತಿಸಬೇಕು.

ವಿದ್ಯಾರ್ಹತೆ:

  • ಪೋಸ್ಟಲ್​ ಅಸಿಸ್ಟೆಂಟ್: ಮಾನ್ಯತೆ ಪಡೆದ ಬೋರ್ಡ್​/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.

  • ಪೋಸ್ಟ್​ಮ್ಯಾನ್​:ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.

  • ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾನ್ಯತೆ ಪಡೆದ ಬೋರ್ಡ್​/ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:

ಪೋಸ್ಟಲ್ ಅಸಿಸ್ಟೆಂಟ್/ಪೋಸ್ಟ್​ಮ್ಯಾನ್​- 18-27 ವರ್ಷ. OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, SC & ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಮಲ್ಟಿ ಟಾಸ್ಕಿಂಗ್ ಸ್ಟಾಫ್ - 18-25 ವರ್ಷ. OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, SC & ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ:Income Tax Department Recruitment 2021: 10ನೇ ತರಗತಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಬಂಪರ್ ಉದ್ಯೋಗ

ವೇತನ:

  • ಪೋಸ್ಟಲ್ ಅಸಿಸ್ಟೆಂಟ್- ಮಾಸಿಕ ₹ 25,500-81,000

  • ಪೋಸ್ಟ್​ಮ್ಯಾನ್​- ಮಾಸಿಕ ₹21,700-69,100

  • ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾಸಿಕ ₹ 18,000-56,900


ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ,

ಅಸಿಸ್ಟೆಂಟ್​ ಪೋಸ್ಟ್​​ಮಾಸ್ಟರ್​ ಜನರಲ್​ (ಸ್ಟಾಫ್​)
O/o ಚೀಫ್ ಪೋಸ್ಟ್​​ಮಾಸ್ಟರ್ ಜನರಲ್​,
ಈಶಾನ್ಯ ಸರ್ಕಲ್
ಶಿಲ್ಲಾಂಗ್​ -793001

ಈ ವಿಳಾಸಕ್ಕೆ ಕಳುಹಿಸಬೇಕು.




ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


Published by:Latha CG
First published: