Post Office Recruitment 2021: ಸ್ಪೋರ್ಟ್ಸ್​ ಕೋಟಾದಡಿ ಅಂಚೆ ಇಲಾಖೆಯ 46 ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ನೇಮಕಾತಿ

ಆಸಕ್ತ ಅಭ್ಯರ್ಥಿಗಳು www.indiapost.gov.in ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅಧಿಸೂಚನೆಯನ್ನು ಪರಿಶೀಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Indian Post office Recruitment 2021: ಸರ್ಕಾರಿ ಉದ್ಯೋಗ ಅರಸುತ್ತಿರುವವರು, ಅದರಲ್ಲೂ ಕೇಂದ್ರ ಸರ್ಕಾರದ ಕೆಲಸ ಬೇಕೆಂದು ಹಂಬಲಿಸುತ್ತಿರುವವರಿಗೆ ಭಾರತೀಯ ಅಂಚೆ ಇಲಾಖೆ ವಿಫುಲ ಅವಕಾಶ ನೀಡಿದೆ. ಲಕ್ನೋದ ಮುಖ್ಯ ಪೋಸ್ಟ್​ ಮಾಸ್ಟರ್​ ಜನರಲ್ ಯುಪಿ ಸರ್ಕಲ್​ ಕಚೇರಿಯು ಕ್ರೀಡಾ ಕೋಟಾದಡಿ(sports quota) 46 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು www.indiapost.gov.in ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅಧಿಸೂಚನೆಯನ್ನು ಪರಿಶೀಲಿಸಬಹುದಾಗಿದೆ.

ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ? India Post UP circle recruitment vacancy details

ಭಾರತೀಯ ಅಂಚೆ ಯುಪಿ ಸರ್ಕಲ್ ಕಚೇರಿಯು ಅನೇಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ರೀಡಾ ಕೋಟಾದಡಿ ಒಟ್ಟು 46 ಹುದ್ದೆಗಳು ಖಾಲಿ ಇವೆ. ಅಂಚೆ ಸಹಾಯಕ/ ವಿಂಗಡಣೆ ಸಹಾಯಕ, ಪೋಸ್ಟ್​ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್​ ಸ್ಟಾಫ್​(MTS) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ.

ಅರ್ಜಿ ಶುಲ್ಕ ಎಷ್ಟು?India Post UP circle recruitment application fee

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನಿಗದಿತ ಶುಲ್ಕವನ್ನು ಪಾವತಿಸಬೇಕು. ಚಲನ್​​ ಮೂಲಕ ಯಾವುದೇ ಗಣಕೀಕೃತ ಅಂಚೆ ಕಚೇರಿಯಲ್ಲಿ ಇ-ಪಾವತಿ ಮೂಲಕ 100 ರೂಪಾಯಿಯನ್ನು ಅರ್ಜಿ ಶುಲ್ಕವನ್ನಾಗಿ ಪಾವತಿಸಬೇಕು. ಖಾಲಿ ಇರುವ ಅಂಚೆ ಸಹಾಯಕ/ ವಿಂಗಡಣೆ ಸಹಾಯಕ, ಪೋಸ್ಟ್​ ಮ್ಯಾನ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್​ ಹುದ್ದೆಗಳಿಗೆ ಕ್ರೀಡಾಪಡುಗಳಿಗೆ(ಸ್ಪೋರ್ಟ್ಸ್​ ಕೋಟಾದಡಿ) ನೇರ ನೇಮಕಾತಿ ನಡೆಸಲಾಗುತ್ತದೆ.

ಇದನ್ನೂ ಓದಿ:Jobs: ಬೆಂಗಳೂರಿನಲ್ಲಿ 260 ಅಂಗನವಾಡಿ ಕಾರ್ಯಕರ್ತೆಯರ & ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ ಎಷ್ಟು? India Post UP circle recruitment age limit:

ಪೋಸ್ಟಲ್​ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷದೊಳಗಿನವರಾಗಿರಬೇಕು. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18ಕ್ಕಿಂತ ಕಡಿಮೆಯಿರಬಾರದು ಮತ್ತು 25ಕ್ಕಿಂತ ಹೆಚ್ಚಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ? India Post UP circle recruitment: How to apply

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ಸಂಬಂಧಿತ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ’’The Assistant Director (Recruitment), O/o The chief Postmaster General, Uttar Pradesh Circle, Lucknow 226 001".

ಅರ್ಜಿ ನಮೂನೆಯು ಸಂಬಂಧಿತ ದಾಖಲೆಗಳೊಂದಿಗೆ ನವೆಂಬರ್ 5 ಅಥವಾ ಅದಕ್ಕಿಂತ ಮುಂಚೆ ಮೇಲೆ ತಿಳಿಸಿದ ವಿಳಾಸವನ್ನು ತಲುಪಬೇಕು.































ಇಲಾಖೆ ಹುದ್ದೆಯ ಹೆಸರು ವಯೋಮಿತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ


ಭಾರತೀಯ ಅಂಚೆ ಇಲಾಖೆ

ಅಂಚೆ ಸಹಾಯಕ/ ವಿಂಗಡಣೆ ಸಹಾಯಕ 18 ರಿಂದ 27 ವರ್ಷದೊಳಗಿನವರಾಗಿರಬೇಕು. ನವೆಂಬರ್ 5, 2021


ಭಾರತೀಯ ಅಂಚೆ ಇಲಾಖೆ

ಪೋಸ್ಟ್​ಮ್ಯಾನ್ 18 ರಿಂದ 27 ವರ್ಷದೊಳಗಿನವರಾಗಿರಬೇಕು.  ನವೆಂಬರ್ 5, 2021


ಭಾರತೀಯ ಅಂಚೆ ಇಲಾಖೆ



ಮಲ್ಟಿ ಟಾಸ್ಕಿಂಗ್​ ಸ್ಟಾಫ್​(MTS)



18ಕ್ಕಿಂತ ಕಡಿಮೆಯಿರಬಾರದು ಮತ್ತು 25ಕ್ಕಿಂತ ಹೆಚ್ಚಿರಬಾರದು.

 ನವೆಂಬರ್ 5, 2021
Published by:Latha CG
First published: