India Post Recruitment 2021: ಭಾರತೀಯ ಅಂಚೆ ಇಲಾಖೆ(India Postal Department)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಜಾರ್ಖಂಡ್ ಪೋಸ್ಟ್ ಆಫೀಸ್ ಸರ್ಕಲ್(Jharkhand Post Office Circle)ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಒಟ್ಟು 19 ಪೋಸ್ಟಲ್ ಅಸಿಸ್ಟೆಂಟ್(Postal Assistant), ಪೋಸ್ಟ್ಮ್ಯಾನ್(Postman) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಕ್ರೀಡಾ ಕೋಟಾ(Sports Quota)ದಡಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತೀಯ ಅಂಚೆ ಇಲಾಖೆ |
ಹುದ್ದೆಯ ಹೆಸರು |
ಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ |
ಒಟ್ಟು ಹುದ್ದೆಗಳು |
19 |
ವಯೋಮಿತಿ |
18-25 ವರ್ಷ |
ವೇತನ |
ಮಾಸಿಕ ₹ 81,100 |
ಅರ್ಜಿ ಸಲ್ಲಿಕೆ ವಿಧಾನ |
ಆಫ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
25/11/2021 |
ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ಹುದ್ದೆಯ ವಿವರಗಳು
- ಅಂಚೆ ಸಹಾಯಕ/ಪೋಸ್ಟಲ್ ಅಸಿಸ್ಟೆಂಟ್ - 06
- ಪೋಸ್ಟ್ಮ್ಯಾನ್ - 05
- ಮಲ್ಟಿ ಟಾಸ್ಕಿಂಗ್ ಸ್ಟಾಪ್- 08
ಇದನ್ನೂ ಓದಿ: India Postal Recruitment 2021: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ, ತಿಂಗಳಿಗೆ ₹81,000 ಸಂಬಳ
ಅರ್ಹ ಕ್ರೀಡಾಪಟುಗಳ ನೇಮಕಾತಿಯನ್ನು ಈ ಕೆಳಗಿನ ಹುದ್ದೆಗಳಿಗೆ ಮಾಡಲಾಗುತ್ತದೆ
- ಅಂಚೆ ಕಛೇರಿಗಳು ಅಥವಾ ರೈಲ್ವೆ ಮೇಲ್ ಕಛೇರಿಗಳಲ್ಲಿ ಪೋಸ್ಟಲ್ / ವಿಂಗಡಣೆ ಸಹಾಯಕ
- ಅಂಚೆ ಕಛೇರಿಗಳಲ್ಲಿ ಪೋಸ್ಟ್ಮ್ಯಾನ್
- ಅಂಚೆ ಕಛೇರಿಗಳು ಅಥವಾ ರೈಲ್ವೆ ಮೇಲ್ ಕಛೇರಿಗಳಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್
ವಿದ್ಯಾರ್ಹತೆ:
- ಪೋಸ್ಟಲ್ ಅಸಿಸ್ಟೆಂಟ್: ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.
- ಪೋಸ್ಟ್ಮ್ಯಾನ್:ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.
- ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾಗಿರಬೇಕು.
ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ವಯೋಮಿತಿ
- ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆ: ನವೆಂಬರ್ 25, 2021ಕ್ಕೆ ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.
- ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ: ನವೆಂಬರ್ 25, 2021ಕ್ಕೆ ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.
ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ವೇತನ
- ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ - ಮಾಸಿಕ ₹ 25,500-81,100
- ಪೋಸ್ಟ್ಮ್ಯಾನ್ - ಮಾಸಿಕ ₹ 21,700-69,100
- ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ- ಮಾಸಿಕ ₹ 18,000-56,900
ಇದನ್ನೂ ಓದಿ: India Post Recruitment 2021: ಮಾಸಿಕ ವೇತನ ₹ 81,100, ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ
ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (
www.indiapost.gov.in) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಭ್ಯರ್ಥಿಗಳು ತಮ್ಮ ಸಂಬಂಧಿತ ದಾಖಲೆಗಳೊಂದಿಗೆ ಪೋಸ್ಟ್ ಮೂಲಕ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು.
ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ (ಸ್ಟಾಫ್)
O/o ಚೀಫ್ ಪೋಸ್ಟ್ ಮಾಸ್ಟರ್ ಜನರಲ್
ಜಾರ್ಖಂಡ್ ಸರ್ಕಲ್, ರಾಂಚಿ- 834002
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ