India Post Recruitment 2021:ತಿಂಗಳಿಗೆ ₹ 81,000 ಸಂಬಳ; SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
India Post Recruitment 2021: ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)​, ಪೋಸ್ಟ್​​ಮ್ಯಾನ್(Post Man)​​, ಪೋಸ್ಟಲ್​​ ಅಸಿಸ್ಟೆಂಟ್(Postal Assistant)​​, ಸಾರ್ಟಿಂಗ್​ ಅಸಿಸ್ಟೆಂಟ್(Sorting Assistant)​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆಫ್​ಲೈನ್(Offline-Postal)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಡಿ ನೀಡಬಹುದಾಗಿದೆ.



ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಛತ್ತೀಸ್​​ಗಢ ಪೋಸ್ಟಲ್ ಸರ್ಕಲ್​
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್
ಒಟ್ಟು ಹುದ್ದೆಗಳು12
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ ಮತ್ತು ಪದವಿ
ಉದ್ಯೋಗದ ಸ್ಥಳಛತ್ತೀಸ್​ಗಢ
ವೇತನಮಾಸಿಕ ₹ 25,000-81,000
ಅರ್ಜಿ ಸಲ್ಲಿಸುವ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ25/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03/12/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/12/2021

ಇದನ್ನೂ ಓದಿ: Bank of Baroda: ತಿಂಗಳಿಗೆ ₹ 89,890 ಸಂಬಳ; BE, B Tech ಅಭ್ಯರ್ಥಿಗಳಿಗೆ ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗ

ಅರ್ಜಿ ಶುಲ್ಕ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:

  • ಮಲ್ಟಿ ಟಾಸ್ಕಿಂಗ್ ಸ್ಟಾಫ್​-03

  • ಪೋಸ್ಟ್​​ಮ್ಯಾನ್​​-04

  • ಪೋಸ್ಟಲ್​​ ಅಸಿಸ್ಟೆಂಟ್​​/ಸಾರ್ಟಿಂಗ್​ ಅಸಿಸ್ಟೆಂಟ್- 05




ವಿದ್ಯಾರ್ಹತೆ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಈ ಕೆಳಕಂಡ ರೀತಿಯಲ್ಲಿ ಇರಬೇಕು.

  • ಮಲ್ಟಿ ಟಾಸ್ಕಿಂಗ್ ಸ್ಟಾಫ್​- 18-25 ವರ್ಷ

  • ಉಳಿದ ಹುದ್ದೆಗಳಿಗೆ-18-27 ವರ್ಷ


ವೇತನ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,000-81,000ದವರೆಗೆ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Rashtrapati Bhawan Recruitment 2021: ತಿಂಗಳಿಗೆ ₹ 29,200 ಸಂಬಳ; SSLC ಪಾಸಾದವರಿಗೆ ರಾಷ್ಟ್ರಪತಿ ಭವನದಲ್ಲಿ ಉದ್ಯೋಗ

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅಸಿಸ್ಟೆಂಟ್​ ಡೈರೆಕ್ಟರ್ (ಸ್ಟಾಫ್​), O/o ಚೀಫ್​ ಪೋಸ್ಟ್​ಮಾಸ್ಟರ್​ ಜನರಲ್
ಛತ್ತೀಸ್​​ಗಢ ಸರ್ಕಲ್
ರಾಯ್ಪುರ-492001



ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: