India Post Recruitment 2021: ಮಾಸಿಕ ವೇತನ ₹ 81,100, ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
India Post Recruitment 2021: ಭಾರತೀಯ ಅಂಚೆ ಇಲಾಖೆ(India Postal Department)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಉದ್ಯೋಗ ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ದೆಹಲಿ ಪೋಸ್ಟ್​ ಆಫೀಸ್ ಸರ್ಕಲ್(Delhi Post Office Circle)​ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಒಟ್ಟು 220 ಪೋಸ್ಟಲ್​ ಅಸಿಸ್ಟೆಂಟ್(Postal Assistant), ಪೋಸ್ಟ್​ಮ್ಯಾನ್(Postman)​ ಮತ್ತು ಮಲ್ಟಿ ಟಾಸ್ಕಿಂಗ್​ ಸ್ಟಾಫ್(Multi Tasking Staff)​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಕ್ರೀಡಾ ಕೋಟಾ(Sports Quota)ದಡಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

































ಸಂಸ್ಥೆಭಾರತೀಯ ಅಂಚೆ ಇಲಾಖೆ
ಹುದ್ದೆಯ ಹೆಸರುಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್​ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆಗಳು220
ವಯೋಮಿತಿ18-25 ವರ್ಷ
ವೇತನಮಾಸಿಕ ₹ 81,100
ಅರ್ಜಿ ಸಲ್ಲಿಕೆ ವಿಧಾನ ಆಫ್​ಲೈನ್​
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ12/11/2021

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಟಿ ನೀಡಬಹುದು.

ಅರ್ಹ ಕ್ರೀಡಾಪಟುಗಳ ನೇಮಕಾತಿಯನ್ನು ಈ ಕೆಳಗಿನ ಹುದ್ದೆಗಳಿಗೆ ಮಾಡಲಾಗುತ್ತದೆ

  • ಅಂಚೆ ಕಛೇರಿಗಳು ಅಥವಾ ರೈಲ್ವೆ ಮೇಲ್ ಕಛೇರಿಗಳಲ್ಲಿ ಪೋಸ್ಟಲ್ / ವಿಂಗಡಣೆ ಸಹಾಯಕ

  • ಅಂಚೆ ಕಛೇರಿಗಳಲ್ಲಿ ಪೋಸ್ಟ್​ಮ್ಯಾನ್​

  • ಅಂಚೆ ಕಛೇರಿಗಳು ಅಥವಾ ರೈಲ್ವೆ ಮೇಲ್ ಕಛೇರಿಗಳಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್​


ಇದನ್ನೂ ಓದಿ:Southern Railway Recruitment 2021: ಪಿಯುಸಿ ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ಉದ್ಯೋಗ; ಮಾಸಿಕ ವೇತನ ₹ 30,000

ವಿದ್ಯಾರ್ಹತೆ:

  • ಪೋಸ್ಟಲ್​ ಅಸಿಸ್ಟೆಂಟ್: ಮಾನ್ಯತೆ ಪಡೆದ ಬೋರ್ಡ್​/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.

  • ಪೋಸ್ಟ್​ಮ್ಯಾನ್​:ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು.

  • ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾನ್ಯತೆ ಪಡೆದ ಬೋರ್ಡ್​/ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾಗಿರಬೇಕು.


ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ಹುದ್ದೆಯ ವಿವರಗಳು

  • ಅಂಚೆ ಸಹಾಯಕ/ಪೋಸ್ಟಲ್​ ಅಸಿಸ್ಟೆಂಟ್​​ - 72

  • ಪೋಸ್ಟ್​ಮ್ಯಾನ್​​ - 90

  • ಮಲ್ಟಿ ಟಾಸ್ಕಿಂಗ್ ಸ್ಟಾಪ್​- 59


ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ವಯಸ್ಸಿನ ಮಿತಿ

  • ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆ: ನವೆಂಬರ್ 12, 2021ಕ್ಕೆ ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.

  • ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ: ನವೆಂಬರ್ 12, 2021ಕ್ಕೆ ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.


ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ವೇತನ

ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ - ಮಾಸಿಕ ₹ 25,500-81,100
ಪೋಸ್ಟ್‌ಮ್ಯಾನ್ - ಮಾಸಿಕ ₹ 21,700-69,100
ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ- ಮಾಸಿಕ ₹ 18,000-56,900

ಇದನ್ನೂ ಓದಿ: India Postal Recruitment 2021: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ, ತಿಂಗಳಿಗೆ ₹81,000 ಸಂಬಳ

ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ (www.indiapost.gov.in) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಭ್ಯರ್ಥಿಗಳು ತಮ್ಮ ಸಂಬಂಧಿತ ದಾಖಲೆಗಳೊಂದಿಗೆ ಪೋಸ್ಟ್ ಮೂಲಕ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು.

ಎಡಿ, O/o ಸಿಪಿಎಂಜಿ,
ದೆಹಲಿ ಸರ್ಕಲ್,
ಮೇಘಧೂತ ಭವನ,
ನವದೆಹಲಿ- 110001



ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: