India Post GDS Recruitment 2021: 10ನೇ ತರಗತಿ ಪಾಸಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ appost.in ಗೆ ಭೇಟಿ ನೀಡಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
India Post GDS Recruitment 2021: ಭಾರತೀಯ ಅಂಚೆ ಇಲಾಖೆ(India Post Office)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಆಹ್ವಾನಿಸಲಾಗಿದೆ. ಒಟ್ಟು 266 ಗ್ರಾಮೀಣ ಡಕ್ ಸೇವಕ್(Gramin Dak Sevak-GDS) ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 30ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ appost.in ಗೆ ಭೇಟಿ ನೀಡಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ಅಂಚೆ ಇಲಾಖೆ
ಹುದ್ದೆಯ ಹೆಸರುಗ್ರಾಮೀಣ ಡಕ್ ಸೇವಕ್(GDS)
ಒಟ್ಟು ಹುದ್ದೆಗಳು266
ವಯೋಮಿತಿ18-40 ವರ್ಷ
ವಿದ್ಯಾರ್ಹತೆ10ನೇ ತರಗತಿ ಉತ್ತೀರ್ಣ
ಉದ್ಯೋಗದ ಸ್ಥಳಜಮ್ಮು & ಕಾಶ್ಮೀರ
ಅರ್ಜಿ ಸಲ್ಲಿಸುವ ಬಗೆಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ30/09/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ29/10/2021

ಅಂಚೆ ಇಲಾಖೆಯಲ್ಲಿ ಒಟ್ಟು 266 ಗ್ರಾಮೀಣ ಡಕ್ ಸೇವಕ್, ಬ್ರಾಂಚ್ ಪೋಸ್ಟ್​ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್​ ಮತ್ತು ಡಕ್ ಸೇವಕ್ ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ:UPSC Recruitment 2021: ಯುಪಿಎಸ್​ಸಿ ನೇಮಕಾತಿ, ತಿಂಗಳಿಗೆ ₹1,82,400 ಸಂಬಳ; 64 ಹುದ್ದೆಗಳು ಖಾಲಿ

ವಿದ್ಯಾರ್ಹತೆ:

 • ಅಭ್ಯರ್ಥಿಯು ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಪಾಸಿಂಗ್ ಮಾರ್ಕ್ಸ್​​ನೊಂದಿಗೆ 10 ನೇ ತರಗತಿ ಪಾಸಾಗಿರಬೇಕು ಮತ್ತು ಕಡ್ಡಾಯವಾಗಿ ಪ್ರಮಾಣಪತ್ರವನ್ನು ಹೊಂದಿರಬೇಕು.

 • ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು ಕನಿಷ್ಠ 10 ನೇ ತರಗತಿಯವರೆಗೆ [ಕಡ್ಡಾಯ ಅಥವಾ ಚುನಾಯಿತ ವಿಷಯಗಳಾಗಿ] ಅಧ್ಯಯನ ಮಾಡಿರಬೇಕು.

 • ಅಭ್ಯರ್ಥಿಯು ಯಾವುದೇ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಕನಿಷ್ಠ 60 ದಿನಗಳ ಅವಧಿಯ ಮೂಲ ಕಂಪ್ಯೂಟರ್ ತರಬೇತಿ ಕೋರ್ಸ್ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ.


ಅರ್ಜಿ ಶುಲ್ಕ:

 • ಅಧಿಸೂಚನೆ ಪ್ರಕಾರ, ಒಬಿಸಿ, ಇಡಬ್ಲ್ಯೂಎಸ್​ ಮತ್ತು ಪುರುಷ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ಇರುತ್ತದೆ.

 • ಎಸ್​ಸಿ, ಎಸ್​ಟಿ, ಪಿಡಬ್ಲೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

 • ಅಭ್ಯರ್ಥಿಗಳು ಆನ್​ಲೈನ್​ ಮೋಡ್ ಮತ್ತು ಆಫ್​ಲೈನ್​ ಮೋಡ್​ ಎರಡರಲ್ಲೂ ಅರ್ಜಿ ಶುಲ್ಕ ಪಾವತಿಸಬಹುದು.


ಇದನ್ನೂ ಓದಿ:Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, 12th ಪಾಸಾಗಿದ್ರೆ ಸಾಕು, ಭಾರತೀಯ ಸೇನೆಯಲ್ಲಿ ಉದ್ಯೋಗ

ಅರ್ಜಿ ಸಲ್ಲಿಸುವುದು ಹೇಗೆ?

 • ಹಂತ 1- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ appost.inಗೆ ಲಾಗ್ ಇನ್ ಆಗಿ.

 • ಹಂತ 2- ಬಳಿಕ ನಿಮ್ಮ ಹೆಸರನ್ನು ನೋಂದಾಯಿಸಿ.

 • ಹಂತ 3- ಅಗತ್ಯ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ‘ಸಬ್​ಮಿಟ್​‘ ಬಟನ್ ಕ್ಲಿಕ್ ಮಾಡಿ.

 • ಹಂತ 4- ಅರ್ಜಿ ಶುಲ್ಕವನ್ನು ಪಾವತಿಸಿ.

 • ಹಂತ 5- ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: