Income Tax Department Recruitment: ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ; ಪಿಯುಸಿ, ಪದವಿ ಆದವರಿಗೆ ಉತ್ತಮ ಅವಕಾಶ

ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕೆಳಗಂಡ ವಿಳಾಸಕ್ಕೆ ನವೆಂಬರ್​ 15ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು

ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ

ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ

  • Share this:
    ಆದಾಯತೆರಿಗೆ ಇಲಾಖೆಯಲ್ಲಿ (Income Tax Department Recruitment )ಖಾಲಿ ಇರುವ 21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕರು ಮತ್ತು ಸ್ಟೆನೋಗ್ರಾಫರ್​ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನವೆಂಬರ್​ 15 ಆಗಿದೆ. ಕೇಂದ್ರ ಸರ್ಕಾರದಲ್ಲಿ ಹುದ್ದೆ ಮಾಡಬೇಕು ಎಂಬ ಇಚ್ಛೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ನವದೆಹಲಿಯ ಕಚೇರಿಗೆ ಈ ನೇಮಕಾತಿ ನಡೆಯಲಿದ್ದು, ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು

    ಹುದ್ದೆ ಕುರಿತು ವಿವರ (Job Details)























    ಹುದ್ದೆಗಳು ಹುದ್ದೆ ಸಂಖ್ಯೆ ವಿದ್ಯಾರ್ಹತೆ
    ತೆರಿಗೆ ಸಹಾಯಕರು 11 ಪದವಿ
    ಸ್ಟೆನೋಗ್ರಾಫರ್​ 5 ಪಿಯುಸಿ
    ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ 5 10ನೇ ತರಗತಿ

    ವೇತನ (Salary)
    ಆಯ್ಕೆಯಾದ ಅಭ್ಯರ್ಥಿಗಳಿಗೆ 5200 ರಿಂದ 20200ರವರೆಗೆ ತಿಂಗಳ ವೇತನ ಇರಲಿದೆ

    ವಯೋಮಿತಿ (age limit)
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷ ತುಂಬಿದ್ದು, ಗರಿಷ್ಠ ವಯೋಮಿತಿ 27 ದಾಟಿರಬಾರದು.

    ವಯೋಮಿತಿ ಸಡಿಲಿಕೆ (Age relaxation)
    ಸರ್ಕಾರದ ನಿಯಮಾವಳಿಗಳಂತೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, ಎಸ್​ಸಿ ಎಸ್​ಟಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ

    ಇದನ್ನು ಓದಿ: FSSAI ನಲ್ಲಿ 225 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

    ಆಯ್ಕೆ ವಿಧಾನ (Selection Process)
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ರಾಜ್ಯ ಖನಿಜ ನಿಗಮದಲ್ಲಿ ನೇಮಕಾತಿ; ತಿಂಗಳಿಗೆ 55 ಸಾವಿರ ವೇತನ

    ಅರ್ಜಿ ಸಲ್ಲಿಕೆ ವಿಧಾನ (how to apply)
    ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕೆಳಗಂಡ ವಿಳಾಸಕ್ಕೆ ನವೆಂಬರ್​ 15ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು
    ಆದಾಯ ತೆರಿಗೆ ಉಪ ಆಯುಕ್ತರು (Hqrs.) (ಸಿಬ್ಬಂದಿ) (NG), 3 ನೇ ಮಹಡಿ, ಕೊಠಡಿ ಸಂಖ್ಯೆ 378A, ಕೇಂದ್ರ ಆದಾಯ ಕಟ್ಟಡ, I.P. ಎಸ್ಟೇಟ್, ನವದೆಹಲಿ - 110002

    ವಿಶೇಷ ಮಾಹಿತಿ (Special  informantin)
    ಈಶಾನ್ಯ ರಾಜ್ಯಗಳು, ಅಂಡಮಾನ್​ ಮತ್ತು ನಿಕೋಬರ್​ ದ್ವೀಪ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್ ಆಗಿದೆ.

    ಪ್ರಮುಖ ಲಿಂಕ್​ಗಳು (important link)
    ಹುದ್ದೆ ಕುರಿತು ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: