• Home
  • »
  • News
  • »
  • jobs
  • »
  • JOB ALERT: ನೀವು 10ನೇ ತರಗತಿ ಪಾಸಾಗಿದ್ರೆ 20 ಸಾವಿರ ಸಂಬಳ ಸಿಗುತ್ತೆ, ಇಲ್ಲಿದೆ ಉದ್ಯೋಗ ಮಾಹಿತಿ

JOB ALERT: ನೀವು 10ನೇ ತರಗತಿ ಪಾಸಾಗಿದ್ರೆ 20 ಸಾವಿರ ಸಂಬಳ ಸಿಗುತ್ತೆ, ಇಲ್ಲಿದೆ ಉದ್ಯೋಗ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 22, 2022 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅಪ್ಲಿಕೇಶನ್ ಹಾಕಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಬಂಪರ್ ಅವಕಾಶವಾಗಿದೆ.

  • Share this:

    Income Tax Department Recruitment 2022: ಆದಾಯ ತೆರಿಗೆ ಇಲಾಖೆ(Income Tax Department)ಯ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 24 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff), ಟ್ಯಾಕ್ಸ್​ ಅಸಿಸ್ಟೆಂಟ್(Tax Assistant) ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ನವೆಂಬರ್ 22, 2022 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ (Offline)ಮೂಲಕ ಅಪ್ಲಿಕೇಶನ್ ಹಾಕಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಬಂಪರ್ ಅವಕಾಶವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಆದಾಯ ತೆರಿಗೆ ಇಲಾಖೆ
    ಹುದ್ದೆಯ ಹೆಸರುಎಂಟಿಎಸ್, ಟ್ಯಾಕ್ಸ್ ಅಸಿಸ್ಟೆಂಟ್
    ಒಟ್ಟು ಹುದ್ದೆ24
    ವಿದ್ಯಾರ್ಹತೆ10ನೇ ತರಗತಿ, ಪದವಿ
    ವೇತನಮಾಸಿಕ ₹ 9,300-34,800
    ಸ್ಥಳಪಶ್ಚಿಮ ಬಂಗಾಳ, ಸಿಕ್ಕಿಂ
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ21/10/2022
    ಅರ್ಜಿ ಸಲ್ಲಿಸಲು ಕೊನೆ ದಿನ28/11/2022


    ಹುದ್ದೆಯ ಮಾಹಿತಿ:
    ಆದಾಯ ತೆರಿಗೆ ಇನ್​ಸ್ಪೆಕ್ಟರ್-1
    ತೆರಿಗೆ ಸಹಾಯಕ-5
    ಮಲ್ಟಿ ಟಾಸ್ಕಿಂಗ್ ಸ್ಟಾಫ್-18


    ಇದನ್ನೂ ಓದಿ: Banking Jobs: ಪಂಜಾಬ್​ & ಸಿಂದ್​ ಬ್ಯಾಂಕ್​ನಲ್ಲಿವೆ 50 ಹುದ್ದೆಗಳು, ತಿಂಗಳಿಗೆ 78 ಸಾವಿರ ಸಂಬಳ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಆದಾಯ ತೆರಿಗೆ ಇನ್​ಸ್ಪೆಕ್ಟರ್-ಪದವಿ
    ತೆರಿಗೆ ಸಹಾಯಕ-ಪದವಿ
    ಮಲ್ಟಿ ಟಾಸ್ಕಿಂಗ್ ಸ್ಟಾಫ್-10ನೇ ತರಗತಿ/SSLC


    ವಯೋಮಿತಿ:
    ಆದಾಯ ತೆರಿಗೆ ಇನ್​ಸ್ಪೆಕ್ಟರ್: 18-30 ವರ್ಷ
    ತೆರಿಗೆ ಸಹಾಯಕ: 18-27 ವರ್ಷ
    ಮಲ್ಟಿ ಟಾಸ್ಕಿಂಗ್ ಸ್ಟಾಫ್: 18-25 ವರ್ಷ


    ವಯೋಮಿತಿ ಸಡಿಲಿಕೆ:
    ಮೆರಿಟಾರಿಯಸ್ ಸ್ಪೋರ್ಟ್ಸ್​ ಪರ್ಸನ್ಸ್ ಅಭ್ಯರ್ಥಿಗಳು​- 5 ವರ್ಷ
    ಮೆರಿಟಾರಿಯಸ್ ಸ್ಪೋರ್ಟ್ಸ್​ ಪರ್ಸನ್ಸ್​(ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು- 10 ವರ್ಷ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸ್ಕಿಲ್ ಟೆಸ್ಟ್​
    ಸಂದರ್ಶನ


    ಇದನ್ನೂಓದಿ: M.Sc ಆಗಿದ್ರೆ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿ, ಮಾಸಿಕ ವೇತನ ₹ 45,000


    ವೇತನ:
    ಆದಾಯ ತೆರಿಗೆ ಇನ್​ಸ್ಪೆಕ್ಟರ್-ಮಾಸಿಕ ₹ 9,300-34,800
    ತೆರಿಗೆ ಸಹಾಯಕ- ಮಾಸಿಕ ₹ 5,200-20,200
    ಮಲ್ಟಿ ಟಾಸ್ಕಿಂಗ್ ಸ್ಟಾಫ್- ಮಾಸಿಕ ₹ 5,200-20,200


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಆದಾಯ ತೆರಿಗೆಯ ಜಂಟಿ ಆಯುಕ್ತರು
    ಪ್ರಧಾನ ಕಚೇರಿ (ಸಿಬ್ಬಂದಿ & ಸ್ಥಾಪನೆ)
    1ನೇ ಮಹಡಿ, ಕೊಠಡಿ ಸಂಖ್ಯೆ-14
    ಆಯಕರ್ ಭವನ, ಪಿ-7
    ಚೌರಿಂಗ್ಘೀ ಸ್ಕ್ವೇರ್,
    ಕೊಲ್ಕತ್ತಾ-700069


    ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ incometaxindia.gov.in ಗೆ ಭೇಟಿ ನೀಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 28/11/2022

    Published by:Latha CG
    First published: