Income Tax Department Recruitment 2021: 10ನೇ ತರಗತಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಬಂಪರ್ ಉದ್ಯೋಗ

ನವೆಂಬರ್ 15 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಆದರೆ ಜಮ್ಮು -ಕಾಶ್ಮೀರ, ಕೇರಳ, ಲಕ್ಷದ್ವೀಪ, ಅಂಡಮಾನ್​ ನಿಕೋಬಾರ್ ದ್ವೀಪದ ಅಭ್ಯರ್ಥಿಗಳು ನವೆಂಬರ್ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆ

  • Share this:
Income Tax Department 2021: ಆದಾಯ ತೆರಿಗೆ ಇಲಾಖೆ(Income Tax Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಟ್ಯಾಕ್ಸ್​ ಅಸಿಸ್ಟೆಂಟ್(Tax Assistant), ಸ್ಟೆನೊಗ್ರಾಫರ್ ಗ್ರೇಡ್-2(Stenographer Grade -2), ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನವೆಂಬರ್ 15 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಆದರೆ ಜಮ್ಮು -ಕಾಶ್ಮೀರ, ಕೇರಳ, ಲಕ್ಷದ್ವೀಪ, ಅಂಡಮಾನ್​ ನಿಕೋಬಾರ್ ದ್ವೀಪದ ಅಭ್ಯರ್ಥಿಗಳು ನವೆಂಬರ್ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಆದಾಯ ತೆರಿಗೆ ಇಲಾಖೆ
ಹುದ್ದೆಯ ಹೆಸರುಟ್ಯಾಕ್ಸ್​ ಅಸಿಸ್ಟೆಂಟ್, ಸ್ಟೆನೊಗ್ರಾಫರ್ ಗ್ರೇಡ್-2, ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆಗಳು21
ವಿದ್ಯಾರ್ಹತೆಪದವಿ, 12th, 10th ಉತ್ತೀರ್ಣ
ವಯೋಮಿತಿ18-27
ಅರ್ಜಿ ಸಲ್ಲಿಸುವ ವಿಧಾನಆಫ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/11/2021ಹುದ್ದೆಯ ಮಾಹಿತಿ:

  • ಟ್ಯಾಕ್ಸ್​ ಅಸಿಸ್ಟೆಂಟ್ - 11

  • ಸ್ಟೆನೊಗ್ರಾಫರ್ -5

  • ಮಲ್ಟಿ ಟಾಸ್ಕಿಂಗ್ ಸ್ಟಾಫ್ -5


ಇದನ್ನೂ ಓದಿ:India Post Recruitment 2021: ಮಾಸಿಕ ವೇತನ ₹80,000; 10th, 12th ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

ವಿದ್ಯಾರ್ಹತೆ:

  • ಟ್ಯಾಕ್ಸ್​ ಅಸಿಸ್ಟೆಂಟ್​ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಪ್ರತಿ ಗಂಟೆಗೆ 8000 ಪ್ರಮುಖ ಡಿಪ್ರೆಶನ್​ಗಳ ಡೇಟಾ ಎಂಟ್ರಿ ಸ್ಪೀಡ್​ನ್ನು ಹೊಂದಿರಬೇಕು.

  • ಸ್ಟೆನೊಗ್ರಾಫರ್: ಮಾನ್ಯತೆ ಪಡೆದ ಬೋರ್ಡ್​​ನಿಂದ ದ್ವಿತೀಯ ಪಿಯುಸಿ ಪಾಸಾಗಿರಬೇಕು.

  • ಮಲ್ಟಿ ಟಾಸ್ಕಿಂಗ್ ಸ್ಟಾಫ್:ಮಾನ್ಯತೆ ಪಡೆದ ಬೋರ್ಡ್​​ನಿಂದ 10ನೇ ತರಗತಿ ಪಾಸಾಗಿರಬೇಕು.


ವಯೋಮಿತಿ:

  • ಟ್ಯಾಕ್ಸ್​ ಅಸಿಸ್ಟೆಂಟ್, ಸ್ಟೆನೊಗ್ರಾಫರ್ ಗ್ರೇಡ್-2, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.

  • OBC ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • SC/ST ವರ್ಗದ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.


ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಸೂಕ್ತ ವಿಳಾಸಕ್ಕೆ ಕಳುಹಿಸಬೇಕು.

ಇದನ್ನೂ ಓದಿ:BEL Recruitment 2021: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​ನಲ್ಲಿ 73 ಅಪ್ರೆಂಟಿಸ್​ ಹುದ್ದೆಗಳು ಖಾಲಿ; ಈಗಲೇ ಅರ್ಜಿ ಸಲ್ಲಿಸಿ

10ನೇ ತರಗತಿ ಅಂಕಪಟ್ಟಿ, ಕ್ರೀಡಾ ಪ್ರಮಾಣ ಪತ್ರ, ಆಧಾರ್​ ಕಾರ್ಡ್ ಪ್ರತಿ, SC/ST/OBC ಜಾತಿ ಪ್ರಮಾಣ ಪತ್ರ, ಗೆಜೆಟೆಡ್ ಆಫೀಸರ್​ನಿಂದ ಸಹಿ ಪಡೆದಿರುವ ಪ್ರತಿ ಹಾಗೂ ಫೋಟೋ-- ಇಷ್ಟು ದಾಖಲೆಗಳೊಂದಿಗೆ

ಡೆಪ್ಯುಟಿ ಕಮಿಷನರ್,
ಆದಾಯ ತೆರಿಗೆ ಇಲಾಖೆ
3ನೇ ಅಂತಸ್ತು,
ರೂಂ ನಂಬರ್ 378 A,
ಸೆಂಟ್ರಲ್​ ರೆವಿನ್ಯೂ ಬಿಲ್ಡಿಂಗ್, ಐ.ಪಿ ಎಸ್ಟೇಟ್
ನವದೆಹಲಿ- 110002

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: