ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಸ್ವೀಡನ್ ಮೂಲದ ಐಕಿಯ (IKEA Bengaluru) ಪಿಠೋಪಕರಣಗಳ ಮಳಿಗೆಗೆ ವಿವಿಧ ಹುದ್ದೆಗಳ (Jobs) ನೇಮಕಾತಿ ಕುರಿತು ಕಂಪನಿ ಪ್ರಕಟಣೆ ಹೊರಡಿಸಿದೆ. ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಸಂಸ್ಥೆ ಮುಂದಾಗಿದೆ. ಈಗಾಗಲೇ ಸಂಸ್ಥೆ 72 ಪ್ರತಿಶತ ಸ್ಥಳೀಯ ಉದ್ಯೋಗಿಗಳೊಂದಿಗೆ 1000 ನೌಕರರನ್ನು ನೇಮಕ ಮಾಡಿದ್ದು, ಇನ್ನು ಹಲವು ಹುದ್ದೆಗಳ ಭರ್ತಿಗೆ ಮುಂದಾಗಿದೆ.
ಐಕಿಯ ಮಳಿಗೆಯಲ್ಲಿ ಕಾರ್ಯ ನಿರ್ವಹಿಸಲು ಪೂರ್ಣ ಕಾಲಿಕ ಮತ್ತು ಅರೆ ಕಾಲಿಕ ಸ್ಥಳೀಯರನ್ನು ನೇಮಿಸಿಕೊಳ್ಳುವ ಸಂಬಂಧ ಕಂಪನಿ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟಿಸಿದೆ. ಆಸಕ್ತ ಮತ್ತು ಸ್ಥಳೀಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ
ಹುದ್ದೆ ಮಾಹಿತಿ |
ಹುದ್ದೆ ವಿವರ |
ಸಂಸ್ಥೆ |
ಐಕಿಯ |
ಹುದ್ದೆಗಳು |
ವಿವಿಧ ಮ್ಯಾನೇಜರ್ ಹುದ್ದೆಗಳು |
ಹುದ್ದೆಗಳ ಸಂಖ್ಯೆ |
ನಿರ್ದಿಷ್ಟಪಡಿಸಿಲ್ಲ |
ಕಾರ್ಯ ನಿರ್ವಹಣೆ ಸ್ಥಳ |
ಬೆಂಗಳೂರು |
ವೇತನ |
ಐಕಿಯಾ ಕಂಪನಿ ನಿಯಮ ಅನುಸಾರ |
ಹುದ್ದೆಗಳು
ಸಪ್ಲೈ ಪ್ಲಾನರ್, ಜವಳಿ ಕಾರ್ಪೆಟ್ಗಳು
ಸಪ್ಲೈ ಪ್ಲಾನರ್, ಜವಳಿ ಉತ್ಪನ್ನಗಳು
ಸಪ್ಲೈ ಪ್ಲಾನರ್, ವರ್ಗ ಪ್ರದೇಶ -ಮೆಟಲ್, ಪ್ಲಾಸ್ಟಿಕ್, ಫ್ಲೋಟ್ ಗ್ಲಾಸ್ ಮತ್ತು ಎಲೆಕ್ಟ್ರಾನಿಕ್ಸ್
ಪ್ರಾಜೆಕ್ಟ್ ಲೀಡರ್ (ವಿಸ್ತರಣೆ ಲಾಜಿಸ್ಟಿಕ್ಸ್)
ಉತ್ಪನ್ನ ಅನುಸರಣೆ ತಜ್ಞ
ಮಲ್ಟಿಚಾನಲ್ ನೆಟ್ವರ್ಕ್ ಪ್ರಾಜೆಕ್ಟ್ ಮ್ಯಾನೇಜರ್
ಹಿರಿಯ ಸೈಬರ್ ಇಂಜಿನಿಯರ್
ಸೈಬರ್ ಇಂಜಿನಿಯರ್
ಸರ್ವಿಸ್ ಫುಲ್ಫಿಲ್ಮೆಂಟ್ ಆಪರೇಷನ್ ಡೆವಲಪರ್
ಮಾರಾಟ ಸಹೋದ್ಯೋಗಿ (ಮೂಲ ತಂಡ)
ಪಬ್ಲಿಕ್ ರಿಲೇಷನ್ ಲೀಡರ್
ಉತ್ತರಾಧಿಕಾರ ಯೋಜನೆ ತಜ್ಞ
ಸೇವಾ ವ್ಯಾಪಾರ ವಸಾಹತು ಜೂನಿಯರ್ ಸ್ಪೆಷಲಿಸ್ಟ್
ಗೂಡ್ಸ್ ಫ್ಲೋ ಟೀಮ್ ಲೀಡರ್ - ವಿಆರ್ ಮಾಲ್
SSS ತಂಡ-ನಾಯಕ - VR ಮಾಲ್
ಇದನ್ನು ಓದಿ: ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ; ನರ್ಸಿಂಗ್ ಮಾಡಿದವರಿಗೆ ಅವಕಾಶ
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹುದ್ದೆ ಅನುಸಾರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಸಂಸ್ಥೆಯ ನಿಯಮಾವಳಿ ಅನುಸಾರ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು.
ಇಂಗ್ಲಿಷ್ನಲ್ಲಿನಲ್ಲಿ ಚೆನ್ನಾಗಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರಬೇಕು.
ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಸ್ಪೂರ್ತಿದಾಯಕವಾಗಿ ಕೆಲಸ ಮಾಡಬೇಕು.
ಅರ್ಜಿ ಸಲ್ಲಿಕೆ
ಆನ್ಲೈನ್ ಮೂಲಕ
ಆಯ್ಕೆ ವಿಧಾನ
ನೇರ ಸಂದರ್ಶನ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 26 ಜೂನ್ 2022
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 2022
ಇದನ್ನು ಓದಿ: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್, ಜವಾನ ಹುದ್ದೆಗೆ ಅರ್ಜಿ ಆಹ್ವಾನ
ಪ್ರಮುಖ ಲಿಂಕ್ಗಳು
ಹುದ್ದೆಗಳ ಅಧಿಸೂಚನೆಗೆ
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ :
ikea.com
ಐಕಿಯ ಮಳಿಗೆಯಲ್ಲಿ ಪ್ರತಿನಿತ್ಯ ಅಭ್ಯರ್ಥಿಗಳ ಆಯ್ಕೆಗೆ ನಿರಂತರವಾಗಿ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನಲೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ಸೂಕ್ತ ಅಭ್ಯರ್ಥಿಗಳು ಸಿಕ್ಕಿದ ಕೂಡಲೇ ಮೇಲೆ ಸೂಚಿಸಿದ ಅರ್ಜಿ ಸಲ್ಲಿಕೆ ದಿನಾಂಕದ ಅವಧಿ ಮೊದಲೇ ಮುಕ್ತಾಯಗೊಳಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ