ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 3 ಪ್ರಾಜೆಕ್ಟ್ ಅಸಿಸ್ಟಂಟ್ (Project Assistant) ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 1 ಆಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಸಂಸ್ಥೆಗೆ ಇ ಮೇಲ್ ಮಾಡಬಹುದಾಗಿದೆ.
ಒಂದು ವರ್ಷದ ಗುತ್ತಿಗೆ ಅವಧಿಗೆ ತಾತ್ಕಾಲಿಕವಾಗಿ ಈ ಹುದ್ದೆ ನೇಮಕ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆ ಮುಂದುವರೆಸಲಾಗುವುದು. ಈ ಹುದ್ದೆಗಳನ್ನು ಚಿತ್ರದುರ್ಗ ಜಿಲ್ಲೆಯ c ಕ್ಯಾಂಪಸ್ಗೆ ಆಯ್ಕೆ ಮಾಡಲಾಗುತ್ತಿದೆ.
ಹುದ್ದೆ ಮಾಹಿತಿ |
ಹುದ್ದೆ ವಿವರ |
ಸಂಸ್ಥೆ |
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) |
ಹುದ್ದೆ |
ಪ್ರಾಜೆಕ್ಟ್ ಅಸಿಸ್ಟೆಂಟ್ |
ಒಟ್ಟು ಹುದ್ದೆ |
3 |
ಕಾರ್ಯ ನಿರ್ವಹಣೆ ಸ್ಥಳ |
ಚಿತ್ರದುರ್ಗ |
ವೇತನ |
25000 ರೂ ಮಾಸಿಕ |
ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಇಇಇ, ಇಸಿಇ, ಮೆಕ್ಯಾನಿಕಲ್, ಎಂಎಸ್ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದಲ್ಲಿ ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನೇಮಕಾತಿ ಅಧಿಸೂಚನೆಯ ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಇದನ್ನು ಓದಿ: ಧಾರವಾಡದಲ್ಲಿ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಹುದ್ದೆ ವಿವರ
ವಯೋಮಿತಿ ಸಡಿಲಿಕೆ:
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 29-07-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01 ಸೆಪ್ಟೆಂಬರ್ 2022
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
iisc.ac.in
ಇದನ್ನು ಓದಿ: ತುಮಕೂರಿನಲ್ಲಿ ಕಂಪ್ಯೂಟರ್ ಆಪರೇಟರ್, ಸಮಾಲೋಚಕರ ಹುದ್ದೆಗೆ ಅರ್ಜಿ ಅಹ್ವಾನ
ಅರ್ಜಿ ಸಲ್ಲಿಕೆ ವಿಧಾನ
- ಮೇಲಿನ ಹುದ್ದೆಗೆ ಸೂಕ್ತ ಮತ್ತು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದತಕ್ಕದು.
- ಅಭ್ಯರ್ಥಿಗಳು ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು, ವಿಫಲವಾದರೆ ಅವರ ಉಮೇದುವಾರಿಕೆ ತಿರಸ್ಕರಿಸಲು ಹೊಣೆಗಾರರಾಗಿದ್ದಾರೆ.
- " ಪ್ರಾಜೆಕ್ಟ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ" ಎಂಬ ವಿಷಯದ ಸಾಲಿನಲ್ಲಿ ಸರಿಯಾಗಿ ಅರ್ಜಿ ಭರ್ತಿ ಮಾಡಿ
- ವಿವರವಾದ ರೆಸ್ಯೂಮ್, ಪದವಿ ಪ್ರಮಾಣಪತ್ರ, ಅಂಕಗಳ ಪ್ರಮಾಣಪತ್ರ ಮತ್ತು ಐಚ್ಛಿಕವಾಗಿ ಮಾದರಿ ಪೋರ್ಟ್ಫೋಲಿಯೊವನ್ನು ಲಗತ್ತಿಸಬೇಕು
- ತಮ್ಮ ಆನ್ಲೈನ್ ಅರ್ಜಿಯಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸುವಂತೆಯೂ ಸೂಚಿಸಲಾಗಿದೆ.
- ನಿಗದಿತ ಮೊದಲು
dnrao@iisc.ac.inಗೆ ಒಂದೇ ಪಿಡಿಎಫ್ ಫೈಲ್ ಮೂಲಕ ಮೇಲ್ ಕಳುಹಿಸಬೇಕು. ಇಲ್ಲ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ
-ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ಸಮಯದ ಬಗ್ಗೆ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಳಾಸ:
ಸಂಚಾಲಕರು, ಟ್ಯಾಲೆಂಟ್ ಡೆವಲಪ್ಮೆಂಟ್ ಸೆಂಟರ್, IISc ಚಳ್ಳಕೆರೆ ಕ್ಯಾಂಪಸ್, ಖುದಾಪುರ, ಚಿತ್ರದುರ್ಗ ಜಿಲ್ಲೆ-577536.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ