IISc Recruitment: ಐಐಎಸ್ಸಿಯಲ್ಲಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕಡೆಯ ದಿನ

ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳು ಸಂಪೂರ್ಣವಾಗಿ ತಾಂತ್ರಿಕೇತರವಾಗಿದೆ.

ಐಐಎಸ್​ಸಿ ಬೆಂಗಳೂರು

ಐಐಎಸ್​ಸಿ ಬೆಂಗಳೂರು

  • Share this:
    ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science -IISc) ತಾಂತ್ರಿಕೇತರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಸಂಸ್ಥೆಯಲ್ಲಿ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ಅಗ್ರ ಶ್ರೇಯಾಂಕಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳು ತಾಂತ್ರಿಕೇತರ ಹುದ್ದೆಗಳಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 31 ಆಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಇ-ಮೇಲ್​ ಮೂಲಕ ಸಲ್ಲಿಸಬಹುದಾಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.




























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಯ ಹೆಸರುಭಾರತೀಯ ವಿಜ್ಞಾನ ಸಂಸ್ಥೆ(IISc)
    ಹುದ್ದೆಯ ಹೆಸರುಟ್ರೈನಿ
    ಹುದ್ದೆಗಳ ಸಂಖ್ಯೆನಿರ್ದಿಷ್ಟಪಡಿಸಲಾಗಿಲ್ಲ
    ಉದ್ಯೋಗ ಸ್ಥಳಬೆಂಗಳೂರು
    ವೇತನಐಐಎಸ್ಸಿ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಐಐಎಸ್ಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ರಕ್ಷಣಾ ಸಚಿವಾಲಯದಲ್ಲಿ ಸ್ಟೆನೋ ಹುದ್ದೆಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿ ನೇಮಕಾತಿ
     ಅನುಭವ: ಈಗಾಗಲೇ ಸಂಬಂಧಿಸಿದ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಹೊಸಬರು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.




    ವಯಸ್ಸಿನ ಮಿತಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
     ಅರ್ಜಿ ಸಲ್ಲಿಕೆ: ಇ ಮೇಲ್​ ಮೂಲಕ

    ಇಮೇಲ್​ ವಿಳಾಸ: hr.sid@iisc.ac.in

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ ಯುಪಿಎಸ್​ಸಿ; ಇಲ್ಲಿದೆ ಮಾಹಿತಿ

    ಹುದ್ದೆಯ ಜವಬ್ದಾರಿ:
    ಅಭ್ಯರ್ಥಿಗಳ ಕಾರ್ಯಕ್ರಮದ ಚಟಿವಟಿಕೆ, ವರ್ಕ್​ಶಾಪ್​ಗಳ ನಿರ್ವಹಣೆ ಮಾಡುವದರ ಜೊತೆಗೆ ಭಾಗಿದಾರರು, ಸ್ಪೀಕರ್​ ಸೇರಿದಂತೆ ಇನ್ನಿತರರ ಜೊತೆಗೆ ಈ ಕುರಿತು ಸಂಯೋಜನೆ ಮಾಡಬೇಕು.
    ಸಂಸ್ಥಾಪಕರ ಜೊತೆ ಉತ್ತಮ ಕಾರ್ಯ ನಿರ್ವಹಣೆ ಮಾಡಬೇಕು.
    ಗುಣಮಟ್ಟ ಮತ್ತು ಪ್ರಮಾಣದ ಮೂಲಕ ಕಾರ್ಯಕ್ರಮದ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಸಹಾಯ ಮಾಡಬೇಕು.

    ಪ್ರಮುಖ ದಿನಾಂಕ
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 18 ಆಗಸ್ಟ್​ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 31 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: iisc.ac.in

    ಅರ್ಜಿ ಸಲ್ಲಿಕೆ ವಿಧಾನ
    - ಮೇಲಿನ ಹುದ್ದೆಗೆ ಸೂಕ್ತ ಮತ್ತು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದತಕ್ಕದು.
    - ಅಭ್ಯರ್ಥಿಗಳು ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು, ವಿಫಲವಾದರೆ ಅವರ ಉಮೇದುವಾರಿಕೆ ತಿರಸ್ಕರಿಸಲು ಹೊಣೆಗಾರರಾಗಿದ್ದಾರೆ.
    - "​​ಟ್ರೈನಿ ಹುದ್ದೆಗೆ ಅರ್ಜಿ" ಎಂಬ ವಿಷಯದ ಸಾಲಿನಲ್ಲಿ ಸರಿಯಾಗಿ ಅರ್ಜಿ ಭರ್ತಿ ಮಾಡಿ
    - ವಿವರವಾದ ರೆಸ್ಯೂಮ್​, ಪದವಿ ಪ್ರಮಾಣಪತ್ರ, ಅಂಕಗಳ ಪ್ರಮಾಣಪತ್ರ ಮತ್ತು ಐಚ್ಛಿಕವಾಗಿ ಮಾದರಿ ಪೋರ್ಟ್ಫೋಲಿಯೊವನ್ನು ಲಗತ್ತಿಸಬೇಕು
    - ನಿಗದಿತ ಮೊದಲು hr.sid@iisc.ac.inಗೆ ಒಂದೇ ಪಿಡಿಎಫ್​​​ ಫೈಲ್ ಮೂಲಕ ಮೇಲ್​ ಕಳುಹಿಸಬೇಕು. ಇಲ್ಲ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ
    -ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ಸಮಯದ ಬಗ್ಗೆ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.


    Published by:Seema R
    First published: