• Home
  • »
  • News
  • »
  • jobs
  • »
  • JOBS: ನೀವು M.Sc ಮಾಡಿದ್ದರೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ ಬಂಪರ್ ಉದ್ಯೋಗ-ಇಲ್ಲಿ Apply ಮಾಡಿ

JOBS: ನೀವು M.Sc ಮಾಡಿದ್ದರೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ ಬಂಪರ್ ಉದ್ಯೋಗ-ಇಲ್ಲಿ Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 5, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    IISc Bangalore Recruitment 2022: ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science) ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಪ್ರಾಜೆಕ್ಟ್​ ಅಸೋಸಿಯೇಟ್ I ಹುದ್ದೆಗಳು ಖಾಲಿ ಇದ್ದು ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಡಿಸೆಂಬರ್ 5, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ವಿಜ್ಞಾನ ಸಂಸ್ಥೆ
    ಹುದ್ದೆ ಪ್ರಾಜೆಕ್ಟ್​ ಅಸೋಸಿಯೇಟ್ I
    ಒಟ್ಟು ಹುದ್ದೆ7
    ಉದ್ಯೋಗದ ಸ್ಥಳಬೆಂಗಳೂರು
    ವೇತನಮಾಸಿಕ 25,000

    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ ಏನಿರಬೇಕು?


    ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: ICTS Recruitment 2022: ನೀವು Ph.D ಮಾಡಿದ್ರೆ ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ-ತಿಂಗಳಿಗೆ 54,000 ಸಂಬಳ


    ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?


    ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 5, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.


    ಅರ್ಜಿ ಶುಲ್ಕ:
    ಶುಲ್ಕ ವಿನಾಯಿತಿ ನೀಡಲಾಗಿದೆ.


    ಹುದ್ದೆಯ ಕುರಿತಾದ ನೋಟಿಫಿಕೇಶನ್ ಇಲ್ಲಿದೆ.


    IISc notification


    ಮೊದಲಿಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತೆ. ಬಳಿಕ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ.


    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 05/12/2022

    Published by:Latha CG
    First published: