IISc Bangalore Recruitment 2021: ಭಾರತೀಯ ವಿಜ್ಞಾನ ಸಂಸ್ಥೆ- ಬೆಂಗಳೂರು(Indian Institute of Science-Bangalore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ(Electronic Resource Management Project Trainee), ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ(Library & Information Management Trainee) ಹುದ್ದೆಗಳು ಖಾಲಿ ಇದ್ದು, ಬಿಇ(BE), ಬಿ.ಟೆಕ್(B Tech), ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ವೆಬ್ಸೈಟ್ www.iisc.ac.in/ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತೀಯ ವಿಜ್ಞಾನ ಸಂಸ್ಥೆ- ಬೆಂಗಳೂರು |
ಹುದ್ದೆಯ ಹೆಸರು |
ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ, ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ |
ಒಟ್ಟು ಹುದ್ದೆಗಳು |
14 |
ವಿದ್ಯಾರ್ಹತೆ |
ಬಿಇ, ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ |
ಉದ್ಯೋಗದ ಸ್ಥಳ |
ಬೆಂಗಳೂರು |
ವೇತನ |
ಮಾಸಿಕ ₹ 25,000 |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
23/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
14/12/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/12/2021
ಇದನ್ನೂ ಓದಿ: Shivamogga Court Jobs: ತಿಂಗಳಿಗೆ ₹ 37,900 ಸಂಬಳ, SSLC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ
ಹುದ್ದೆಯ ಮಾಹಿತಿ:
ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ- 12
ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ-02
ಒಟ್ಟು -14 ಹುದ್ದೆಗಳು
ವಿದ್ಯಾರ್ಹತೆ:
ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಕಡ್ಡಾಯವಾಗಿ ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿರಬೇಕು.
ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ-ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.
ಇದನ್ನೂ ಓದಿ: AIISH Mysore Recruitment 2021: ಮೈಸೂರು ವಾಕ್-ಶ್ರವಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ:
ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ, ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು.
ವೇತನ:
ಎಲೆಕ್ಟ್ರಾನಿಕ್ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಟ್ರೇನಿ, ಲೈಬ್ರರಿ & ಇನ್ಫರ್ಮೇಶನ್ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,000 ವೇತನ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ