ತಿಂಗಳಿಗೆ ₹ 49,000 ಸಂಬಳ, IISc Bangaloreನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆ

  • Share this:
ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)-ಬೆಂಗಳೂರಿನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 8 ಸೀನಿಯರ್ ಎಂಜಿನಿಯರ್, ಸೀನಿಯರ್ ಸಿಸ್ಟಂ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್​, ಎಂಎಸ್ಸಿ, ಎಂಇ, ಎಂಸಿಎ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ವೆಬ್​ಸೈಟ್​​ www.iisc.ac.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು
ಹುದ್ದೆಯ ಹೆಸರುಸೀನಿಯರ್ ಎಂಜಿನಿಯರ್, ಸೀನಿಯರ್ ಸಿಸ್ಟಂ ಎಂಜಿನಿಯರ್
ಒಟ್ಟು ಹುದ್ದೆಗಳು8
ವಿದ್ಯಾರ್ಹತೆಬಿಇ, ಬಿ.ಟೆಕ್​, ಎಂಎಸ್ಸಿ, ಎಂಇ, ಎಂಸಿಎ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 25,000-49,000
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ17/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04/01/2022



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/01/2022

ಇದನ್ನೂ ಓದಿ: Bengaluru Metro: SSLC ಪಾಸಾದವರಿಗೆ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ, ತಿಂಗಳಿಗೆ ₹ 60,000 ಸಂಬಳ

ಹುದ್ದೆಯ ಮಾಹಿತಿ:
ಸಿಸ್ಟಂ ಎಂಜಿನಿಯರ್-1: 6 ಹುದ್ದೆಗಳು
ಸೀನಿಯರ್ ಸಿಸ್ಟಂ ಎಂಜಿನಿಯರ್-1: 1 ಹುದ್ದೆ
ಸೀನಿಯರ್ ಸಿಸ್ಟಂ ಎಂಜಿನಯರ್-2: 1 ಹುದ್ದೆ
ಒಟ್ಟು : 8 ಹುದ್ದೆಗಳು

ವಿದ್ಯಾರ್ಹತೆ:
ಸೀನಿಯರ್ ಎಂಜಿನಿಯರ್, ಸೀನಿಯರ್ ಸಿಸ್ಟಂ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್​, ಎಂಎಸ್ಸಿ, ಎಂಇ, ಎಂಸಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಸಿಸ್ಟಂ ಎಂಜಿನಿಯರ್-1: 30 ವರ್ಷ
ಸೀನಿಯರ್ ಸಿಸ್ಟಂ ಎಂಜಿನಿಯರ್-1: 40 ವರ್ಷ
ಸೀನಿಯರ್ ಸಿಸ್ಟಂ ಎಂಜಿನಯರ್-2: 40 ವರ್ಷ

ಉದ್ಯೋಗದ ಸ್ಥಳ:
ಸೀನಿಯರ್ ಎಂಜಿನಿಯರ್, ಸೀನಿಯರ್ ಸಿಸ್ಟಂ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: DGCA: ಮಾಸಿಕ ವೇತನ ₹ 75,000; ನಾಗರಿಕ ವಿಮಾನಯಾನ ನಿರ್ದೇಶನಾಲಯದಲ್ಲಿ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ:
ಸೀನಿಯರ್ ಎಂಜಿನಿಯರ್, ಸೀನಿಯರ್ ಸಿಸ್ಟಂ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,000-49,000 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಟೆಸ್ಟ್​
ವೈಯಕ್ತಿಕ ಸಂದರ್ಶನ
Published by:Latha CG
First published: