IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಆನ್​ಲೈನ್​​ನಲ್ಲಿ​ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2021. ಆನ್​ಲೈನ್​​ ಪೋರ್ಟಲ್​​ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. https://recruitment.iisc.ac.in/frp/ ಈ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

IISc ಬೆಂಗಳೂರು

IISc ಬೆಂಗಳೂರು

  • Share this:
ಬೆಂಗಳೂರು(ಸೆ.18): ಭಾರತದ ಅಗ್ರ ಶ್ರೇಯಾಂಕಿತ ವಿಶ್ವವಿದ್ಯಾಲಯ ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science -IISc) ಅನೇಕ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. IISc ತನ್ನ ವಿವಿಧ ಶೈಕ್ಷಣಿಕ ವಿಭಾಗಗಳು ಮತ್ತು ಕೇಂದ್ರಗಳಲ್ಲಿ SC/ST/OBC-NCL/EWS/PWD ವರ್ಗಗಳಿಗೆ ವಿಶೇಷ ನೇಮಕಾತಿ ಅಭಿಯಾನದಡಿ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳುತ್ತಿದೆ.

ಸಂಬಳ ಎಷ್ಟು?

ಲೆವೆಲ್ 12 ರಲ್ಲಿ ಮೂಲ ವೇತನದೊಂದಿಗೆ ಮಾಸಿಕ 1,01,500 ರೂಪಾಯಿ ಸಂಬಳ ನೀಡಲಾಗುತ್ತದೆ. ಲೆವೆಲ್​ 12ರಲ್ಲಿ ಮೂರು ವರ್ಷದ ಸೇವೆ ಪೂರ್ಣಗೊಳಿಸಿದ ಬಳಿಕ, ಲೆವೆಲ್​ 13ಎ1 ರಲ್ಲಿ ಮಾಸಿಕ 1,31,400 ರೂಪಾಯಿ ವೇತನ ನೀಡಲಾಗುತ್ತದೆ.

ಒಟ್ಟು ಕನಿಷ್ಠ ವೇತನಗಳು: (ಸಾರಿಗೆ ಭತ್ಯೆ ಸೇರಿದಂತೆ) ಮನೆ ಬಾಡಿಗೆ ಭತ್ಯೆಯೊಂದಿಗೆ ತಿಂಗಳಿಗೆ 1,66,541 ರೂ.ನೀಡಲಾಗುತ್ತದೆ. ಕ್ಯಾಂಪಸ್​​ನಲ್ಲಿ ಉಳಿದುಕೊಂಡರೆ ತಿಂಗಳಿಗೆ 1,39,136 ರೂ. ನೀಡಲಾಗುತ್ತದೆ.

ಇದನ್ನೂ ಓದಿ:TCS Recruitment: ಟಿಸಿಎಸ್ ಕಂಪನಿಯಲ್ಲಿ ಎಂಜಿನಿಯರಿಂಗ್ ಹುದ್ದೆಗಳ ನೇಮಕಾತಿ; ಅಭ್ಯರ್ಥಿಯು ಈ ಕೌಶಲ್ಯಗಳನ್ನು ಹೊಂದಿರಲೇಬೇಕು

ಪ್ರಮುಖ ದಿನಾಂಕಗಳು: ಆನ್​ಲೈನ್​​ನಲ್ಲಿ​ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2021. ಆನ್​ಲೈನ್​​ ಪೋರ್ಟಲ್​​ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. https://recruitment.iisc.ac.in/frp/ ಈ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಮೀಸಲಾತಿ: ಭಾರತ ಸರ್ಕಾರದ ನಿಯಮಗಳ ಪ್ರಕಾರ, ಅಗತ್ಯ ಪ್ರಮಾಣಪತ್ರಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕು.

ಖಾಲಿ ಇರುವ ಸಹಾಯಕ ಪ್ರಾಧ್ಯಪಕ ಹುದ್ದೆಗಳು(ಇಲಾಖಾವಾರು ಪಟ್ಟಿ)

ಜೈವಿಕ ವಿಜ್ಞಾನಗಳು (Biological Sciences)

ರಾಸಾಯನಿಕ ವಿಜ್ಞಾನಗಳು(Chemical Sciences)

ಭೌತಿಕ ಮತ್ತು ಗಣಿತ ವಿಜ್ಞಾನಗಳು(Physical and Mathematical Sciences)

ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್​ ಮತ್ತು ಕಂಪ್ಯೂಟರ್ ಸೈನ್ಸಸ್(EECS)​

ಯಾಂತ್ರಿಕ ವಿಜ್ಞಾನಗಳು(Mechanical Sciences)

ಅಂತರ ಶಿಕ್ಷಣ ಸಂಶೋಧನೆ: ಬಯೋಸಿಸ್ಟಮ್ಸ್​ ಸೈನ್ಸ್​ ಮತ್ತು ಎಂಜಿನಿಯರಿಂಗ್ ಕೇಂದ್ರ(BSSE); ನ್ಯಾನೋ ಸೈನ್ಸ್​ ಮತ್ತು ಎಂಜಿನಿಯರಿಂಗ್ ಕೇಂದ್ರ(CeNSE); ಕಂಪ್ಯೂಟೇಶನಲ್ ಮತ್ತು ಡೇಟಾ ಸೈನ್ಸ್​(CDS); ನಿರ್ವಹಣಾ ಅಧ್ಯಯನಗಳು(MS); ರಾಬರ್ಟ್​ ಬಾಷ್ ಸೆಂಟರ್ ಫಾರ್ ಸೈಬರ್ ಫಿಸಿಕಲ್ ಸಿಸ್ಟಮ್ಸ್​(RBCCPS)

ಅಂತರ ಶಿಕ್ಷಣ ಕೇಂದ್ರಗಳು: ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರ(CiSTUP); ಹವಾಮಾನ ಬದಲಾವಣೆಗಾಗಿ ಡಿವೆಚಾ ಕೇಂದ್ರ(DCCC); ಇಂಟರ್​ಡಿಸಿಪ್ಲಿನರಿ ಸೆಂಟರ್ ಫಾರ್ ಎನರ್ಜಿ ರಿಸರ್ಚ್ (ICER); ಇಂಟರ್ ಡಿಸಿಪ್ಲಿನರಿ ಕೇಂದ್ರ ಜಲ ಸಂಶೋಧನೆ(ICWAR).

ಇದನ್ನೂ ಓದಿ:IT Companies Hiring: ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರಿಗೆ ಗುಡ್​ ನ್ಯೂಸ್: 120% ಸಂಬಳ ಹೆಚ್ಚಳ, ಬೋನಸ್ ಕೂಡ ಜಾಸ್ತಿ

ಅರ್ಹತಾ ಷರತ್ತುಗಳು, ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಇತರೆ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು IISc ಬೆಂಗಳೂರಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೇಮಕಾತಿ ಅಧಿಸೂಚನೆಯನ್ನು ನೋಡಬೇಕು.

https://iisc.ac.in/positions-open/

ಅರ್ಹತೆ ಹಾಗೂ ಅನುಭವ ಏನು?

ಪ್ರಥಮ ದರ್ಜೆಯಲ್ಲಿ ಪಿಎಚ್​ಡಿ ಪಡೆದಿರಬೇಕು, ತತ್ಸಮಾನ ಹಿಂದಿನ ಪದವಿಯಲ್ಲಿ ಹಾಗೂ ಎಲ್ಲಾ ವರ್ಷಗಳಲ್ಲೂ ಉತ್ತಮ ಶೈಕ್ಷಣಿಕ ದಾಖಲೆ ಹೊಂದಿರಬೇಕು.

ಕನಿಷ್ಠ 3 ವರ್ಷಗಳ ಬೋಧನೆ/ಸಂಶೋಧನೆ/ವೃತ್ತಿಪರ ಅನುಭವವನ್ನು ಪಡೆದಿರಬೇಕು. ಪಿಎಚ್​​ಡಿ ವ್ಯಾಸಂಗ ಮಾಡುವಾಗ ಪಡೆದ ಅನುಭವವನ್ನು ಪರಿಗಣಿಸಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಅಗತ್ಯಕ್ಕಿಂತ ಕಡಿಮೆ ಅನುಭವ ಹೊಂದಿರುವ ಅಭ್ಯರ್ಥಿಗಳನ್ನೂ ಸಹ ಪರಿಗಣಿಸಲಾಗುತ್ತದೆ.

ಅರ್ಹತಾ ಷರತ್ತುಗಳು, ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಇತರೆ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು IISc ಬೆಂಗಳೂರಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೇಮಕಾತಿ ಅಧಿಸೂಚನೆಯನ್ನು ನೋಡಬೇಕು.
Published by:Latha CG
First published: