IICT Recruitment 2021: ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 28,000

ಅರ್ಹ ಅಭ್ಯರ್ಥಿಗಳು IICT ನೇಮಕಾತಿಗಾಗಿ 6ನೇ ಡಿಸೆಂಬರ್ 2021 ಮತ್ತು 9ನೇ ಡಿಸೆಂಬರ್ 2021 ರಂದು ನೇರ ಸಂದರ್ಶನ(Walk-In-Interview)ಕ್ಕೆ ಹಾಜರಾಗಬಹುದು.

CSIR

CSIR

  • Share this:
IICT ನೇಮಕಾತಿ 2021: CSIR-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ(Indian Institute of Chemical Technology)ಯು ಒಟ್ಟು 19 ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಪೋಸ್ಟ್‌ಗಳಿಗೆ B. Tech, M. Sc ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆ(Notification) ಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು IICT ನೇಮಕಾತಿಗಾಗಿ 6ನೇ ಡಿಸೆಂಬರ್ 2021 ಮತ್ತು 9ನೇ ಡಿಸೆಂಬರ್ 2021 ರಂದು ನೇರ ಸಂದರ್ಶನ(Walk-In-Interview)ಕ್ಕೆ ಹಾಜರಾಗಬಹುದು.

IICT ಉದ್ಯೋಗ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವಾಕ್-ಇನ್‌ಗೆ ಹಾಜರಾಗುವ ಮೊದಲು ಪೂರ್ಣ ಅಧಿಸೂಚನೆಯನ್ನು ಓದಬಹುದು. ಸಂದರ್ಶನಕ್ಕೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆ CSIR-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ಹುದ್ದೆಯ ಹೆಸರು ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II
ಒಟ್ಟು ಹುದ್ದೆಗಳು 19
ವಿದ್ಯಾರ್ಹತೆ ಬಿಟೆಕ್, ಎಂಎಸ್ಸಿ
ಉದ್ಯೋಗದ ಸ್ಥಳ ಹೈದ್ರಾಬಾದ್
ವೇತನ ಮಾಸಿಕ ₹ 25,000-28,000
ಆಯ್ಕೆ ವಿಧಾನ ಸಂದರ್ಶನ
ಸಂದರ್ಶನ ನಡೆಯುವ ದಿನಾಂಕ ಡಿಸೆಂಬರ್ 6 & 9, 2021



ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ದಿನಾಂಕ: 30/11/2021
ಸಂದರ್ಶನ ನಡೆಯುವ ದಿನಾಂಕ: ಡಿಸೆಂಬರ್ 6 & 9, 2021

ಇದನ್ನೂ ಓದಿ: AIISH Mysore Recruitment 2021: ಮೈಸೂರು ವಾಕ್​-ಶ್ರವಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಯ ಬಗ್ಗೆ ಮಾಹಿತಿ:
ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II - 19 ಹುದ್ದೆಗಳು

ವಿದ್ಯಾರ್ಹತೆ:
ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ B.Tech, M.Sc ಪೂರ್ಣಗೊಳಿಸಿರಬೇಕು.

ವಯೋಮಿತಿ:
ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣದ ಹೈದಾರಾಬಾದ್​ನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,000-28,000 ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Police Recruitment 2021: ತಿಂಗಳಿಗೆ ₹ 22,000 ಸಂಬಳ, ಡಿಪ್ಲೋಮಾ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಪ್ರಾಜೆಕ್ಟ್ ಅಸೋಸಿಯೇಟ್ I ಮತ್ತು II ಹುದ್ದೆಗಳಿಗೆ ಈ ಕೆಳಕಂಡ ಸ್ಥಳದಲ್ಲಿ ಸಂದರ್ಶನ ನಡೆಯುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

CSIR-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ಹೈದಾರಾಬಾದ್
Published by:Latha CG
First published: