ಮೀಮ್ (Meme) ಅನ್ನೋ ಪದ ಈಗ ಎಲ್ಲರಿಗೂ ತಿಳಿದಿರುವಂತದ್ದು ಪ್ರತಿನಿತ್ಯ (Daily) ಇಂಟರ್‌ನೆಟ್‌ನಲ್ಲಿ (Internet) ವೈರಲ್ (Viral) ಆಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳನ್ನು (Social Media) ಉಪಯೋಗಿಸುವವರು ಏನಿಲ್ಲಾ ಅಂದರೂ ದಿನಕ್ಕೆ ಕನಿಷ್ಠ ಹತ್ತು ಮೆಮೆಗಳನ್ನು ಓದಿ ನಕ್ಕಿರುತ್ತಾರೆ. ಮನಸ್ಸಿಗೆ ಹಾಸ್ಯದ (Joke) ಹೊನಲನ್ನು ಹರಿಸುವ ಮೀಮ್‌ಗಳು ಎಲ್ಲರಿಗೂ ಇಷ್ಟವಾಗುವಂತದ್ದು, ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ಮಾಡೋದೇ ಕೆಲವರಿಗೆ ಕೆಲಸವಾಗಿರುತ್ತದೆ. ಅದಕ್ಕೆ ಅಂತಾನೇ ಇನ್‌ಸ್ಟಾಗ್ರಾಮ್ (Instagram) ನಂತಹ ವೇದಿಕೆಯಲ್ಲಿ ಅವರದ್ದೇ ಆದ ಒಂದು ಖಾತೆಯನ್ನು ಸಹ ಆರಂಭಿಸುತ್ತಾರೆ. ಮೆಮೆ ನೋಡಿ ನಕ್ಕು ಈ ಮೀಮ್ಸ್ ಮಾಡೋರಿಗೆ ಕೆಲಸ ಇಲ್ಲಾ ಅಂತಾ ಸುಮ್ನೆ ಬಯ್ಕೋತೀವಿ, ಆದ್ರೆ ಮೀಮ್ಸ್ ಮಾಡೋದೇ ಅವರಿಗೆ ಕೆಲಸವಾಗಿರುತ್ತದೆ ನೋಡಿ.
ಮೀಮ್ ಮಾಡೋರಿಗೆ ಸುವರ್ಣಾವಕಾಶ
ಅಯ್ಯೋ ನಮ್ಮ ಅಂತಾ ಮೀಮ್ಸ್ ಮಾಡೋರಿಗೆ ಬೆಲೆನೇ ಇಲ್ಲಾ, ಮದುವೆಯಾಗಲು ಹೆಣ್ಣು ಯಾರು ಕೊಡ್ತಾರೆ ಹಾಗೇ ಹೀಗೆ ಅವರ ಬಗ್ಗೆ ಅವರೇ ಮೀಮ್ ಮಾಡಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಮೆಮೆ ಮಾಡೋರಿಗೆ ಅದೃಷ್ಟದ ಬಾಗಿಲೊಂದು ತೆರೆದಿದೆ. ಹೇಗೆ ಅಂತೀರಾ ಮುಂದೆ ನೋಡಿ.
ಮೀಮ್ ಮಾಡೋರಿಗೆ ಕಂಪನಿಯಲ್ಲಿ ಕೆಲಸ, ಕೈ ತುಂಬಾ ಸಂಬಳ
ಹೌದು ಮೆಮೆ ಮಾಡೋರಿಗೆ ಅಂತಾನೇ ಇಲ್ಲೊಂದು ಕಂಪನಿ ಕೆಲಸ ನೀಡುತ್ತಿದೆ. ಸಂಬಳ ಕೇಳಿದ್ರೆ ಮಾತ್ರ ಅಯ್ಯೋ ನನಗೂ ಅದೇ ಕೆಲಸ ಬೇಕು ಅಂತಿರಾ.
ಬೆಂಗಳೂರು ಮೂಲದ ಸ್ಟಾಕ್‌ಗ್ರೋ ಕಂಪನಿಯು ಮುಖ್ಯ ಮೀಮ್ ಅಧಿಕಾರಿ ನೇಮಕಾತಿಗೆ ಘೋಷಣೆ ಹೊರಡಿಸಿದೆ. ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ನಲ್ಲಿ ಈ ಬಗ್ಗೆ ವಿವರ ಹಂಚಿಕೊಂಡಿದ್ದು, ಮುಖ್ಯ ಮೀಮ್ ಅಧಿಕಾರಿಯ ಉದ್ಯೋಗದ ಬಗ್ಗೆ ತಿಳಿಸಿದೆ.
ಸಂಬಳ ಎಷ್ಟು?
ಸ್ಟಾಕ್‌ಗ್ರೋ ಕಂಪನಿಯು ಮುಖ್ಯ ಮೆಮೆ ಅಧಿಕಾರಿ ಹುದ್ದೆಗೆ ತಿಂಗಳಿಗೆ ₹ 1 ಲಕ್ಷ ಸಂಬಳ ಪಾವತಿಸುವುದಾಗಿ ಹೇಳಿದೆ. ಒಳ್ಳೊಳ್ಳೆ ಮೆಮೆ ಸೃಷ್ಟಿ ಮಾಡೋರಿಗೆ ಇದೊಂದು ಸುವರ್ಣಾವಕಾಶ ಅಂತಾನೇ ಹೇಳಬಹುದು. ಕೈ ತುಂಬಾ ಸಂಬಳ, ಮಸ್ತ್ ಕೆಲಸಕ್ಕೆ ನೀವೂ ಆಸಕ್ತಿ ಹೊಂದಿದ್ದರೆ ಬೇಗ ಅರ್ಜಿ ಆಹ್ವಾನಿಸಿ.
ಇದನ್ನೂ ಓದಿ: KVS Job: ಕೇಂದ್ರೀಯ ವಿದ್ಯಾಲಯ ಬಾಗಲಕೋಟೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ; ತಿಂಗಳಿ 27 ಸಾವಿರ ಸಂಬಳ
ಕೆಲಸ ಹೇಗಿರುತ್ತದೆ?
ಕೆಲಸ ತುಂಬಾ ಸುಲಭ. ರಿಮೋಟ್-ವರ್ಕಿಂಗ್ ಉದ್ಯೋಗ ಇದಾಗಿದ್ದು, ಅಭ್ಯರ್ಥಿಯು ಹಣಕಾಸು ಮತ್ತು ಷೇರು ಮಾರುಕಟ್ಟೆಯಲ್ಲಿ ಫನ್ನಿ ಮೆಮೆ ತಯಾರಿಸಬೇಕು. ಉದ್ಯೋಗಿಯು GenZ ಮತ್ತು ಮಿಲೇನಿಯಲ್‌ಗಳಿಗೆ ಸಂಬಂಧಿಸಬಹುದಾದ ಮೀಮ್‌ಗಳನ್ನು ಕ್ರಿಯೇಟ್ ಮಾಡುವುದು ಕೆಲಸದ ಜವಾಬ್ದಾರಿ.
ಏನೆಲ್ಲಾ ಅರ್ಹತೆಗಳಿರಬೇಕು?
ಅಭ್ಯರ್ಥಿ ಉತ್ತಮ ಮೆಮೆ ಮಾಡುವ ಜೊತೆಗೆ ಅಭ್ಯರ್ಥಿಯು ಹಣಕಾಸು ಮಾರುಕಟ್ಟೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು.
ಒಟ್ಟಾರೆ ಅಭ್ಯರ್ಥಿಯು ತಮಾಷೆಯ ಹಣಕಾಸು-ಸಂಬಂಧಿತ ಮೀಮ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರಬೇಕು, ಉತ್ತಮ ಹಾಸ್ಯ ಪ್ರಜ್ಞೆಯೊಂದಿಗೆ ಪದಗಳ ಜೊತೆ ಆಟವಾಡುವ ಪದಜ್ಞಾನ ಹೊಂದಿರಬೇಕು.
ಕೊನೆಯದಾಗಿ, ಅಭ್ಯರ್ಥಿಯು ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ತಂಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
ಕೆಲಸದ ಪಟ್ಟಿಯ ಪ್ರಕಾರ, ಮುಖ್ಯ ಮೆಮೆ ಅಧಿಕಾರಿಯು ಕಂಪನಿಯ ಬ್ರ್ಯಾಂಡ್‌ನ ಧ್ವನಿ ಮತ್ತು ಸಂದೇಶಕ್ಕೆ ಹೊಂದಿಕೆಯಾಗುವಂತವ ವಿಷಯವನ್ನು ರಚಿಸುವ ಕಾರ್ಯವನ್ನು ನಿರ್ವಹಿಸಬೇಕು. ಹಾಸ್ಯಮಯ ಮೀಮ್‌ಗಳ ಜೊತೆಗೆ ಬ್ರ್ಯಾಂಡ್‌ನಲ್ಲಿ ಸಮತೋಲನವನ್ನು ಸಾಧಿಸಬೇಕು ಎಂದು ಸ್ಟಾಕ್‌ಗ್ರೋ ಕಂಪನಿಯು ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ಕಂಪನಿಯು ಲಿಂಕ್ಡ್‌ಇನ್‌ನಲ್ಲಿರುವ ಈ ಬಗ್ಗೆ ಪೋಸ್ಟ್ ಮಾಡಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಕೇಳಿಕೊಂಡಿದೆ. ಅಲ್ಲದೇ ಯಾರಿಗಾದರೂ ಇಂತಹ ಉತ್ತಮ ಅಭ್ಯರ್ಥಿ ಬಗ್ಗೆ ತಿಳಿದಿದ್ದು ಅವರನ್ನು ಆ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದರೆ ಮತ್ತು ಕಂಪನಿ ಅದೇ ವ್ಯಕ್ತಿಯನ್ನು ನೇಮಿಸಿಕೊಂಡರೆ ಟ್ಯಾಗ್ ಮಾಡಿದವರಿಗೆ ಐಪ್ಯಾಡ್ ನೀಡುವ ಬಗ್ಗೆಯೂ ಹೇಳಿಕೊಂಡಿದೆ.
ಹಾಗಾದರೆ ತಡಮಾಡಬೇಡಿ ನಿಮಗೂ ಮೀಮ್ ಮತ್ತು ಹಣಕಾಸು, ಷೇರು ಮಾರುಕಟ್ಟೆಯಂತಹ ವಿಷಯದಲ್ಲಿ ಆಸಕ್ತಿ ಮತ್ತು ಜ್ಞಾನವಿದ್ದರೆ ಈಗಲೇ ಕಂಪನಿಯು ಲಿಂಕ್ಡ್‌ಇನ್ ಪೋಸ್ಟ್ ಪರಿಶೀಲಿಸಿ ಅರ್ಜಿ ಹಾಕಿಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ