ICTS Recruitment 2022: ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರವು (International Centre for Theoretical Sciences) ಮುಖ್ಯಸ್ಥ, ವಿಜ್ಞಾನ ಬರಹಗಾರ ಮತ್ತು ಸಂವಹನಕಾರ (Head, Science Writer & Communicator) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸ ನಿಮ್ಮದಾಗಿಸಿಕೊಳ್ಳಿ.
ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು |
ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರ (ICTS) |
ಉದ್ಯೋಗ ಸ್ಥಳ |
ಬೆಂಗಳೂರು - ಕರ್ನಾಟಕ |
ಹುದ್ದೆಯ ಹೆಸರು |
ಮುಖ್ಯಸ್ಥ, ವಿಜ್ಞಾನ ಬರಹಗಾರ ಮತ್ತು ಸಂವಹನಕಾರ |
ಸಂಬಳ |
ICTS ಮಾನದಂಡಗಳ ಪ್ರಕಾರ |
ಶೈಕ್ಷಣಿಕ ಅರ್ಹತೆ |
ಎಂಜಿನಿಯರಿಂಗ್, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ |
ವಯೋಮಿತಿ |
ಗರಿಷ್ಠ 40, 50 ವರ್ಷ |
ಮುಖ್ಯಸ್ಥ ಹುದ್ದೆಗೆ ಅರ್ಜಿ ಹಾಕಿ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ವಿಜ್ಞಾನ ಬರಹಗಾರ ಮತ್ತು ಸಂವಹನಕಾರ ಹುದ್ದೆಗೆ ಅರ್ಜಿ ಹಾಕಿ |
ಇಲ್ಲಿ ನೇರವಾಗಿ ಅರ್ಜಿ ಹಾಕಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
15-05-2022 (ಇಂದು ಕೊನೆಯ ದಿನ) |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಬೆಂಗಳೂರಿನಲ್ಲಿ ಖಾಲಿ ಇರುವ ಕೆಲ ಮುಖ್ಯಸ್ಥ, ವಿಜ್ಞಾನ ಬರಹಗಾರ ಮತ್ತು ಸಂವಹನಕಾರ ಹುದ್ದೆಗಳ ಭರ್ತಿಗೆ ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಪದವಿ, ಭೌತಿಕ, ಗಣಿತ/ಎಂಜಿನಿಯರಿಂಗ್, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 40 ವರ್ಷ ಹಾಗೂ 50 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರ (ICTS)
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಮುಖ್ಯಸ್ಥ, ವಿಜ್ಞಾನ ಬರಹಗಾರ ಮತ್ತು ಸಂವಹನಕಾರ
ಸಂಬಳ: ICTS ಮಾನದಂಡಗಳ ಪ್ರಕಾರ
ವಿದ್ಯಾರ್ಹತೆಯ ವಿವರಗಳು
ವಿಜ್ಞಾನ ಬರಹಗಾರ ಮತ್ತು ಸಂವಹನಕಾರ: ಪದವಿ, ಭೌತಿಕ, ಗಣಿತ/ಎಂಜಿನಿಯರಿಂಗ್, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ
ಮುಖ್ಯಸ್ಥರು: ಸ್ನಾತಕೋತ್ತರ ಪದವಿ, ಭೌತಿಕ, ಗಣಿತ/ಎಂಜಿನಿಯರಿಂಗ್, ವಿಜ್ಞಾನದಲ್ಲಿ ಪಿಎಚ್ಡಿ.
ವಯೋಮಿತಿ
ವಿಜ್ಞಾನ ಬರಹಗಾರ ಮತ್ತು ಸಂವಹನಕಾರ: ಗರಿಷ್ಠ 40 ವರ್ಷ
ಹೆಡ್: ಗರಿಷ್ಠ 50 ವರ್ಷ
ಇದನ್ನೂ ಓದಿ: 10ನೇ ತರಗತಿ ಆಗಿದ್ರೆ ಇಲ್ಲಿದೆ ಅವಕಾಶ - 16 ಹುದ್ದೆಗೆ ಬೇಗ ಅಪ್ಲೈ ಮಾಡಿ
ವಯೋಮಿತಿ ಸಡಿಲಿಕೆ: ಸೈದ್ಧಾಂತಿಕ ವಿಜ್ಞಾನಗಳ ಅಂತರರಾಷ್ಟ್ರೀಯ ಕೇಂದ್ರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
ವೆಬ್ಸೈಟ್:
icts.res.in
ಅರ್ಜಿ ಹಾಕುವ ಲಿಂಕ್:
ವಿಜ್ಞಾನ ಬರಹಗಾರ ಮತ್ತು ಸಂವಹನಕಾರ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಮುಖ್ಯಸ್ಥ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2022
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ