ICG Recruitment 2021: ಎಂಜಿನಿಯರ್ ಪದವಿ ಪಡೆದವರಿಗೆ ರಕ್ಷಣಾ ಪಡೆಯಲ್ಲಿ ಹುದ್ದೆ ಖಾಲಿ- ತಿಂಗಳಿಗೆ 50 ಸಾವಿರದಿಂದ 2 ಲಕ್ಷದವರೆಗೆ ಸಂಬಳ

ICG Recruitment 2021:ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು. ತದನಂತರ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಕರಾವಳಿ ರಕ್ಷಣಾ ಪಡೆಯಲ್ಲಿ 50 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರಾವಳಿ ರಕ್ಷಣಾ ಪಡೆಯಲ್ಲಿ 50 ಹುದ್ದೆಗಳಿಗೆ ಅರ್ಜಿ ಆಹ್ವಾನ

  • Share this:
ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ(Indian Coastal Guard) ಖಾಲಿ ಇರುವ 50 ಅಸಿಸ್ಟೆಂಟ್ ಕಮಾಂಡಂಟ್ (Assistant Commandant)ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದ್ದು, ಆಸಕ್ತರ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 6,2021 ರಿಂದ ಡಿಸೆಂಬರ್ 17,2021ರೊಳಗೆ ಅರ್ಜಿಯನ್ನು ಹಾಕಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಇನ್ನು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯುವುದು ಬಹಳ ಮುಖ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.















































ಇಲಾಖೆಭಾರತೀಯ ಕರಾವಳಿ ರಕ್ಷಣಾಪಡೆ
ಹುದ್ದೆಅಸಿಸ್ಟೆಂಟ್ ಕಮಾಂಡಂಟ್
ಸಂಖ್ಯೆ50
ವೇತನ56,100/- ರಿಂದ 2,25,000/-ರೂ
ವಯೋಮಿತಿ 25ವರ್ಷ ಮೇಲ್ಪಟ್ಟವರಾಗಿರಬೇಕು
ವಿದ್ಯಾರ್ಹತೆಎಂಜಿನಿಯರಿಂಗ್
ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ
ಅರ್ಜಿ ಸಲ್ಲಿಕೆ ಆರಂಭಡಿಸೆಂಬರ್ 6,2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ17,2021
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ವಿದ್ಯಾರ್ಹತೆ ಮತ್ತು ಅನುಭವ :

ಎಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ವಯೋಮಿತಿ :

25ವರ್ಷ ಮೇಲ್ಪಟ್ಟವರಾಗಿರಬೇಕು.

ಇದನ್ನೂ ಓದಿ: ಮೈಸೂರು ವಾಕ್​-ಶ್ರವಣ ಸಂಸ್ಥೆಯಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನ, ನಾಳೆನೇ ಕೊನೆಯ ದಿನ- ಬೇಗ ಅಪ್ಲೈ ಮಾಡಿ

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು. ತದನಂತರ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ :

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಕಾತಿಯ ಅಸಿಸ್ಟೆಂಟ್ ಕಮಾಂಡಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100/- ರಿಂದ 2,25,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಅರ್ಜಿ ಸಲ್ಲಿಕೆ:

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಡಿಸೆಂಬರ್ 6,2021 ರಿಂದ ಡಿಸೆಂಬರ್ 17,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
Published by:Sandhya M
First published: