IBPS RRB Recruitment: ಬ್ಯಾಂಕಿಂಗ್​ನಲ್ಲಿ ಭರ್ಜರಿ ನೇಮಕಾತಿ; 8106 ಹುದ್ದೆಗಳಿಗೆ ನೇಮಕಾತಿ

ಐಬಿಪಿಎಸ್​ನಿಂದ ಕರೆಯಲಾಗಿರುವ ಈ ಅರ್ಜಿಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ಸರಿಸುಮಾರು 832 ಉದ್ಯೋಗಗಳನ್ನು ಹಂಚಲಾಗಿದೆ

ಐಬಿಪಿಎಸ್ ಪರೀಕ್ಷೆ

ಐಬಿಪಿಎಸ್ ಪರೀಕ್ಷೆ

  • Share this:
    ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Gramin Bank)​ ಸೇರಿದಂತೆ ವಿವಿಧ ರಾಜ್ಯಗಳ ನೋಡಲ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿ ಸಂಬಂಧ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection) ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಭರ್ಜರಿ ಅವಕಾಶವಾಗಿದೆ. ಒಟ್ಟಾರೆ 8106 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 27 ಆಗಿದೆ.

    ಐಬಿಪಿಎಸ್​ನಿಂದ ಕರೆಯಲಾಗಿರುವ ಈ ಅರ್ಜಿಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ಸರಿಸುಮಾರು 832 ಉದ್ಯೋಗಗಳನ್ನು ಹಂಚಲಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅಧಿಕಾರಿಗಳು (ಸ್ಕೇಲ್-I, II ಮತ್ತು III) ಮತ್ತು ಕಚೇರಿ ಸಹಾಯಕರ (ವಿವಿಧೋದ್ದೇಶ) ನೇಮಕಾತಿಗಾಗಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಗಳ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ.

    ಬ್ಯಾಂಕ್ ಹೆಸರು: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)
    ಹುದ್ದೆಗಳ ಸಂಖ್ಯೆ: 8106
    ಉದ್ಯೋಗ ಸ್ಥಳ: ಅಖಿಲ ಭಾರತ
    ಹುದ್ದೆಯ ಹೆಸರು: ಅಧಿಕಾರಿ, ಕಚೇರಿ ಸಹಾಯಕ
    ಸಂಬಳ: IBPS ಮಾನದಂಡಗಳ ಪ್ರಕಾರ







































    ಹುದ್ದೆಗಳುಹುದ್ದೆ ಸಂಖ್ಯೆ
    ಕಚೇರಿ ಸಹಾಯಕರು (ವಿವಿಧೋದ್ದೇಶ)4483
    ಆಫೀಸರ್ ಸ್ಕೇಲ್ I2676
    ಆಫೀಸರ್ ಸ್ಕೇಲ್ II (ಖಜಾನೆ ವ್ಯವಸ್ಥಾಪಕ)10
    ಆಫೀಸರ್ ಸ್ಕೇಲ್ II (ಕಾನೂನು)18
    ಆಫೀಸರ್ ಸ್ಕೇಲ್ II (CA)19
    ಆಫೀಸರ್ ಸ್ಕೇಲ್ II (IT)57
    ಅಧಿಕಾರಿ ಸ್ಕೇಲ್ II (ಜನರಲ್ ಬ್ಯಾಂಕಿಂಗ್ ಅಧಿಕಾರಿ)745
    ಆಫೀಸರ್ ಸ್ಕೇಲ್ III80

    ವಿದ್ಯಾರ್ಹತೆ
    ಯಾವುದೇ ವಿಷಯದಲ್ಲಿ ಪದವಿ, ಪರಿಣಿತ ಅಧಿಕಾರಿ ಹುದ್ದೆಗೆ ಪದವಿ ಜೊತೆ ಸಿಎ ಮತತು ಎಂಬಿಎ ಪದವಿ ಅವಶ್ಯ, ಹಿರಿಯ ಮ್ಯಾನ್ಯೇಜರ್ ಹುದ್ದೆಗೆ ಪದವಿ, ಡಿಪ್ಲೋಮಾ ಆಗಿರಬೇಕು.

    ವಯೋಮಿತಿ
    ಅಧಿಸೂಚನೆ ಅನ್ವಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳು ಕನಿಷ್ಠ 18 ವರ್ಷದಿಂದ ಗರಿಷ್ಟ 40 ವರ್ಷ ಮೀರಿರಬಾರದು.

    ಇದನ್ನು ಓದಿ: ಪದವೀಧರರಿಗೆ ಅರ್ಜಿ ಆಹ್ವಾನ; ನೇರ ಸಂದರ್ಶನದ ಮೂಲಕ ಆಯ್ಕೆ

    ವಯೋಮಿತಿ ಸಡಿಲಿಕೆ
    ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ

    ಅರ್ಜಿ ಶುಲ್ಕ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ, ನಿವೃತ್ತ ಸೇವಾ ಅಧಿಕಾರಿ ಅಭ್ಯರ್ಥಿಗಳಿಗೆ - 175 ರೂ
    ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂ

    ಇದನ್ನು ಓದಿ: ರಾಯಚೂರು ಕೃಷಿ ವಿವಿಯಲ್ಲಿ ನೇಮಕಾತಿ; 11 ಹುದ್ದೆಗೆ ಅರ್ಜಿ ಆಹ್ವಾನ

    ಶುಲ್ಕ ಪಾವತಿ ವಿಧಾನ: ಆನ್​ಲೈನ್​

    ಆಯ್ಕೆ ಪ್ರಕ್ರಿಯೆ
    ಪ್ರಿಲಿಮಿನರಿ ಎಕ್ಸಾಂ (ಬಹು ಆಯ್ಕೆ)
    ಮುಖ್ಯ ಪರೀಕ್ಷೆ (ಬಹು ಆಯ್ಕೆ)

    ಪ್ರಮುಖ ದಿನಾಂಕ
    ಅರ್ಜಿ ಸಲ್ಲಿಕೆ ಆರಂಭದ ದಿನಾಂಕ; ಜೂನ್ 7, 2022
    ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕಡೆಯ ದಿನಾಂಕ ಜೂನ್​ 27, 2022

    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​​: ibps.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

    ಆನ್‌ಲೈನ್‌ನಲ್ಲಿ ಲಾಗ್​ ಇನ್​ ಆಗಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    -ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.  ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
    Published by:Seema R
    First published: