IBPS RRB Clerk Score Card 2022: ಐಬಿಪಿಎಸ್‌ ಆರ್‌ಆರ್‌ಬಿ ಕ್ಲರ್ಕ್‌ ಪ್ರಿಲಿಮ್ಸ್‌ ಸ್ಕೋರ್‌ ಕಾರ್ಡ್‌ ಬಿಡುಗಡೆ; ಡೌನ್​ಲೋಡ್​ ಲಿಂಕ್​ ಇಲ್ಲಿದೆ

ಐಬಿಪಿಎಸ್​ ಗ್ರೂಪ್​ ಬಿ ಆಫೀಸ್​ ಅಸಿಸ್ಟಂಟ್​ (ಆರ್​ಆರ್​ಬಿ ಕ್ಲರ್ಕ್​)ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ಅಂದರೆ ಆಗಸ್ಟ್​ 7, 13 ಮತ್ತು 14ರಂದು ದೇಶಾದ್ಯಂತ ಪರೀಕ್ಷೆ ನಡೆಸಿತ್ತು

ಐಬಿಪಿಎಸ್​

ಐಬಿಪಿಎಸ್​

  • Share this:
    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (Institute of Banking Personnel Selection-IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (Reginal Rural Bank-RRB) ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ನಡೆಸಿದ ಪ್ರಿಲಿಮ್ಸ್‌ ಪರೀಕ್ಷೆಯ ಸ್ಕೋರ್ ಕಾರ್ಡ್‌ ಅನ್ನು ಬಿಡುಗಡೆ ಮಾಡಿದೆ. ಐಬಿಪಿಎಸ್​ನ ಆರ್​ಆರ್​ಬಿ ಕ್ಲರ್ಕ್​ ಹುದ್ದೆಗೆ ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಸ್ಕೋರ್ ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಈ ಸ್ಕೋರ್​ ಕಾರ್ಡ್​ ಅನ್ನು ಸೆಪ್ಟೆಂಬರ್​ 13 ರಿಂದ 24ರವರೆಗೆ ಡೌನ್​ಲೋಡ್​ ಮಾಡಲು ಅವಕಾಶ ಇದೆ.

    ಕಳೆದ ತಿಂಗಳು ನಡೆದಿದ್ದ ಪರೀಕ್ಷೆ

    ಐಬಿಪಿಎಸ್​ ಗ್ರೂಪ್​ ಬಿ ಆಫೀಸ್​ ಅಸಿಸ್ಟಂಟ್​ (ಆರ್​ಆರ್​ಬಿ ಕ್ಲರ್ಕ್​)ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ಅಂದರೆ ಆಗಸ್ಟ್​ 7, 13 ಮತ್ತು 14ರಂದು ದೇಶಾದ್ಯಂತ ಪರೀಕ್ಷೆ ನಡೆಸಿತ್ತು. ಈ ಪ್ರಿಲಿಮ್ಸ್​ ಪರೀಕ್ಷೆಯಲ್ಲಿ ಶಾರ್ಟ್​ಲಿಸ್ಟ್​ ಆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಇನ್ನು ಈ ಐಬಿಪಿಎಸ್​ ಆರ್​ಆರ್​ಬಿ ಕ್ಲರ್ಕ್​​ ಮುಖ್ಯ ಪರೀಕ್ಷೆ ಇದೇ ಸೆಪ್ಟೆಂಬರ್​ 24 ರಂದು ನಡೆಯಲಿದೆ.

    ಇದನ್ನು ಓದಿ: ಬಿಎಚ್​ಇಎಲ್​ನಲ್ಲಿ 150 ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಶಾರ್ಟ್​ ಲಿಸ್ಟ್​ ಆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಶೀಘ್ರದಲ್ಲೇ ಪ್ರವೇಶ ಪತ್ರ ಕೂಡ ಐಬಿಪಿಎಸ್​ ಅಧಿಕೃತ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಲಿದ್ದು, ಅಭ್ಯರ್ಥಿಗಳು ಈ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗಬಹುದಾಗಿದೆ.

    ಈ ರೀತಿ ಸ್ಕೋರ್​ ಕಾರ್ಡ್​ ವೀಕ್ಷಿಸಿ:
    -ಅಭ್ಯರ್ಥಿಗಳು ತಮ್ಮ ಐಬಿಪಿಎಸ್​ ಆರ್​ಆರ್​ಬಿಒ ಕ್ಲರ್ಕ್ ಸ್ಕೋರ್‌ಕಾರ್ಡ್ ಅನ್ನು ಐಬಿಪಿಎಸ್​ ಅಧಿಕೃತ ವೆಬ್‌ಸೈಟ್‌ನಿಂದ ವೀಕ್ಷಿಸಬಹುದು.
    -ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ನೊಂದಿಗೆ ಖಾತೆಗೆ ಲಾಗ್ ಇನ್ ಆಗಬೇಕು.
    -ಮುಖಪುಟದಲ್ಲಿ, BPS RRB Clerk Prelims 2022 Result Link' ಕ್ಲಿಕ್ ಮಾಡಿ
    -ನಿಮ್ಮ ಅಂಕಪಟ್ಟಿಗಳನ್ನು ಪರಿಶೀಲಿಸಲು ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
    -ಬಳಿಕ ನೋಂದಣಿ ಸಂಖ್ಯೆ ನಮೂದಿಸಿ ಸ್ಕೋರ್​ ಕಾರ್ಡ್​ ಫಲಿತಾಂಶ ವೀಕ್ಷಣೆ ಮಾಡಬಹುದು
    -ಸ್ಕೋರ್‌ ಕಾರ್ಡ್‌ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

    ಅಭ್ಯರ್ಥಿಗಳು ತಮ್ಮ ಐಪಿಬಿಎಸ್​ ಆರ್​ಆರ್​ಬಿ ಸ್ಕೋರ್​ ಕಾರ್ಡ್​ ಚೆಕ್​ ಮಾಡಲು ಈ ಲಿಂಕ್​ಗೆ ಕ್ಲಿಕ್​ ಮಾಡಬಹುದಾಗಿದೆ

    ಇದನ್ನು ಓದಿ: ಕೇಂದ್ರ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶ; ಎಸ್​ಎಸ್​ಸಿ ಸಿಜಿಲ್​ ಅಧಿಸೂಚನೆ ಬಿಡುಗಡೆ

    IBPS RRB ಕ್ಲರ್ಕ್ 2022 ಆಯ್ಕೆಗೆ ಎರಡು ಹಂತಗಳನ್ನು ಹೊಂದಿದೆ ಒಂದು ಪ್ರಿಲಿಮ್ಸ್​ ಮತ್ತು ಮುಖ್ಯ ಪರೀಕ್ಷೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅಂತಿಮ ಆಯ್ಕೆಯು ಐಬಿಪಿಎಸ್​ ಆರ್​ಆರ್​ಬಿ ಕ್ಲರ್ಕ್ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು. ಐಬಿಪಿಎಸ್​ ಆರ್​ಆರ್​ಬಿ ಕ್ಲರ್ಕ್ ಪ್ರಿಲಿಮ್ಸ್ ಸ್ಕೋರ್ ಕಾರ್ಡ್ ಬಿಡುಗಡೆ ಉದ್ದೇಶವೆಂದರೆ ವಿಭಾಗವಾರು ಮತ್ತು ಒಟ್ಟಾರೆ ಅಂಕಗಳನ್ನು ಅಭ್ಯರ್ಥಿಗಳು ಪರಿಶೀಲಿಸಲಿ ಎಂಬುದಾಗಿದೆ.
    Published by:Seema R
    First published: