• Home
  • »
  • News
  • »
  • jobs
  • »
  • IBPS Recruitment: 710 ವಿಶೇಷಾಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ಆಗಿದ್ರೆ ಕೂಡಲೇ ಅರ್ಜಿ ಹಾಕಿ

IBPS Recruitment: 710 ವಿಶೇಷಾಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ಆಗಿದ್ರೆ ಕೂಡಲೇ ಅರ್ಜಿ ಹಾಕಿ

ಐಬಿಪಿಎಸ್​

ಐಬಿಪಿಎಸ್​

ಬ್ಯಾಂಕಿಂಗ್ ವಲಯ(Banking Sector)ದಲ್ಲಿ ಉದ್ಯೋಗ(Job) ಮಾಡಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್ 21, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಈ ಕೂಡಲೇ ಅಪ್ಲಿಕೇಶನ್ ಹಾಕಿ.

  • News18 Kannada
  • Last Updated :
  • New Delhi, India
  • Share this:

    IBPS Recruitment 2022: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು(Institute of Banking Personnel Selection) 2023-24 ನೇ ಸಾಲಿಗೆ ನೇಮಕಾತಿ ಮಾಡಿಕೊಳ್ಳಲು ದೇಶಾದ್ಯಂತ ವಿವಿಧ ಬ್ಯಾಂಕ್‌ಗಳ(Banks) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಇದೀಗ ನೋಟಿಫಿಕೇಶನ್(Notification)‌ ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ 710 ವಿಶೇಷಾಧಿಕಾರಿ(Special Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ವಲಯ(Banking Sector)ದಲ್ಲಿ ಉದ್ಯೋಗ(Job) ಮಾಡಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್ 21, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಈ ಕೂಡಲೇ ಅಪ್ಲಿಕೇಶನ್ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
    ಹುದ್ದೆಯ ಹೆಸರುವಿಶೇಷಾಧಿಕಾರಿ
    ಒಟ್ಟು ಹುದ್ದೆ710
    ಉದ್ಯೋಗದ ಸ್ಥಳಭಾರತ
    ವೇತನನಿಯಮಾನುಸಾರ
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ01/11/2022
    ಅರ್ಜಿ ಸಲ್ಲಿಸಲು ಕೊನೆ ದಿನ21/11/2022


    ಎಷ್ಟೆಷ್ಟು ಹುದ್ದೆಗಳಿವೆ?


    ಐಟಿ ಆಫೀಸರ್- 44
    ಅಗ್ರಿಕಲ್ಚರ್ ಫೀಲ್ಡ್ ಆಫೀಸರ್- 516
    ರಾಜ್​ಭಾಷಾ ಅಧಿಕಾರಿ-25
    ಲಾ ಆಫೀಸರ್- 10
    ಎಚ್​ಆರ್​/ಪರ್ಸನಲ್ ಆಫೀಸರ್-15
    ಮಾರ್ಕೆಟಿಂಗ್ ಆಫೀಸರ್-100


    ಇದನ್ನೂ ಓದಿ: Bengaluru: ನಿಮ್ಹಾನ್ಸ್​​ನಲ್ಲಿ 50,000 ಸಂಬಳದ ಉದ್ಯೋಗ, ನಾಳೆಯೇ ಸಂದರ್ಶನ


    ಯಾವ್ಯಾವ ಬ್ಯಾಂಕ್​ನಲ್ಲಿ ಎಷ್ಟು ಹುದ್ದೆಗಳಿವೆ?


    ಬ್ಯಾಂಕ್ ಆಫ್​ ಬರೋಡಾ-30
    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-580
    ಪಂಜಾಬ್ ನ್ಯಾಷನಲ್ ಬ್ಯಾಂಕ್-100


    ವಿದ್ಯಾರ್ಹತೆ:


    ಐಟಿ ಅಧಿಕಾರಿ: ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್ಸ್/ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಪದವಿ.
    ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್/ಇಲೆಕ್ಟ್ರಾನಿಕ್ಸ್ ಇನ್‌ಪುಟ್‌ಕಮ್ಯುನಿಕೇಷನ್/ಇಲೆಕ್ಟ್ರಾನಿಕ್ಸ್/ಇಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ.


    ಅಗ್ರಿಕಲ್ಚರ್ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶು ವೈದ್ಯಕೀಯ ವಿಜ್ಞಾನ/ಡೈರಿ ಸೈನ್ಸ್/ಮೀನುಗಾರಿಕೆ ವಿಜ್ಞಾನ/ಮೀನುಗಾರಿಕೆ/ ಮಾರ್ಕೆಟಿಂಗ್ ಮತ್ತು ಸಹಕಾರ/ಸಹಕಾರ ಮತ್ತು ಬ್ಯಾಂಕಿಂಗ್/ಕೃಷಿ-ಅರಣ್ಯ/ಅರಣ್ಯ/ಕೃಷಿ ಜೈವಿಕ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ವ್ಯವಹಾರ ನಿರ್ವಹಣೆ/ಆಹಾರ ತಂತ್ರಜ್ಞಾನ/ಡೈರಿ ತಂತ್ರಜ್ಞಾನ/ಕೃಷಿ ಇಂಜಿನಿಯರಿಂಗ್/ರೇಷ್ಮೆಗಾರಿಕೆ ವಿಭಾಗದಲ್ಲಿ ಪದವಿ


    ರಾಜ್​ಭಾಷಾ ಅಧಿಕಾರಿ: ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ.


    ಕಾನೂನು ಅಧಿಕಾರಿ: ಕಾನೂನು ವಿಭಾಗದಲ್ಲಿ ಪದವಿ, ಎಲ್​ಎಲ್​ಬಿ


    ಎಚ್​ಆರ್​/ ಪರ್ಸನಲ್ ಆಫೀಸರ್: ಸಿಬ್ಬಂದಿ ನಿರ್ವಹಣೆ/ಕೈಗಾರಿಕಾ ಸಂಬಂಧಗಳು/HR/HRD/ಸಾಮಾಜಿಕ ಕೆಲಸ/ಕಾರ್ಮಿಕ ಕಾನೂನಿನಲ್ಲಿ ಪದವಿ, ಸ್ನಾತಕೋತ್ತರ ಪದವಿ


    ಮಾರ್ಕೆಟಿಂಗ್ ಆಫೀಸರ್: ಪದವಿ, MMS, MBA, PGDBA, PGDBM, PGPM, ಮಾರ್ಕೆಟಿಂಗ್‌ನಲ್ಲಿ PGDM


    ವಯೋಮಿತಿ:
    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ನೇಮಕಾತಿ ಅಧಿಸೂಚನೆ ಪ್ರಕಾರ, ನವೆಂಬರ್ 1, 2022ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ(ಎನ್​ಸಿಎಲ್​) ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು-10 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/PWD ಅಭ್ಯರ್ಥಿಗಳು- 175 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 850 ರೂ.
    ಪಾವತಿಸುವ ಬಗೆ- ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಪ್ರಿಲಿಮಿನರಿ ಪರೀಕ್ಷೆ
    ಮೇನ್ಸ್​ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: JOBS: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ BE, B Tech ಆದವರಿಗೆ ಉದ್ಯೋಗ, ಮಾಸಿಕ ವೇತನ 50 ಸಾವಿರ


    ಪ್ರಮುಖ ದಿನಾಂಕಗಳು:


    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-11-2022


    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 21-ನವೆಂಬರ್-2022


    ಆನ್‌ಲೈನ್ ಪರೀಕ್ಷೆಯ ದಿನಾಂಕ - ಪೂರ್ವಭಾವಿ: 24ನೇ ಡಿಸೆಂಬರ್ 2022/31ನೇ ಡಿಸೆಂಬರ್ 2022


    ಆನ್‌ಲೈನ್ ಪರೀಕ್ಷೆಯ ಫಲಿತಾಂಶದ ದಿನಾಂಕ - ಪೂರ್ವಭಾವಿ: ಜನವರಿ-2023


    ಆನ್‌ಲೈನ್ ಪರೀಕ್ಷೆಗಾಗಿ ಕರೆ ಪತ್ರದ ಡೌನ್‌ಲೋಡ್ ದಿನಾಂಕ - ಮುಖ್ಯ ಪರೀಕ್ಷೆ: ಜನವರಿ-2023


    ಆನ್‌ಲೈನ್ ಪರೀಕ್ಷೆಯ ದಿನಾಂಕ - ಮುಖ್ಯ ಪರೀಕ್ಷೆ: 29-ಜನವರಿ-2023


    ಆನ್‌ಲೈನ್ ಮುಖ್ಯ ಪರೀಕ್ಷೆಯ ಫಲಿತಾಂಶದ ಘೋಷಣೆಯ ದಿನಾಂಕ: ಫೆಬ್ರವರಿ-2023


    ಸಂದರ್ಶನಕ್ಕಾಗಿ ಕರೆ ಪತ್ರಗಳ ಡೌನ್‌ಲೋಡ್ ದಿನಾಂಕ: ಫೆಬ್ರವರಿ-2023


    ಸಂದರ್ಶನದ ದಿನಾಂಕ: ಫೆಬ್ರವರಿ/ಮಾರ್ಚ್-2023


    ತಾತ್ಕಾಲಿಕ ಹಂಚಿಕೆಯ ದಿನಾಂಕ: ಏಪ್ರಿಲ್-2023

    Published by:Latha CG
    First published: