IBPS Clerk Recruitment 2021: ಕ್ಲರ್ಕ್​ ಹುದ್ದೆಗಳ ಸಂಖ್ಯೆ ಹೆಚ್ಚಿಸಿದ IBPS, ಅರ್ಜಿ ಸಲ್ಲಿಸಲು ಅ.27 ಕಡೇ ದಿನ

ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 27, 2021. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​, ibps.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

IBPS

IBPS

  • Share this:
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(Institute of Banking Personnel Selection-IBPS) ಐಬಿಬಿಎಸ್​ ಕ್ಲರ್ಕ್ ನೇಮಕಾತಿ 2021 ( IBPS Clerk Recruitment -2021)ರ ಒಟ್ಟು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿದೆ. ಖಾಲಿ ಹುದ್ದೆಗಳನ್ನು 7858ಕ್ಕೆ ಹೆಚ್ಚಿಸಲಾಗಿದೆ. ಅಭ್ಯರ್ಥಿಗಳು IBPSನ ಅಧಿಕೃತ ವೆಬ್​ಸೈಟ್ ibps.in ನಲ್ಲಿ ಪರಿಷ್ಕೃತ ಖಾಲಿ ಹುದ್ದೆಗಳ ಅಧಿಸೂಚನೆಯನ್ನು ಪರಿಶೀಲಿಸಬಹುದಾಗಿದೆ. ಪರಿಷ್ಕೃತ ಪಟ್ಟಿಯಂತೆ 58 ಹುದ್ದೆಗಳನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಒಟ್ಟು 7800 ಕ್ಲರ್ಕ್​ ಹುದ್ದೆಗಳು ಇದ್ದವು.

ಭಾಗವಹಿಸುವ ಬ್ಯಾಂಕುಗಳಲ್ಲಿ ಕ್ಲೆರಿಕಲ್ ಕೇಡರ್ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆಗಾಗಿ ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಆನ್‌ಲೈನ್ ಪರೀಕ್ಷೆ (ಪ್ರಿಲಿಮಿನರಿ ಮತ್ತು ಮೇನ್) ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ತಾತ್ಕಾಲಿಕವಾಗಿ ನಿಗದಿಯಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 27, 2021. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​, ibps.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಇದನ್ನೂ ಓದಿ:SEBI Recruitment 2021: ಸೆಬಿಯಲ್ಲಿ ಫೈನಾನ್ಸಿಯಲ್ ಕಂಟೆಂಟ್ ರೈಟರ್ ಹುದ್ದೆ ಖಾಲಿ, ತಿಂಗಳಿಗೆ ₹ 45,000 Stipend

ಸಂಸ್ಥೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS)
ಹುದ್ದೆಯ ಹೆಸರು ಕ್ಲರ್ಕ್
ಒಟ್ಟು ಹುದ್ದೆಗಳು 7858
ವಿದ್ಯಾರ್ಹತೆ ಯಾವುದೇ ಪದವಿ
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/10/2021
ಅರ್ಜಿ ಸಲ್ಲಿಸಲು ವೆಬ್​ಸೈಟ್ ibps.in

ವಿದ್ಯಾರ್ಹತೆ:

  • ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

  • ಅಭ್ಯರ್ಥಿಯು ತಾನು ನೋಂದಾಯಿಸಿದ ದಿನದಂದು ಅವನು/ಅವಳು ಪದವೀಧರ ಎಂದು ಮಾನ್ಯವಾದ ಅಂಕಪಟ್ಟಿ / ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು.

  • ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸಬೇಕು.


ಇದನ್ನೂ ಓದಿ:Apple is Hiring: ಆ್ಯಪಲ್ ಕಂಪನಿಯಲ್ಲಿ ಹುದ್ದೆಗಳು ಖಾಲಿ; ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಿ..!

ಇತರೆ ಸೂಚನೆಗಳು

  • ಪ್ರಿಲಿಮಿನರಿ ಮತ್ತು ಮೇನ್​ ಪರೀಕ್ಷೆಗಳಿಗೆ ಕೇಂದ್ರ, ಸ್ಥಳದ ವಿಳಾಸ, ದಿನಾಂಕ ಮತ್ತು ಸಮಯವನ್ನು ಸಂಬಂಧಪಟ್ಟ ಕರೆ ಪತ್ರದಲ್ಲಿ ತಿಳಿಸಲಾಗಿರುತ್ತದೆ.

  • ಅರ್ಹ ಅಭ್ಯರ್ಥಿಯು ಅಧಿಕೃತ ಐಬಿಪಿಎಸ್ ವೆಬ್‌ಸೈಟ್ ibps.in ನಿಂದ ಅವನ/ಅವಳ ವಿವರಗಳನ್ನು ಅಂದರೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್/ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ತನ್ನ ಕಾಲ್​ ಲೆಟರ್​​ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

  • ಕರೆ ಪತ್ರ/ ಮಾಹಿತಿಯ ಕರಪತ್ರ ಇತ್ಯಾದಿಗಳ ಯಾವುದೇ ಹಾರ್ಡ್ ಕಾಪಿಯನ್ನು ಅಂಚೆ/ ಕೊರಿಯರ್ ಮೂಲಕ ಕಳುಹಿಸಲಾಗುವುದಿಲ್ಲ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: