IBPS Exams: ಕ್ಲರ್ಕ್ ಮೇನ್ಸ್ ಪರೀಕ್ಷೆಗಾಗಿ ನಿಮ್ಮ ಪ್ರವೇಶ ಕಾರ್ಡ್ ಅನ್ನು ವೆಬ್‌ಸೈಟ್‌ನಲ್ಲಿ ಹೀಗೆ ಪಡೆಯಿರಿ

25 ಈಗ ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಛಾಗುತ್ತಿರುವುದರಿಂದ ಮುಖ್ಯ ಪರೀಕ್ಷೆಯನ್ನು ಆನ್‌ಲೈನ್ ಮೋಡ್ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ ಈ ಮುಖ್ಯ ಪರೀಕ್ಷೆಯು ಸುಮಾರು 200 ಅಂಕಗಳ ಪರೀಕ್ಷೆಯಾಗಿದೆ

ಐಬಿಪಿಎಸ್ ಪರೀಕ್ಷೆ

ಐಬಿಪಿಎಸ್ ಪರೀಕ್ಷೆ

  • Share this:
ಎಷ್ಟೋ ವಿದ್ಯಾರ್ಥಿಗಳು ವರ್ಷಗಳಿಂದ ಓದಿಕೊಂಡು ತಯಾರಾಗುವ ಪರೀಕ್ಷೆಗಳಲ್ಲಿ ಈ ಬ್ಯಾಂಕುಗಳ(Banks) ಪರೀಕ್ಷೆಗಳು ಒಂದು ಎಂದು ಹೇಳಬಹುದಾಗಿದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಂತೆ(Competitive Exams) ಬ್ಯಾಂಕುಗಳಲ್ಲಿ ಕೆಲಸವನ್ನು ಗಿಟ್ಟಿಸುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತುಂಬಾ ದಿನಗಳಿಂದ ಸಿದ್ದತೆ ನಡೆಸಿರುತ್ತಾರೆ. ಇಂತಹವರಿಗೆ ಒಂದು ಸಿಹಿ ಸುದ್ದಿ ಇದೆ. ಅದೇನು ಎಂದರೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (Banking Personnel Selection Institute) (ಐಬಿಪಿಎಸ್) ಇದೇ  2022ರ ಜನವರಿ 25 ರಂದು ನಡೆಸಲು ನಿಗದಿಯಾಗಿದ್ದ (Scheduled) 2021 ರ ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆಗೆ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ.

ಪರೀಕ್ಷಾ ಪ್ರವೇಶ ಕಾರ್ಡ್
ಈ ಪರೀಕ್ಷೆಗಳಿಗೆ ಓದಿಕೊಂಡು ಸಿದ್ದರಾಗುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಪರೀಕ್ಷೆಗೆ ಹಾಜರಾಗಲು ಬೇಕಾಗುವ ಪರೀಕ್ಷಾ ಪ್ರವೇಶ ಕಾರ್ಡ್ ಅನ್ನು ಮೊದಲೇ ಸಂಬಂಧಪಟ್ಟಂತಹ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಆಗಿದೆ. ಇದರಲ್ಲಿ ಸಾಮಾನ್ಯವಾಗಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯ ಫೋಟೋ, ವಿವರ ಮತ್ತು ಪರೀಕ್ಷಾ ಕೇಂದ್ರ ಅಲ್ಲದೆ ಪರೀಕ್ಷೆಯ ಸಮಯ ಸಹ ಇರುತ್ತದೆ.

ಈಗಾಗಲೇ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯ 2021 ರ ವರ್ಷದ ಮುಖ್ಯ ಪರೀಕ್ಷೆಯನ್ನು ನಡೆಸುವ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅಧಿಕೃತ ಐಬಿಪಿಎಸ್ ವೆಬ್‌ಸೈಟ್ ibps.in ನಿಂದ ಅವರು ತಮ್ಮ ಪರೀಕ್ಷಾ ಪ್ರವೇಶ ಕಾರ್ಡ್ ಗಳನ್ನು ಪಡೆಯಬಹುದಾಗಿದೆ ಎಂದು ಐಬಿಪಿಎಸ್ ತಿಳಿಸಿದೆ.

ಇದನ್ನೂ ಓದಿ: SSLC Exam Date 2022: ಎಸ್​ಎಸ್​​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಐಬಿಪಿಎಸ್ ಕ್ಲರ್ಕ್ ಮೇನ್ಸ್ ಪರೀಕ್ಷೆ
ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಈಗ ಆಯ್ಕೆಯ ಮತ್ತೊಂದು ಹಂತವಾದ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಹೀಗೆ ಅರ್ಹರಾದಂತಹ ಅಭ್ಯರ್ಥಿಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಜನವರಿ 13, 2022 ರಂದು ಘೋಷಿಸಲಾಗಿದೆ ಎಂದು ಐಬಿಪಿಎಸ್ ತಿಳಿಸಿದೆ.
ನೀವು ಐಬಿಪಿಎಸ್ ಕ್ಲರ್ಕ್ ಮೇನ್ಸ್ ಪರೀಕ್ಷೆಯನ್ನು ಬರೆಯುತ್ತಿದ್ದರೆ, ಕೂಡಲೇ ನಿಮ್ಮ ಪರೀಕ್ಷಾ ಪ್ರವೇಶ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿರಿ. ಈ ಪರೀಕ್ಷಾ ಪ್ರವೇಶ ಕಾರ್ಡ್ ಅನ್ನು ಪಡೆಯುವುದು ಹೇಗೆ ಗೊತ್ತೇ?

ಇಲ್ಲಿದೆ ನೋಡಿ ಈ ಹಂತಗಳನ್ನು ಫಾಲೋ ಮಾಡಿ.

ಹಂತ 1: ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ಐಬಿಪಿಎಸ್ ವೆಬ್‌ಸೈಟ್ ಅನ್ನು ತೆರೆಯಿರಿ ibps.in

ಹಂತ 2: ನಂತರ ಕ್ಲರ್ಕ್ ಮುಖ್ಯ ಪರೀಕ್ಷೆ ಆಯ್ಕೆಯನ್ನು ಕ್ಲಿಕ್ ಮಾಡಿರಿ ಮತ್ತು ಕಾರ್ಡ್ ಲಿಂಕ್ ಪ್ರವೇಶ ಪಡೆಯಿರಿ.

ಹಂತ 3: ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ (ನೋಂದಣಿ ಸಂಖ್ಯೆ, ನಿಮ್ಮ ಪಾಸ್‌ವರ್ಡ್ ಮತ್ತು ನಿಮ್ಮ ಜನ್ಮ ದಿನಾಂಕವನ್ನು ಅಲ್ಲಿ ನಮೂದಿಸಿ)

ಹಂತ 4: ಪರೀಕ್ಷಾ ಪ್ರವೇಶ ಕಾರ್ಡ್ ನಿಮ್ಮ ಕಂಪ್ಯೂಟರ್ ನ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಹಂತ 5: ಪರೀಕ್ಷಾ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ ಮತ್ತು ಹೆಚ್ಚಿನ ಅವಶ್ಯಕತೆಗಳಿಗಾಗಿ ಹಾರ್ಡ್ ಕಾಪಿಯನ್ನು ಸಹ ಪ್ರಿಂಟ್ ತೆಗೆದುಕೊಂಡು ಇರಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಎಸ್‌ಐ ಪರೀಕ್ಷೆ ವೇಳೆ HighTech ಕಾಪಿ ಮಾಡಿ ಸಿಕ್ಕಿ ಬಿದ್ದ ಖದೀಮ...! ಹೇಗೆ ಗೊತ್ತೇ? ವಿಡಿಯೋ ನೋಡಿ

ಆನ್‌ಲೈನ್ ಮೋಡ್
ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಛಾಗುತ್ತಿರುವುದರಿಂದ ಮುಖ್ಯ ಪರೀಕ್ಷೆಯನ್ನು ಆನ್‌ಲೈನ್ ಮೋಡ್ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಮುಖ್ಯ ಪರೀಕ್ಷೆಯು ಸುಮಾರು 200 ಅಂಕಗಳ ಪರೀಕ್ಷೆಯಾಗಿದ್ದು, ಇದನ್ನು ಬರೆಯಲು ಅಭ್ಯರ್ಥಿಗಳಿಗೆ 160 ನಿಮಿಷಗಳ ಅವಧಿಯನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಒಟ್ಟು 190 ಪ್ರಶ್ನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುವುದು ಮತ್ತು ಇದು ಆಯ್ಕೆ ಪ್ರಕ್ರಿಯೆಯ ಎರಡನೇ ಹಂತವಾಗಿದೆ ಮತ್ತು ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನೇಮಕಾತಿಗೆ ಮೊದಲು ಅಂತಿಮ ಸಂದರ್ಶನ ಸುತ್ತಿಗೆ ಹಾಜರಾಗಬೇಕಾಗುತ್ತದೆ ಎಂದು ಐಬಿಪಿಎಸ್ ತಿಳಿಸಿದೆ.
Published by:vanithasanjevani vanithasanjevani
First published: