• Home
  • »
  • News
  • »
  • jobs
  • »
  • IBPS Clerk 2022 Recruitment: 6035 ಹುದ್ದೆ ಭರ್ತಿಗೆ ಮುಂದಾದ ಐಬಿಪಿಎಸ್​; ಡಿಗ್ರಿ ಪದವಿ ಆದವರಿಗೆ ಭರ್ಜರಿ ಅವಕಾಶ

IBPS Clerk 2022 Recruitment: 6035 ಹುದ್ದೆ ಭರ್ತಿಗೆ ಮುಂದಾದ ಐಬಿಪಿಎಸ್​; ಡಿಗ್ರಿ ಪದವಿ ಆದವರಿಗೆ ಭರ್ಜರಿ ಅವಕಾಶ

ಐಬಿಪಿಎಸ್ ಪರೀಕ್ಷೆ

ಐಬಿಪಿಎಸ್ ಪರೀಕ್ಷೆ

6035 ಹುದ್ದೆಗಳಲ್ಲಿ ಕರ್ನಾಟಕಕ್ಕೆ 358 ಹುದ್ದೆಗಳನ್ನು ನಿಗದಿಸಲಾಗಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿದಂತೆ ಒಟ್ಟು 11 ಬ್ಯಾಂಕ್​ಗಳಲ್ಲಿ ಹುದ್ದೆಗಳ ಖಾಲಿ ಇದ್ದು, ಇವುಗಳ ಭರ್ತಿಗೆ ಮುಂದಾಗಲಾಗಿದೆ.

  • Share this:

    ಬ್ಯಾಂಕಿಂಗ್​ ನೇಮಕಾತಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection- IBPS Clerk 2022 Recruitment) ಪ್ರಸಕ್ತ ಸಾಲಿನ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 6035 ಕ್ಲರ್ಕ್​ ಹುದ್ದೆಗಳ ಭರ್ತಿಗೆ ಮುಂದಾಗಲಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 21 ಆಗಿದೆ. ಆಸಕ್ತ ಅಭ್ಯರ್ಥಿಗಳು ibps.in ನಲ್ಲಿ ಅರ್ಜಿ ಸಲ್ಲಿಸಬಹುದು. 


    6035 ಹುದ್ದೆಗಳಲ್ಲಿ ಕರ್ನಾಟಕಕ್ಕೆ 358 ಹುದ್ದೆಗಳನ್ನು ನಿಗದಿಸಲಾಗಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿದಂತೆ ಒಟ್ಟು 11 ಸರ್ಕಾರಿ ಬ್ಯಾಂಕ್​ಗಳಲ್ಲಿ ಹುದ್ದೆಗಳ ಖಾಲಿ ಇದ್ದು, ಇವುಗಳ ಭರ್ತಿಗೆ ಮುಂದಾಗಲಾಗಿದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ವಿವರ ಈ ಕೆಳಗಿನಂತಿದೆ.


    ಬ್ಯಾಂಕ್ ಹೆಸರು: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)
    ಹುದ್ದೆಯ ಹೆಸರು: ಕ್ಲರ್ಕ್
    ಹುದ್ದೆಗಳ ಸಂಖ್ಯೆ: 6035
    ಉದ್ಯೋಗ ಸ್ಥಳ: ಅಖಿಲ ಭಾರತ
    ಸಂಬಳ: ಐಬಿಪಿಎಸ್​​ ಮಾನದಂಡಗಳ ಪ್ರಕಾರ


    ಯಾವ್ಯಾವ ಬ್ಯಾಂಕ್​​ಗಳಲ್ಲಿ ನೇಮಕಾತಿ (Appointment to this Banks)

    ಬ್ಯಾಂಕ್​ಹುದ್ದೆ ಸಂಖ್ಯೆ
    ಬ್ಯಾಂಕ್ ಆಫ್ ಇಂಡಿಯಾ438
    ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2000
    ಪಂಜಾಬ್ ಮತ್ತು ಸಿಂಧ್ ಬ್ಯಾಂಕ್463
    ಪಂಜಾಬ್ ನ್ಯಾಷನಲ್ ಬ್ಯಾಂಕ್1010
    ಯುಕೋ ಬ್ಯಾಂಕ್​364
    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ1260

    ಶೈಕ್ಷಣಿಕ ಅರ್ಹತೆ (Education Qualification):


    ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಪದವಿ ಪೂರ್ಣಗೊಳಿಸಿರಬೇಕು.


    ಇದನ್ನು ಓದಿ: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಕೆಲಸ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ


    ವಯಸ್ಸಿನ ಮಿತಿ (Age limit):


    ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು  ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.


    ವಯೋಮಿತಿ ಸಡಿಲಿಕೆ: (Age Relaxation)
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು


    ಅರ್ಜಿ ಶುಲ್ಕ (Application Fees)
    ಪ.ಜಾ, ಪ.ಪಂ, ವಿಕಲಚೇತನ ಮತ್ತು ನಿವೃತ್ತ ಸೇವಾ ಅಧಿಕಾರಿ ಭ್ಯರ್ಥಿಗಳು: 175 ರೂ.
    ಎಲ್ಲಾ ಇತರ ಅಭ್ಯರ್ಥಿಗಳು: 850 ರೂ.


    ಪಾವತಿ ವಿಧಾನ (Paymate Mode): ಆನ್‌ಲೈನ್


    ಆಯ್ಕೆ ಪ್ರಕ್ರಿಯೆ (Selection Process)
    ಆನ್‌ಲೈನ್ ಪೂರ್ವಭಾವಿ ಪರೀಕ್ಷೆ, ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ


    ಪ್ರಮುಖ ದಿನಾಂಕಗಳು (Application form filling process Dates)

    ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ01 ಜುಲೈ 2022
    ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಕೊನೆಯ ದಿನಾಂಕ21 ಜುಲೈ 2022
    ಪರೀಕ್ಷಾ ಪೂರ್ವ ತರಬೇತಿಗಾಗಿ ಕರೆ ಪತ್ರಗಳ ಡೌನ್‌ಲೋಡ್ಆಗಸ್ಟ್ 2022
    ಪರೀಕ್ಷೆಯ ಪೂರ್ವ ತರಬೇತಿಯ ದಿನಾಂಕಆಗಸ್ಟ್-2022
    ಆನ್‌ಲೈನ್ ಪರೀಕ್ಷೆಗಾಗಿ ಕರೆ ಪತ್ರಗಳ ಡೌನ್‌ಲೋಡ್ ದಿನಾಂಕಆಗಸ್ಟ್-2022
    ಆನ್‌ಲೈನ್ ಪರೀಕ್ಷೆಯ ದಿನಾಂಕ ಪೂರ್ವಭಾವಿಸೆಪ್ಟೆಂಬರ್2022
    ಆನ್‌ಲೈನ್ ಪರೀಕ್ಷೆಯ ಫಲಿತಾಂಶದ ದಿನಾಂಕಪೂರ್ವಭಾವಿ: ಸೆಪ್ಟೆಂಬರ್/ಅಕ್ಟೋಬರ್ 2022
    ಆನ್‌ಲೈನ್ ಪರೀಕ್ಷೆಗಾಗಿ ಕರೆ ಪತ್ರದ ಡೌನ್‌ಲೋಡ್ ದಿನಾಂಕಮುಖ್ಯ: ಸೆಪ್ಟೆಂಬರ್/ಅಕ್ಟೋಬರ್ 2022
    ಆನ್‌ಲೈನ್ ಪರೀಕ್ಷೆಯ ದಿನಾಂಕ - ಮುಖ್ಯಅಕ್ಟೋಬರ್ 2022
    ತಾತ್ಕಾಲಿಕ ಹಂಚಿಕೆಯ ದಿನಾಂಕಏಪ್ರಿಲ್2023

    ಅಧಿಸೂಚನೆ ಪ್ರಮುಖ ಲಿಂಕ್‌ಗಳು (Important Links)
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ibps.in


    ಇದನ್ನು ಓದಿ: ಕೈಗಾ ಅಣು​ ಸ್ಥಾವರದಲ್ಲಿ ಟ್ರೇಡ್​ ಅಪ್ರೆಂಟಿಸ್​ಗಳ ನೇಮಕಾತಿ; ಐಟಿಐ ಆದವರಿಗೆ ಅವಕಾಶ


    ಅರ್ಜಿ ಸಲ್ಲಿಕೆ ವಿಧಾನ (Apply process)
    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.


    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.


    - ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

    Published by:Seema R
    First published: