IBPS Clerk 2021 Recruitment: ಪ್ರಾದೇಶಿಕ ಭಾಷೆಗಳಲ್ಲಿ IBPS ಕ್ಲರ್ಕ್​ ಪರೀಕ್ಷೆ; ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

ನಾಳೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಐಬಿಪಿಎಸ್ ತಿಳಿಸಿದೆ.

ನಾಳೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಐಬಿಪಿಎಸ್ ತಿಳಿಸಿದೆ.

ನಾಳೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಐಬಿಪಿಎಸ್ ತಿಳಿಸಿದೆ.

  • Share this:
    ಹಣಕಾಸು ಸಚಿವಾಲಯದ ಸಲಹೆ ಬಳಿಕ ಇದೀಗ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ( Institute of Banking Personnel Selection- IBPS) ಪ್ರಾದೇಶಿಕ ಭಾಷೆಗಳಲ್ಲಿ ( regional languages) ಕ್ಲರ್ಕ್ ಹುದ್ದೆಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಅದರ ಅನುಸಾರವಾಗಿ ಕನ್ನಡದಲ್ಲೂ ಕೂಡ ಅಭ್ಯರ್ಥಿಗಳು ಪರೀಕ್ಷೆ ಎದುರಿಸಬಹುದಾಗಿದೆ. ನಾಳೆಯಿಂದಲೇ ಅಂದರೆ ಅಕ್ಟೋಬರ್​ 7ರಿಂದ ಐಬಿಪಿಎಸ್ ಕ್ಲರ್ಕ್ 2021 ನೇಮಕಾತಿ (IBPS Clerk 2021 Recruitment) ಪುನರಾರಂಭಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ibps.in ನಲ್ಲಿ ಅರ್ಜಿ ಸಲ್ಲಿಸಬಹುದು. 

    ಈ ವರ್ಷ ಪರೀಕ್ಷೆಯು ಇಂಗ್ಲಿಷ್, ಹಿಂದಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಹಂತದಲ್ಲಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಭಾಷೆಗಳ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪೂರ್ವಭಾವಿ ಮತ್ತು ಮುಖ್ಯ ಸೇರಿದಂತೆ ಎಲ್ಲಾ ಪರೀಕ್ಷೆಗಳು ಪ್ರಾದೇಶಿಕ ಭಾಷೆಯಲ್ಲಿ ನಡೆಯಲಿವೆ.

    ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ (Application form filling process to begin from tomorrow )

    ನಾಳೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಐಬಿಪಿಎಸ್ ತಿಳಿಸಿದೆ.

    ವಿವರವಾದ ಅಧಿಸೂಚನೆಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನೇಮಕಾತಿ ಮೂಲಕ ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 5830 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು

    ಇದನ್ನು ಓದಿ: FSSAI ನಲ್ಲಿ 225 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

    ಯಾವ್ಯಾವ ಬ್ಯಾಂಕ್​​ಗಳಲ್ಲಿ ನೇಮಕಾತಿ (Appointment to this Banks)
    ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಡ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ನಡೆಯಲಿದೆ

    ಇದನ್ನು ಓದಿ:ರಾಜ್ಯ ಖನಿಜ ನಿಗಮದಲ್ಲಿ ನೇಮಕಾತಿ; ತಿಂಗಳಿಗೆ 55 ಸಾವಿರ ವೇತನ

    ವಯೋಮಿತಿ (Age limit)
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳಾಗಿರಬೇಕು. ಎಸ್​ಸಿ, ಎಸ್​​ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

    ಪ್ರಮುಖ ದಿನಾಂಕ (important dates)
    ಐಬಿಪಿಎಸ್​ ಕ್ಲರ್ಕ್​ ಅಧಿಸೂಚನೆ 2021 - 11 ಜಲೈ 2021
    ಐಬಿಪಿಎಸ್ ಕ್ಲರ್ಕ್ ಅರ್ಜಿ ನಮೂನೆ 2021ಯನ್ನು ನಾಳೆಯಿಂದ ಅಂದರೆ 7 ಅಕ್ಟೋಬರ್​​ನಿಂದ ಮತ್ತೊಮ್ಮೆ ತೆರೆಯಲಾಗುವುದು
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ - ಅಕ್ಟೋಬರ್​ 27
    ಪರೀಕ್ಷೆ ಪೂರ್ವ ತರಬೇತಿ ಅರ್ಜಿ ಕರೆ- ನವೆಂಬರ್​ 2021
    ಪೂರ್ವಭಾವಿ ಪರೀಕ್ಷೆಗಾಗಿ ಐಬಿಪಿಎಸ್ ಆರ್‌ಆರ್‌ಬಿ ಪ್ರವೇಶ ಪತ್ರ 2021 ಕ್ಕೆ ಬಿಡುಗಡೆ - ನವೆಂಬರ್/ಡಿಸೆಂಬರ್ 2021
    ಐಬಿಪಿಎಸ್ ಕ್ಲರ್ಕ್ 2021 ಪ್ರಿಲಿಮ್ಸ್ ಪರೀಕ್ಷೆ - ಡಿಸೆಂಬರ್ 2021
    ಐಬಿಪಿಎಸ್ ಕ್ಲರ್ಕ್ ಫಲಿತಾಂಶ 2021- ಡಿಸೆಂಬರ್ 2021 ಅಥವಾ ಜನವರಿ 2022
    ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆಗಾಗಿ ಕರೆ ಪತ್ರವನ್ನು ಡೌನ್ಲೋಡ್ ಮಾಡಲು ಪ್ರಾರಂಭ ದಿನಾಂಕ - ಡಿಸೆಂಬರ್ 2021 ಅಥವಾ ಜನವರಿ 2022
    ಐಬಿಪಿಎಸ್ ಗುಮಾಸ್ತ 2021 ಮುಖ್ಯ ಪರೀಕ್ಷೆ - ಜನವರಿ ಅಥವಾ ಫೆಬ್ರವರಿ 2022
    ತಾತ್ಕಾಲಿಕ ಹಂಚಿಕೆ -ಎಪ್ರಿಲ್ 2022
    Published by:Seema R
    First published: