IBM Careers India: ಐಬಿಎಂ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ; 3.7 ಲಕ್ಷ ಪ್ಯಾಕೇಜ್, ಅರ್ಜಿ ಸಲ್ಲಿಸಲು ಹೀಗೆ ಮಾಡಿ

IBM Careers India: ಐಬಿಎಂ ಕಂಪನಿಯು ಮೇಲೆ ತಿಳಿಸಿದ ಸ್ಕಿಲ್ಸ್(ಕೌಶಲ್ಯಗಳ)​ ಜೊತೆಗೆ ಇನ್ನೂ ಹಲವು ಸಾಮರ್ಥ್ಯಗಳನ್ನು ಹೊಂದಿರಬೇಕು ಎಂದು ಹೇಳಿದೆ. ಜಾವಾ(Java), ಫೈಥಾನ್(Python), Node.js, ಸಾಫ್ಟ್​ವೇರ್ ಡೆವಲಪ್​ಮೆಂಟ್ ಲೈಫ್​ ಸೈಕಲ್ ಕಾನ್ಸೆಪ್ಟ್ಸ್​(Software Development Life Cycle Concepts)ಗಳನ್ನು ಹೊಂದಿರುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಐಬಿಎಂ

ಐಬಿಎಂ

  • Share this:
ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಮೆಶಿನ್( International Business Machine -IBM) ಕಾರ್ಪ್​ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತದ ಅನೇಕ ನಗರಗಳಲ್ಲಿ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ನೀಡಲಿದೆ. ಐಬಿಎಂ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಎದುರು ನೋಡುತ್ತಿದೆ. ವಿವಿಧ ಪ್ಲಾಟ್​ಫಾರ್ಮ್​ಗಳು ಮತ್ತು ತಂತ್ರಜ್ಞಾನಗಳಲ್ಲಿ ಡಿಸೈನ್​ ಅಪ್ಲಿಕೇಶನ್ಸ್(design applications)​, ರೈಟಿಂಗ್ ಕೋಡ್ಸ್(writing codes)​, ಟೆಸ್ಟ್ಸ್( tests), ಡಿಬಗ್ಗಿಂಗ್(debugging ) ಮತ್ತು ಅಪ್ಲಿಕೇಶನ್ಸ್​ ಸಾಫ್ಟ್​​ವೇರ್​​ಗಳನ್ನು ನಿರ್ವಹಿಸುವ ಕೌಶಲ್ಯ(maintaining Software Applications) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಐಬಿಎಂ ಟೆಕ್ ಕಂಪನಿ ಹೇಳಿದೆ. ಅಸೋಸಿಯೇಟ್​ ಸಿಸ್ಟಂ ಎಂಜಿನಿಯರಿಂಗ್ ಹುದ್ದೆಗಾಗಿ(Associate System Engineering post) ಫ್ರೆಶರ್ಸ್​(ಪದವೀಧರರು)ನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಅಭ್ಯರ್ಥಿಗೆ ಇರಬೇಕಾದ ಕೌಶಲ್ಯ/ಸಾಮರ್ಥ್ಯಗಳು

ಐಬಿಎಂ ಕಂಪನಿಯು ಮೇಲೆ ತಿಳಿಸಿದ ಸ್ಕಿಲ್ಸ್(ಕೌಶಲ್ಯಗಳ)​ ಜೊತೆಗೆ ಇನ್ನೂ ಹಲವು ಸಾಮರ್ಥ್ಯಗಳನ್ನು ಹೊಂದಿರಬೇಕು ಎಂದು ಹೇಳಿದೆ. ಜಾವಾ(Java), ಫೈಥಾನ್(Python), Node.js, ಸಾಫ್ಟ್​ವೇರ್ ಡೆವಲಪ್​ಮೆಂಟ್ ಲೈಫ್​ ಸೈಕಲ್ ಕಾನ್ಸೆಪ್ಟ್ಸ್​(Software Development Life Cycle Concepts)ಗಳನ್ನು ಹೊಂದಿರುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಉದ್ಯೋಗ ಎಲ್ಲಿ?

ಮೊದಲೇ ಹೇಳಿದಂತೆ ಭಾರತದ ಅನೇಕ ನಗರಗಳಲ್ಲಿ ಐಬಿಎಂ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬೆಂಗಳೂರು ಮುಂಬೈ, ಪುಣೆ, ದೆಹಲಿ/ಎನ್​ಸಿಆರ್​, ಗುರ್ಗಾಂವ್, ನೋಯ್ಡಾ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್ ನಗರಗಳಲ್ಲಿ ಟೆಕ್ ಕಂಪನಿಯು ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಿದೆ ಎಂದು ವೆಬ್​​ಸೈಟ್​​ನಲ್ಲಿ ಅಧಿಕೃತ ಉದ್ಯೋಗ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಆಯ್ಕೆ ಹೇಗೆ?

ಐಬಿಎಂ ಕ್ಯಾಂಪಸ್​ ಸೆಲೆಕ್ಷನ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಅಭ್ಯರ್ಥಿಗಳು ತಮ್ಮ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಐಬಿಎಂ ಟೆಕ್​ ಕಂಪನಿಯಲ್ಲಿ ಉದ್ಯೋಗ ಸಿಕ್ಕರೆ, ಕೆಲಸಕ್ಕೆ ಸೇರುವ ಮುನ್ನ ತಮ್ಮ ಪದವಿಯನ್ನು ಪೂರ್ಣಗೊಳಿಸಬೇಕು. ಬಿಇ, ಎಂಟೆಕ್, ಎಂಎಸ್ಸಿ, ಎಂಸಿಎಸಿಎಸ್/ಐಟಿ/ಗಣಿತ ಅಥವಾ ಇತರೆ ಸೆಮಿ ಐಟಿ/ ಸರ್ಕ್ಯೂಟ್ ಶಾಲೆಗಳಲ್ಲಿ 6.0 ಸಿಜಿಪಿಎ ಅಧ್ಯಯನ ಮಾಡಿರಬೇಕು. ಅಭ್ಯರ್ಥಿಯನ್ನು ಇಂಟರ್​ವ್ಯೂ ಮಾಡುವಾಗ ಎಲ್ಲಾ ವಿಷಯಗಳನ್ನು ಪರಿಗಣಿಸಲಾಗುತ್ತದೆ ಎಂದು ಐಬಿಎಂ ಹೇಳಿದೆ.

ಐಬಿಎಂ ಕಂಪನಿಯು ಸುಮಾರು 110 ವರ್ಷ ಹಳೆದ ಕಂಪನಿ. ಫೈನಾನ್ಸಿಯಲ್​ ಸರ್ವೀಸ್, ಹೆಲ್ತ್​ಕೇರ್, ಗವರ್ನಮೆಂಟ್, ಆಟೋಮೇಟಿವ್, ಟೆಲಿಕಮ್ಯುನಿಕೇಷನ್ಸ್​ ಮತ್ತು ಎಜುಕೇಷನ್​ ಇಂಡಸ್ಟ್ರಿಗಳಿಗೆ ಸಲಹೆ ಮತ್ತು ಸೇವೆಗಳನ್ನು ಒದಗಿಸುತ್ತಾ ಬಂದಿದೆ.

ಇದನ್ನೂ ಓದಿ:RRC Recruitment 2021: ಐಟಿಐ, 10th ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..!

ಸಂಬಳ ಎಷ್ಟು?

ಐಬಿಎಂ ಕಂಪನಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವವರು ನಿರೀಕ್ಷಿಸಬಹುದಾದ ಸಂಬಳ 1-21 ವರ್ಷ ಅನುಭವ ಇರುವವರಿಗೆ ಸರಾಸರಿ 3.7 ಲಕ್ಷ ರೂ(ವಾರ್ಷಿಕ) ಎಂದು ಅಂದಾಜಿಸಲಾಗಿದೆ. ಆಂಬಿಶನ್ ಬಾಕ್ಸ್​ ಮಾಡಿದ ಅಂದಾಜಿನ ಪ್ರಕಾರ, ಫ್ರೆಶರ್ಸ್​​ಗೆ 2.2 ಲಕ್ಷದಿಂದ 7.3 ಲಕ್ಷದವರೆಗೆ(ವಾರ್ಷಿಕ) ಇರಬಹುದು. ಅಸೋಸಿಯೇಟ್​ ಸಿಸ್ಟಮ್ಸ್​ ಎಂಜಿಇಯರಿಗ್​, ಗ್ಲಾಸ್​ಡೋರ್ಸ್​ ಮಾಡಿದ ಅಂದಾಜಿನ ಆಧಾರದ ಮೇಲೆ ವರ್ಷಕ್ಕೆ 4.25 ಲಕ್ಷ ರೂಪಾಯಿ ಇರುತ್ತದೆ.
Published by:Latha CG
First published: