IAF Recruitment: ವಾಯುಸೇನೆಯಲ್ಲಿ ಕ್ಲರ್ಕ್​​ ಹುದ್ದೆಗೆ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ

ಭಾರತೀಯ ವಾಯು ಸೇನೆಯಲ್ಲಿ ಅರ್ಜಿ ಆಹ್ವಾನಿಸಲಾದ ಲೋವರ್​ ಡಿವಿಷನ್​ ಕ್ಲರ್ಕ್ ಹುದ್ದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ವಾಯು ಸೇನೆ

ಭಾರತೀಯ ವಾಯು ಸೇನೆ

  • Share this:
    ಭಾರತೀಯ ವಾಯು ಸೇನೆಯಲ್ಲಿ (Indian Air Force) ಕೆಲಸ ಮಾಡುವ ಆಸಕ್ತಿ ಹೊಂದಿರುವ ಅನೇಕರಿಗೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ವಾಯು ಸೇನೆಯಲ್ಲಿ ಖಾಲಿ ಇರುವ ಲೋವರ್​ ಡಿವಿಷನ್​ ಕ್ಲರ್ಕ್ (Lower Division Clerk- LDC) ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜೂನ್​​ 20 ಆಗಿದೆ.

    ಭಾರತೀಯ ವಾಯು ಸೇನೆಯಲ್ಲಿ ಅರ್ಜಿ ಆಹ್ವಾನಿಸಲಾದ ಲೋವರ್​ ಡಿವಿಷನ್​ ಕ್ಲರ್ಕ್ ಹುದ್ದೆ ಸಂಪೂರ್ಣ ಮಾಹಿತಿ ಇಲ್ಲಿದೆ.



















    ಸಂಸ್ಥೆಯ ಹೆಸರುಇಂಡಿಯನ್ ಏರ್ ಫೋರ್ಸ್ (IAF)
    ಹುದ್ದೆಗಳ ಸಂಖ್ಯೆ4
    ಉದ್ಯೋಗ ಸ್ಥಳದೇಶಾದ್ಯಂತ
    ಹುದ್ದೆ ಹೆಸರುಲೋವರ್ ಡಿವಿಷನ್ ಕ್ಲರ್ಕ್ (LDC)

    ವೇತನ:  ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

    ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28 ನವೆಂಬರ್​ 2021ಕ್ಕೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು. ಗರಿಷ್ಠ 25 ವರ್ಷಗಳನ್ನು ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    ಹಿಂದುಳಿದ ಅಭ್ಯರ್ಥಿಗಳು: 03 ವರ್ಷಗಳು
    ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು
    ವಿಕಲಚೇತನ (ಪ. ಜಾ/ ಪ. ಪಂ) ಅಭ್ಯರ್ಥಿಗಳು: 15 ವರ್ಷಗಳು
    ವಿಕಲಚೇತನ (ಹಿಂದುಳಿದ ವರ್ಗ) ಅಭ್ಯರ್ಥಿಗಳು: 13 ವರ್ಷಗಳು
    ವಿಭಾಗೀಯ (ನಗರ) ಅಭ್ಯರ್ಥಿಗಳು: 15 ವರ್ಷಗಳು

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ದೈಹಿಕ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಆಯ್ಕೆ ಪ್ರಕ್ರಿಯೆ

    ಇದನ್ನು ಓದಿ: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ; ಯಾವುದೇ ಲಿಖಿತ ಪರೀಕ್ಷೆ ಇಲ್ಲ

    ಅರ್ಜಿ ಸಲ್ಲಿಕೆ ವಿಧಾನ

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.

    ಪ್ರಿಸೈಡಿಂಗ್ ಆಫೀಸರ್, ಸಿವಿಲಿಯನ್ ನೇಮಕಾತಿ ಮಂಡಳಿ, ಏರ್ ಫೋರ್ಸ್ ರೆಕಾರ್ಡ್ ಆಫೀಸ್, ಸುಬ್ರೊಟೊ ಪಾರ್ಕ್, ನವದೆಹಲಿ-110010.

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 21, 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜೂನ್ 2022

    ಅಧಿಕೃತ ವೆಬ್‌ಸೈಟ್: indianairforce.nic.in

    ಇದನ್ನು ಓದಿ: ಡಿಪ್ಲೋಮಾ, ಬಿಎಸ್ಸಿ ಪದವೀಧರರಿಗೆ ಸುವರ್ಣಾವಕಾಶ; ಬೆಂಗಳೂರಿನ ಐಐಐಟಿಯಲ್ಲಿ ಅರ್ಜಿ ಆಹ್ವಾನ

    ಪ್ರಮುಖ ಸೂಚನೆ

    - ಅಧಿಸೂಚನೆಯಲ್ಲಿ ನೀಡಲಾದ ಫಾರ್ಮ್ಯಾಟ್‌ನ ಪ್ರಕಾರ, ಈ ಕೆಳಗಿನ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ತುಂಬಿ, ಪೋಸ್ಟ್ ಮೂಲಕ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು.
    - ಅರ್ಜಿಯ ಜೊತೆಗೆ ಶಿಕ್ಷಣ ಅರ್ಹತೆ, ವಯಸ್ಸು, ತಾಂತ್ರಿಕ ಅರ್ಹತೆ, ದೈಹಿಕವಾಗಿ ಅಂಗವಿಕಲರು, ಅನುಭವ ಪ್ರಮಾಣಪತ್ರ, ಇ ಪ್ರಡಬ್ಲ್ಯೂಎಸ್​ ಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ಇರಬೇಕು.
    - ಜೊತೆಗೆ ಸ್ವಯಂ ದೃಢೀಕೃತ ಜಾತಿ ಪ್ರಮಾಣ ಪತ್ರ ಇರಬೇಕು
    - ಇತ್ತೀಚಿನ ಛಾಯಾಚಿತ್ರದೊಂದಿಗೆ (ಪಾಸ್‌ಪೋರ್ಟ್ ಗಾತ್ರ) ಸರಿಯಾಗಿ ಸ್ವಯಂ ದೃಢೀಕರಿಸಿದ ಅರ್ಜಿ ನಮೂನೆಯಲ್ಲಿ ಲಗತ್ತಿಸಬೇಕು.
    -ಈ ಅರ್ಜಿಯನ್ನು ಮೇಲ್ಕಂಡ ವಿಳಾಸಕ್ಕೆ 10 ರೂ ಸ್ಟಾಂಪ್​ನಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ರವಾನಿಸಬೇಕು.
    -ಅರ್ಜಿದಾರರು ಲಕೋಟೆಯ ಮೇಲೆ ಸ್ಪಷ್ಟವಾಗಿ ನಮೂದಿಸಲು “ಯಾವ ಹುದ್ದೆಗೆ ಅರ್ಜಿ ಮತ್ತು ಯಾವ ವರ್ಗ ಎಂಬುದನ್ನು ನಮೂದಿಸಬೇಕು.
    Published by:Seema R
    First published: