• Home
 • »
 • News
 • »
 • jobs
 • »
 • IAF Recruitment 2022: ಭಾರತೀಯ ವಾಯುಪಡೆಯಲ್ಲಿ SSLC, PUC ಆದವರಿಗೆ ಉದ್ಯೋಗ- ಸಂಬಳ 30,000

IAF Recruitment 2022: ಭಾರತೀಯ ವಾಯುಪಡೆಯಲ್ಲಿ SSLC, PUC ಆದವರಿಗೆ ಉದ್ಯೋಗ- ಸಂಬಳ 30,000

ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಗ್ನಿವೀರ್​ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 21 ವರ್ಷ ಮೀರಿರಬಾರದು.

 • Share this:

  IAF Recruitment 2022: ಭಾರತೀಯ ವಾಯುಪಡೆ(Indian Air Force)ಯಲ್ಲಿ ಅಗ್ನಿವೀರ್​ವಾಯು(Agniveervayu) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ(Application) ಹಾಕಬಹುದು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತರು ನವೆಂಬರ್ 23, 2022ಕ್ಕೆ ಮುನ್ನ ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಿ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಭಾರತೀಯ ವಾಯುಪಡೆ
  ಹುದ್ದೆಯ ಹೆಸರುಅಗ್ನಿವೀರ್​ವಾಯು
  ವಿದ್ಯಾರ್ಹತೆ10th, 12th, ಡಿಪ್ಲೊಮಾ
  ವೇತನಮಾಸಿಕ ₹ 30,000
  ಸ್ಥಳಅಖಿಲ ಭಾರತ
  ಅರ್ಜಿ ಶುಲ್ಕ250 ರೂ.
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/11/2022
  ಅರ್ಜಿ ಸಲ್ಲಿಸಲು ಕೊನೆ ದಿನ23/11/2022


  ಅರ್ಹತಾ ಮಾನದಂಡಗಳೇನು?


  ಶೈಕ್ಷಣಿಕ ಅರ್ಹತೆ:
  ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಗ್ನಿವೀರ್​ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ ಪೂರ್ಣಗೊಳಿಸಿರಬೇಕು.


  ಇದನ್ನೂ ಓದಿ:ಮೈಸೂರಿನ CFTRI ನಲ್ಲಿ ಕೆಲಸ ಖಾಲಿ ಇದೆ- ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಇಲ್ಲಿ Apply ಮಾಡಿ


  ವಯೋಮಿತಿ:
  ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಗ್ನಿವೀರ್​ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 21 ವರ್ಷ ಮೀರಿರಬಾರದು. ಅಭ್ಯರ್ಥಿಗಳು 27/7/2002 ರಿಂದ 27/12/2005 ರೊಳಗೆ ಜನಿಸಿರಬೇಕು.


  ವಯೋಮಿತಿ ಸಡಿಲಿಕೆ:
  ಅಗ್ನಿವೀರ್​ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


  ಅರ್ಜಿ ಶುಲ್ಕ:
  ಎಲ್ಲಾ ಅಭ್ಯರ್ಥಿಗಳಿಗೆ 250 ರೂ.
  ಪಾವತಿಸುವ ಬಗೆ: ಆನ್​ಲೈನ್​


  ವೇತನ: ಮಾಸಿಕ ₹ 30,000


  ಆಯ್ಕೆ ಪ್ರಕ್ರಿಯೆ:
  ದೈಹಿಕ ಸಾಮರ್ಥ್ಯ ಪರೀಕ್ಷೆ
  ಹೊಂದಿಕೊಳ್ಳುವಿಕೆ ಪರೀಕ್ಷೆ
  ವೈದ್ಯಕೀಯ ಪರೀಕ್ಷೆ
  ಆನ್​ಲೈನ್​ ಟೆಸ್ಟ್​


  ಇದನ್ನೂ ಓದಿ: JOB ALERT: ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು ಖಾಲಿ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/11/2022
  ಅರ್ಜಿ ಸಲ್ಲಿಸಲು ಕೊನೆಯ ದಿನ: 23/11/2022
  ಆನ್​ಲೈನ್ ಪರೀಕ್ಷೆ ನಡೆಯುವ ದಿನ: ಜನವರಿ 18-24, 2023
  ಪ್ರಾವಿಶನಲ್ ಸೆಲೆಕ್ಟ್​ ಲಿಸ್ಟ್​ ಪ್ರಕಟಣಾ ದಿನಾಂಕ: 31/05/2023


  ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 


  ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ indianairforce.nic.in ಗೆ ಭೇಟಿ ನೀಡಿ.


  ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ/ಗೊಂದಲಗಳಿದ್ದರೆ, ಆನ್​ಲೈನ್​ ಮೂಲಕ ಅರ್ಜಿ ಭರ್ತಿ ಮಾಡುವಾಗ ಯಾವುದೇ ಗೊಂದಲ ಎದುರಾದರೆ ದೂರವಾಣಿ ಸಂಖ್ಯೆ 011-25694209/25699606 ಅಥವಾ 020-25503105/25503106 ಗೆ ಕರೆ ಮಾಡಬಹುದು.

  Published by:Latha CG
  First published: