ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ (Hutti Gold Mines Company Limited) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ, ಫಿಟ್ಟರ್, ಸೆಕ್ಯುರಿಟಿ ಗಾರ್ಡ್, ಫೋರ್ಮನ್ ಹುದ್ದೆ ಸೇರಿದಂತೆ ಒಟ್ಟು 216 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಪಿಯುಸಿ, ಡಿಪ್ಲೊಮಾ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ಲೈನ್ (Online) ಮೂಲಕ ಸಲ್ಲಿಸಬಹುದಾಗಿದದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 9 ಆಗಿದೆ.
ಸಂಸ್ಥೆಯ ಹೆಸರು: ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML)
ಹುದ್ದೆಗಳ ಸಂಖ್ಯೆ: 216
ಉದ್ಯೋಗ ಸ್ಥಳ: ರಾಯಚೂರು - ಕರ್ನಾಟಕ
ಹುದ್ದೆಯ ಹೆಸರು: ಫಿಟ್ಟರ್, ಸಹಾಯಕ. ಫೋರ್ಮನ್, ಸೆಕ್ಯುರಿಟಿ ಗಾರ್ಡ್
ವೇತನ: 20900-48020 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ಶೈಕ್ಷಣಿಕ ಅರ್ಹತೆ |
ವೇತನ |
ಮ್ಯಾನೇಜ್ಮೆಂಟ್ ಟ್ರೈನಿ |
29 |
ಬಿಇ, ಸ್ನಾತಕೋತ್ತರ ಪದವಿ., ಎಂಬಿಎ, ಎಂ ಕಾಮ್, ಎಂಎಸ್ಸಿ, ಎಂಎ, ಬಿ ಕಾಂ |
47800-81200 ರೂ ಮಾಸಿಕ |
ಸಹಾಯಕ ಫೋರ್ಮನ್ |
43 |
ಡಿಪ್ಲೋಮಾ, ಬಿಎಸ್ಸಿ |
47800-81200 ರೂ ಮಾಸಿಕ |
ಭದ್ರತಾ ಅಧಿಕಾರಿ |
6 |
ಡಿಪ್ಲೋಮಾ, ಪದವಿ |
25000-48020 ರೂ ಮಾಸಿಕ |
ಫಿಸಿಯೋಥೆರಪಿಸ್ಟ್ |
1 |
ಬಿಎಸ್ಸಿ |
25000-48020 ಮಾಸಿಕ |
ಫಾರ್ಮಸಿಸ್ಟ್: |
1 |
ಡಿಪ್ಲೋಮಾ ಇನ್ ಫಾರ್ಮಾಸಿ, ಬಿ ಫಾರ್ಮಾ |
25000-48020 ರೂ ಮಾಸಿಕ |
ಫಿಟ್ಟರ್ ಗ್ರೇಡ್-II |
81 |
ಐಟಿಐ |
20920-42660 ರೂ ಮಾಸಿಕ |
ಎಲೆಕ್ಟ್ರಿಕಲ್ ಗ್ರೇಡ್-II |
11 |
ಐಟಿಐ |
20920-42660 ರೂ ಮಾಸಿಕ |
ಭದ್ರತಾ ಸಿಬ್ಬಂದಿ |
42 |
ಪಿಯುಸಿ, ಐಟಿಐ |
20920-42660 ರೂ ಮಾಸಿಕ |
ಲ್ಯಾಬ್ ಟೆಕ್ನಿಷಿಯನ್ ಗ್ರೇಡ್-IV |
1 |
ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ |
20920-42660 ರೂ ಮಾಸಿಕ |
ನರ್ಸಿಂಗ್ ನೆರವು |
1 |
ಎಎನ್ಎಂ |
20920-42660 ರೂ ಮಾಸಿಕ |
ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು ಮೀರಿರಬಾರದು
ವಯೋಮಿತಿ ಸಡಿಲಿಕೆ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ 1 ನಿವೃತ್ತ ಸೇವಾಧಿಕಾರಿ, ವಿಕಲಚೇತನ ಅಭ್ಯರ್ಥಿಗಳು: ರೂ.100 ರೂ
ಹಿಂದುಳಿದ ಅಭ್ಯರ್ಥಿಗಳು: ರೂ.300 ರೂ
ಸಾಮಾನ್ಯ ಅಭ್ಯರ್ಥಿಗಳು: ರೂ.600 ರೂ
ಇದನ್ನು ಓದಿ: ಈಶಾನ್ಯ ಗಡಿ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 5636 ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ ಪಾವತಿ ವಿಧಾನ:
ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 10 , 2022ರಿಂದ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 9, 2022
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
huttigold.karnataka.gov.in
ಇದನ್ನು ಓದಿ: ಆಕಾಶವಾಣಿಯಲ್ಲಿ ಸುದ್ದಿ ವಾಚಕರು, ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
-ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
-ಆನ್ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್ ಅನ್ನು ಕ್ಲಿಕ್ ಮಾಡಿ ಆನ್ಲೈನ್ನಲ್ಲಿ ಅನ್ವಯಿಸಿ -
ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. - ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ