HPCL Recruitment 2021: ಗ್ರಾಜುಯೇಟ್​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ₹ 25,000

HPCL ನಲ್ಲಿ ನೌಕರಿ ಮಾಡ ಬಯಸುವ ಅರ್ಹ ಅಭ್ಯರ್ಥಿಗಳು ನವೆಂಬರ್ 23 ರಿಂದ ಡಿಸೆಂಬರ್ 06 ರವರೆಗೆ ಆನ್​ಲೈನ್(Online)​ನಲ್ಲಿ ಅರ್ಜಿ ಹಾಕಬಹುದಾಗಿದೆ.

HPCL

HPCL

  • Share this:
HPCL Recruitment 2021: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (Hindustan Petroleum Corporation Limited-HPCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. HPCL​ನಲ್ಲಿ ಗ್ರಾಜುಯೇಟ್​ ಅಪ್ರೆಂಟಿಸ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. HPCL ನಲ್ಲಿ ನೌಕರಿ ಮಾಡ ಬಯಸುವ ಅರ್ಹ ಅಭ್ಯರ್ಥಿಗಳು ನವೆಂಬರ್ 23 ರಿಂದ ಡಿಸೆಂಬರ್ 06 ರವರೆಗೆ ಆನ್​ಲೈನ್(Online)​ನಲ್ಲಿ ಅರ್ಜಿ ಹಾಕಬಹುದಾಗಿದೆ.

ಅಭ್ಯರ್ಥಿಗಳು HPCLನ ಅಧಿಕೃತ ವೆಬ್​ಸೈಟ್​ hindustanpetroleum.com ಗೆ ಭೇಟಿ ನೀಡಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಷನ್​ ಲಿಮಿಟೆಡ್​
ಹುದ್ದೆಯ ಹೆಸರು ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ
 ವಿದ್ಯಾರ್ಹತೆ ಎಂಜಿನಿಯರಿಂಗ್​​
ಸಂಬಳ ಮಾಸಿಕ ₹ 25,000
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/12/2021

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 23/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/12/2021

ಇದನ್ನೂ ಓದಿ: Punjab & Sind Bank Recruitment 2021: ತಿಂಗಳಿಗೆ ₹ 84,000 ಸಂಬಳ; ಪಂಜಾಬ್ & ಸಿಂದ್ ಬ್ಯಾಂಕ್​ನಲ್ಲಿ ಉದ್ಯೋಗ

ವಿದ್ಯಾರ್ಹತೆ: 

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್, ಇನ್‌ಸ್ಟ್ರುಮೆಂಟೇಶನ್, ಕಂಪ್ಯೂಟರ್ ಸೈನ್ಸ್ (ಐಟಿ) ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಶೇ.60ರಷ್ಟು ಅಂಕಗಳೊಂದಿಗೆ ಪಡೆದಿರಬೇಕು.

ವಯೋಮಿತಿ:

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 25 ವರ್ಷದೊಳಗಿರಬೇಕು.ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, SC/ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ:Eastern Railway Recruitment 2021: ಪೂರ್ವ ರೈಲ್ವೆಯಲ್ಲಿ ವಿವಿಧ ಹುದ್ದೆಗಳು ಖಾಲಿ, PUC, ITI ಪಾಸಾದವರು ಅರ್ಜಿ ಸಲ್ಲಿಸಿ

ವೇತನ:

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,000 ಸ್ಟೇಫಂಡ್ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗುತ್ತದೆ.

ಶಾರ್ಟ್​ಲಿಸ್ಟಿಂಗ್​
ವೈಯಕ್ತಿಕ ಸಂದರ್ಶನ
Published by:Latha CG
First published: