HPCL Recruitment 2021: ಮಾಸಿಕ ವೇತನ ₹85,000; ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್​​​ನಲ್ಲಿ ಉದ್ಯೋಗ

HPCL ನಲ್ಲಿ ನೌಕರಿ ಮಾಡ ಬಯಸುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 11ರಿಂದ 31ರವರೆಗೆ ಆನ್​ಲೈನ್(Online)​ನಲ್ಲಿ ಅರ್ಜಿ ಹಾಕಬಹುದಾಗಿದೆ. ಅಭ್ಯರ್ಥಿಗಳು HPCLನ ಅಧಿಕೃತ ವೆಬ್​ಸೈಟ್​ hindustanpetroleum.com ಗೆ ಭೇಟಿ ನೀಡಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು.

HPCL

HPCL

  • Share this:
HPCL Recruitment 2021: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (Hindustan Petroleum Corporation Limited-HPCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. HPCL​ನಲ್ಲಿ ರಿಸರ್ಚ್​ ಅಸೋಸಿಯೇಟ್(Research Associate)​ ಮತ್ತು ಫಿಕ್ಸ್​ಡ್ ಟರ್ಮ್​ ಪ್ರಾಜೆಕ್ಟ್​ ಅಸೋಸಿಯೇಟ್(Fixed Term Project Associate)​ ಹುದ್ದೆಗಳು ಖಾಲಿ ಇವೆ. ಬಿಎಸ್ಸಿ(B.Sc), ಡಿಪ್ಲೋಮಾ(Diploma), ಎಂಎಸ್ಸಿ(M.Sc), ಎಂಟೆಕ್(M.Tech), ಪಿಎಚ್​ಡಿ(Ph.D), ಪಿಜಿ ಡಿಪ್ಲೋಮಾ(PG Diploma) ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. HPCL ನಲ್ಲಿ ನೌಕರಿ ಮಾಡ ಬಯಸುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 11ರಿಂದ 31ರವರೆಗೆ ಆನ್​ಲೈನ್(Online)​ನಲ್ಲಿ ಅರ್ಜಿ ಹಾಕಬಹುದಾಗಿದೆ.

ಅಭ್ಯರ್ಥಿಗಳು HPCLನ ಅಧಿಕೃತ ವೆಬ್​ಸೈಟ್​ hindustanpetroleum.com ಗೆ ಭೇಟಿ ನೀಡಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಹಿಂದೂಸ್ತಾನ್​ ಪೆಟ್ರೋಲಿಯಂ ಕಾರ್ಪೋರೇಷನ್​ ಲಿಮಿಟೆಡ್
ಹುದ್ದೆಯ ಹೆಸರು ರಿಸರ್ಚ್​ ಅಸೋಸಿಯೇಟ್ & ಫಿಕ್ಸ್​ಡ್ ಟರ್ಮ್ ಪ್ರಾಜೆಕ್ಟ್​ ಅಸೋಸಿಯೇಟ್
ವಿದ್ಯಾರ್ಹತೆ ಬಿಎಸ್ಸಿ, ಡಿಪ್ಲೋಮಾ, ಎಂಎಸ್ಸಿ, ಎಂಟೆಕ್, ಪಿಎಚ್​ಡಿ, ಪಿಜಿ ಡಿಪ್ಲೋಮಾ
ಉದ್ಯೋಗದ ಸ್ಥಳ ಬೆಂಗಳೂರು
ಸಂಬಳ ಮಾಸಿಕ ₹40,000-85,000
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ 11/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/10/2021ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 11/10/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/10/2021

ವಿದ್ಯಾರ್ಹತೆ:

ರಿಸರ್ಚ್​ ಅಸೋಸಿಯೇಟ್ & ಫಿಕ್ಸ್​ಡ್ ಟರ್ಮ್ ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ/ ಪಿಜಿ ಡಿಪ್ಲೋಮಾ/ ಬಿಎಸ್ಸಿ/ ಎಂಎಸ್ಸಿ/ ಎಂಟೆಕ್​/ ಪಿಎಚ್​ಡಿ ಮಾಡಿರಬೇಕು.

ವಯೋಮಿತಿ:

ಫಿಕ್ಸ್​​ಡ್​ ಟರ್ಮ್ ಪ್ರಾಜೆಕ್ಟ್​ ಅಸೋಸಿಯೇಟ್-28 ವರ್ಷ ಮೀರಿರಬಾರದು.
ಫಿಕ್ಸ್​​​ಡ್​ ಟರ್ಮ್​ ರಿಸರ್ಚ್​ ಅಸೋಸಿಯೇಟ್​- 31 ವರ್ಷ ಮೀರಿರಬಾರದು.

ಸಂಬಳ:

ಫಿಕ್ಸ್​​ಡ್​ ಟರ್ಮ್ ಪ್ರಾಜೆಕ್ಟ್​ ಅಸೋಸಿಯೇಟ್- ಮಾಸಿಕ ₹ 40,000-50,000
ಫಿಕ್ಸ್​​​ಡ್​ ಟರ್ಮ್​ ರಿಸರ್ಚ್​ ಅಸೋಸಿಯೇಟ್​- ಮಾಸಿಕ ₹ 65,000-85,000

ಆಯ್ಕೆ ಪ್ರಕ್ರಿಯೆ:

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: