• Home
  • »
  • News
  • »
  • jobs
  • »
  • Career Guidance: ಯಾವುದೇ ಅನುಭವ ಇಲ್ಲದೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯನ್ನು ಹೇಗೆ ಆರಂಭಿಸಬಹುದು? ಇಲ್ಲಿದೆ ಕೆಲವೊಂದು ಸಲಹೆಗಳು!

Career Guidance: ಯಾವುದೇ ಅನುಭವ ಇಲ್ಲದೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯನ್ನು ಹೇಗೆ ಆರಂಭಿಸಬಹುದು? ಇಲ್ಲಿದೆ ಕೆಲವೊಂದು ಸಲಹೆಗಳು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ಪರ್ಧೆಗಳ ಹೊರತಾಗಿಯೂ ಇಂದು ಟೆಕ್ ವಲಯದಲ್ಲಿ ನಿರಂತರ ವಿಕಸನವನ್ನು ಕಂಡುಕೊಳ್ಳಬಹುದಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯನ್ನು ಆರಂಭಿಸಲು ಕೊಂಚ ಪೂರ್ವ ತಯಾರಿಯನ್ನು ಮಾಡಬೇಕಾಗುತ್ತದೆ.

  • Trending Desk
  • 4-MIN READ
  • Last Updated :
  • Share this:

ಇಂದಿನ ಕಾಲದಲ್ಲಿ ತಂತ್ರಜ್ಞಾನವು  (Technology) ಸಂಶೋಧನೆ ಹಾಗೂ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ, ಹಾಗಾಗಿಯೇ ಹೆಚ್ಚು ಲಾಭದಾಯಕವಾಗಿರುವ ಈ ಕ್ಷೇತ್ರದ ಕಡೆಗೆ ಹೆಚ್ಚಿನ ಜನರು ತಮ್ಮ ನೋಟವನ್ನು ಹರಿಸುತ್ತಿದ್ದಾರೆ. ಸ್ಪರ್ಧೆಗಳ ಹೊರತಾಗಿಯೂ ಇಂದು ಟೆಕ್ ವಲಯದಲ್ಲಿ ನಿರಂತರ ವಿಕಸನವನ್ನು ಕಂಡುಕೊಳ್ಳಬಹುದಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯನ್ನು ಆರಂಭಿಸಲು ಕೊಂಚ ಪೂರ್ವ ತಯಾರಿಯನ್ನು ಮಾಡಬೇಕಾಗುತ್ತದೆ. ಅಂತೆಯೇ ಪ್ರಸ್ತುತ ಉದ್ಯೋಗ ವಲಯದಿಂದ ತಂತ್ರಜ್ಞಾನ ಕ್ಷೇತ್ರಕ್ಕೆ ನೀವು ಬದಲಾಯಿಸಬೇಕು ಎಂದುಕೊಂಡಿದ್ದಲ್ಲಿ ಅದಕ್ಕೆ ಕೂಡ ಕೆಲವೊಂದು ಸಲಹೆಗಳಿವೆ. ಈ ಸಲಹೆಗಳನ್ನು ಅಳವಡಿಸಿಕೊಂಡು ನೀವು ವೃತ್ತಿಯನ್ನು(Job) ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾಯಿಸಿದರೆ ಉದ್ಯೋಗದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ತಯಾರಿಗಳು ಏನು ಎಂಬುದನ್ನು ನೋಡೋಣ.


ನಿಮಗೆ ಸೂಕ್ತವಾಗುವ ವೃತ್ತಿವೇದಿಕೆಯನ್ನು ಆಯ್ದುಕೊಳ್ಳಿ


ತಂತ್ರಜ್ಞಾನಕ್ಕೆ ವೃತ್ತಿಜೀವನವನ್ನು ಬದಲಾಯಿಸಲು ನೀವು ಪ್ರಸ್ತುತ ಮಾಡುತ್ತಿರುವ ಉದ್ಯೋಗಕ್ಕೆ ಸೂಕ್ತವಾದ ಕ್ಷೇತ್ರವನ್ನು ಆರಿಸುವುದಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಫಿನ್‌ಟೆಕ್‌ನಲ್ಲಿ ವೃತ್ತಿಜೀವನವನ್ನು ಬದಲಾಯಿಸಿಕೊಳ್ಳಿ. ಇದರಿಂದ ಫಿನ್‌ಟೆಕ್ ವೃತ್ತಿರಂಗದಲ್ಲಿ ಹೆಚ್ಚಿನ ಗೆಲುವು ಸಾಧಿಸಲು ನಿಮಗೆ ಅನುಕೂಲಕರವಾಗಿರುತ್ತದೆ.


ಶಿಕ್ಷಕರಾಗಿ ಶಿಕ್ಷಣ ತಂತ್ರಜ್ಞಾನದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವುದು ಅಥವಾ ರಿಯಲ್ ಎಸ್ಟೇಟ್ ಸಲಹೆಗಾರರಾಗಿ ರಿಯಲ್ ಎಸ್ಟೇಟ್ ತಂತ್ರಜ್ಞಾನವನ್ನು ಪ್ರಾರಂಭಿಸುವುದು ನಿಮಗೆ ತಂತ್ರಜ್ಞಾನದ ಪೂರ್ವ ಜ್ಞಾನವಿಲ್ಲದೆ ನೀವು ಸುಗಮವಾಗಿ ತಂತ್ರಜ್ಞಾನ ಕ್ಷೇತ್ರವನ್ನು ಆರಿಸಬಹುದು.


ಸೂಕ್ತವಾಗಿರುವ ವೃತ್ತಿಯನ್ನು ಆಯ್ದುಕೊಳ್ಳುವ ಮೊದಲು ಈ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ. ನೀವು ಆಯ್ಕೆಮಾಡುವ ಕ್ಷೇತ್ರವು ನಿಮಗೆ ಅನುಕೂಲಕರವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ.


ಮರುಪರಿಶೀಲನೆ ಹಾಗೂ ಹಿಂದಿನ ಅನುಭವವನ್ನು ಬಳಸಿಕೊಂಡು ಅಪ್ಲೈ ಮಾಡಿ


ನೀವು ಬದಲಾಯಿಸುತ್ತಿರುವ ಹೊಸ ವೃತ್ತಿಯ ಕೌಶಲ್ಯಗಳು ಹಾಗೂ ಜವಬ್ದಾರಿಗಳೇನು ಎಂಬುದನ್ನು ಗಮನಿಸಿ. ನಿಮಗಿರುವ ಪ್ರಸ್ತುತ ಅನುಭವದ ಮೂಲಕ ಅವನ್ನು ಮರುಪರಿಶೀಲಿಸಿಕೊಳ್ಳಿ.


ಹಿಂದಿನ ಅನುಭವವನ್ನು ಹೊಸ ವೃತ್ತಿಗೆ ಅನ್ವಯಿಸಿ. ಟೆಕ್ ವಿಶ್ಲೇಷಕರಾಗಿ ಕೆಲಸ ಮಾಡಲು ಬಯಸಿದರೆ ಸಂವಹನ ಮತ್ತು ಸಹಯೋಗ, ನೆಟ್‌ವರ್ಕಿಂಗ್ ಮತ್ತು ಸಮಯ ನಿರ್ವಹಣೆಯಂತಹ ಸರಳ ಕೌಶಲ್ಯಗಳು ಪ್ರಸ್ತುತವಾಗಿವೆ.


ಹಿಂದಿನ ಕೌಶಲ್ಯಗಳನ್ನು ಪಟ್ಟಿ ಮಾಡಲು ಮತ್ತು ನಿಮ್ಮ ಹಿಂದಿನ ಕೆಲಸದ ಅನುಭವದಲ್ಲಿ ಮಾಡಿರುವ ಕೋರ್ಸ್‌ಗಳು ಮತ್ತು ತರಬೇತಿಯನ್ನು ಸೇರಿಸಲು ಇದು ಸಹಾಯ ಮಾಡುತ್ತದೆ.


ವೃತ್ತಿರಂಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿತುಕೊಳ್ಳುವುದು ಮುಖ್ಯವಾಗಿದೆ. ಕೌಶಲ್ಯಗಳನ್ನು ಹರಿತಗೊಳಿಸಲು ತರಬೇತಿಗಳನ್ನು ಪಡೆದುಕೊಳ್ಳಿ ಹಾಗೂ ನಿಮ್ಮ ಪ್ರಸ್ತುತ ವೃತ್ತಿಗೂ ಇನ್ನು ಆಯ್ಕೆಮಾಡಿಕೊಳ್ಳಬೇಕಾದ ವೃತ್ತಿಗೂ ಇರುವ ವ್ಯತ್ಯಾಸಗಳನ್ನು ಕಂಡುಕೊಳ್ಳಿ.


ಆರಂಭದಿಂದಲೇ ಕಲಿತುಕೊಳ್ಳಿ


ಹಿಂದಿನ ಅನುಭವಗಳನ್ನು ಮರುಪರಿಶೀಲನೆ ನಡೆಸುವುದರ ಮೂಲಕ ಆರಂಭದಿಂದ ಪ್ರಾರಂಭಿಸಲು ಮುಕ್ತವಾಗಿರಿ. ಹೊಸ ವೃತ್ತಿಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಿ.


ಮೂಲ ಕೋರ್ಸ್‌ಗಳನ್ನು ಆಯ್ದುಕೊಳ್ಳಿ ಹಾಗೂ ಹೊಸ ವೃತ್ತಿಜೀವನದಲ್ಲಿ ಪ್ರವೇಶ ಮಟ್ಟದ ಉದ್ಯೋಗ ಅರ್ಜಿಗಳಿಗೆ ಸಲ್ಲಿಸಿ ಹಾಗೂ ಉದ್ಯೋಗಕ್ಕೆ ಬೇಕಾಗಿರುವ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲು ಮುಕ್ತರಾಗಿರಿ.


ಇದನ್ನೂ ಓದಿ: ಈ ಮೂರು ಆ್ಯಪ್​ಗಳು ನಿಮ್ಮ ಮೊಬೈಲ್​ನಲ್ಲಿದ್ರೆ ಇಂದೇ ಡಿಲೀಟ್ ಮಾಡಿ! ಗೂಗಲ್​ನಿಂದ ಎಚ್ಚರಿಕೆಯ ಸಂದೇಶ


ಹೊಸವೃತ್ತಿಜೀವನದಲ್ಲಿ ಅನುಭವಗಳನ್ನು ಪಡೆದುಕೊಂಡಂತೆ ಇದನ್ನು ವೃತ್ತಿಗೆ ಅಳವಡಿಸಿಕೊಳ್ಳಿ. ತರಬೇತಿ ಕೌಶಲ್ಯಗಳಿಗೆ ಸೇರ್ಪಡೆಗೊಳ್ಳುವುದು, ಸಮ್ಮೇಳನಗಳಿಗೆ ಹಾಜರಾಗುವುದು ಹೀಗೆ ನಿಮ್ಮ ವೃತ್ತಿಗೆ ಭದ್ರ ಅಡಿಪಾಯವನ್ನು ಹಾಕಿ.


ಆರಂಭದಿಂದ ಯಾವುದೇ ಕ್ಷೇತ್ರದಲ್ಲಿ ಪ್ರಾವಿಣ್ಯತೆಯನ್ನು ಪಡೆದುಕೊಳ್ಳುವುದು ಆ ಕ್ಷೇತ್ರದಲ್ಲಿ ಸಾಧಿಸಲು ಸಹಕಾರಿಯಾಗಿದೆ. ಇದರಲ್ಲಿ ಯಾವುದೇ ಮುಜುಗರ ಹಾಗೂ ನಾಚಿಕೆ ಬೇಡ. ನೀವು ವೃತ್ತಿ ಆರಂಭಿಸುತ್ತಿರುವ ಕ್ಷೇತ್ರ ಸಂಪೂರ್ಣವಾಗಿ ಹೊಸದಾಗಿರುವುದರಿಂದ ಸಾಧ್ಯವಾದಷ್ಟು ಆರಂಭಿಕ ಜ್ಞಾನವನ್ನು ಸಂಪಾದಿಸಿಕೊಳ್ಳಿ.


ನಿಮ್ಮ ಹೊಸ ಟೆಕ್ ಇಂಡಸ್ಟ್ರಿಯಲ್ಲಿ ಪ್ರಮಾಣಪತ್ರಗಳನ್ನು ಗಳಿಸಿ


ಹೊಸ ಕೋರ್ಸ್‌ಗಳಿಗೆ ಸೇರಿದಂತೆ ಪ್ರಮಾಣಪತ್ರಗಳನ್ನು ಗಳಿಸುವುದು ವೃತ್ತಿಗೆ ಧನಾತ್ಮಕ ಅಂಶವನ್ನು ಹೆಚ್ಚಿಸುತ್ತದೆ. ಆರಂಭಿಕ ಕೋರ್ಸ್‌ಗಳಿಗೆ ಸೇರಿ ಹಾಗೂ ವೃತ್ತಿಯಲ್ಲಿ ಬೆಳೆದಂತೆ ಸುಧಾರಿತ ಕೋರ್ಸ್‌ಗಳಿಗೆ ಸೇರ್ಪಡೆಗೊಳ್ಳಿ.


ಹೊಸ ಕೋರ್ಸ್‌ಗಳಲ್ಲಿ ಪದವಿ ಗಳಿಸುವುದು ಲಾಭದಾಯಕವಾಗಿದ್ದರೂ ಇದಕ್ಕೆ ಕನಿಷ್ಠ 3-4 ವರ್ಷಗಳು ಬೇಕು. ಪ್ರಮಾಣಪತ್ರಗಳು ಹಾಗೂ ಸಂಬಂಧಿತ ಪದವಿಗಳನ್ನು ಹೊಂದಿರುವುದು ವೃತ್ತಿಯಲ್ಲಿ ನಿಮಗೆ ಸಾಕಷ್ಟು ಹಿರಿಮೆಯನ್ನು ತರುತ್ತದೆ.


ರೆಸ್ಯೂಮೆ ಹಾಗೂ ಲಿಂಕ್ಡ್‌ಇನ್ ಅನ್ನು ನವೀಕರಿಸಿ


ಅಗತ್ಯ ಪ್ರಮಾಣ ಪತ್ರಗಳು ಹಾಗೂ ಪದವಿಗಳನ್ನು ಪಡೆದುಕೊಂಡ ನಂತರ ನಿಮ್ಮ ರೆಸ್ಯೂಮೆ ಹಾಗೂ ಲಿಂಕ್ಡ್‌ಇನ್‌ನಂತಹ ವೃತ್ತಿ ತಾಣಗಳನ್ನು ನವೀಕರಿಸಿ. ಹೆಚ್ಚಿನ ನೇಮಕಾತಿದಾರರು ಲಿಂಕ್ಡ್‌ಇನ್ ಮೂಲಕ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸುವುದರಿಂದ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮವಾಗಿದೆ.


ನಿಮ್ಮ ರೆಸ್ಯೂಮೆಯಲ್ಲಿ ಕೌಶಲ್ಯಗಳು ಹಾಗೂ ಪ್ರಮಾಣಪತ್ರಗಳನ್ನು ಸೇರಿಸಿ. ಹೊಸ ಕ್ಷೇತ್ರದಲ್ಲಿ ಈ ಅಂಶಗಳು ಸಹಕಾರಿಯಾಗಿದೆ. ನಿಮ್ಮಲ್ಲಿರುವ ಕೌಶಲ್ಯಗಳನ್ನು ಎದ್ದುಗಾಣಿಸುವುದು ನಿಮ್ಮ ಅರ್ಹತೆಗಳನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ಪ್ರೊಫೈಲ್ ಅನ್ನು ಆಕರ್ಷಕಗೊಳಿಸುತ್ತದೆ.


career Guidence, Jobs offer, How to start a Career in Tech With No Experience, What is the easiest IT field to get into, What is the easiest tech job to get, How do I start an IT field career with no experience, Kannada News, Karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಉದ್ಯೋಗ ಮಾಡಲು ತಂತ್ರಜ್ಞಾನ ಬೇಕಾ, ಉದ್ಯೋಗವಕಾಶ ನಿಮಗಾಗಿ, ಈಸಿಯಾಗಿ ಅಪ್ಲೈ ಮಾಡಿ ಉದ್ಯೋಗಗಳಿಗೆ


ಲಿಂಕ್ಡ್‌ಇನ್‌ನಂತಹ ಉದ್ಯೋಗ ತಾಣಗಳನ್ನು ಆಗಾಗ್ಗೆ ನವೀಕರಿಸುತ್ತಿರಿ. ಇದರಿಂದ ಉದ್ಯೋಗದಾತರು ಅರಸುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಪಡೆದುಕೊಂಡಿರುವ ಕೌಶಲ್ಯಗಳು ಹಾಗೂ ವೃತ್ತಿ ಸಂಬಂಧಿತ ಕೋರ್ಸ್‌ಗಳನ್ನು ವೃತ್ತಿ ತಾಣದಲ್ಲಿ ಅಪ್‌ಡೇಟ್ ಮಾಡಿಕೊಳ್ಳಿ.


ಸಂಬಂಧಿತ ಇಂಟರ್ನ್‌ಶಿಪ್‌ಗೆ ಅರ್ಜಿ ಹಾಕುವುದು ಹಾಗೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು


ಹೊಸ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ ರೆಸ್ಯೂಮೆಯನ್ನು ನವೀಕರಿಸಿದಂತೆ ಪ್ರೊಫೈಲ್‌ನಲ್ಲಿ ಸಂಬಂಧಿತ ಇಂಟರ್ನ್‌ಶಿಪ್‌ಗಳನ್ನು ಮಾಡಿರುವುದು ಹಾಗೂ ಸ್ವಯಂಸೇವಕರಂತೆ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ಉದ್ಯೋಗದ ಮಹತ್ವವನ್ನು ಹೆಚ್ಚಿಸಬಹುದು.


ಇಂಟರ್ನ್‌ಶಿಪ್‌ಗಳನ್ನು ಅತ್ಯುತ್ತಮ ವೆಬ್‌ಸೈಟ್‌ಗಳಲ್ಲಿ ಹುಡುಕಿ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ಇಂಟರ್ನ್‌ಶಿಪ್ ಹುದ್ದೆಗಳಿಗೆ ನೇಮಕಾತಿ ಮಾಡುವವರನ್ನು ಸಂಪರ್ಕಿಸುವ ಮೂಲಕ ಇಂಟರ್ನ್‌ಶಿಪ್‌ಗಳನ್ನು ಮಾಡಬಹುದಾಗಿದೆ. ಸ್ವಯಂಸೇವಕರಾಗಿ ಕೆಲಸ ಮಾಡುವುದು ನಿಮ್ಮ ವೃತ್ತಿಗೆ ಬೇಕಾದ ಅನುಭವವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ.


ಪದವೀಧರ ಇಂಟರ್ನ್‌ಶಿಪ್‌ನ ತೊಂದರೆಯಿಲ್ಲದೆ ಪರಿವರ್ತನೆ ಬಯಸುತ್ತಿರುವ ವೃತ್ತಿ ಬದಲಾಯಿಸುವವರಿಗೆ ವಯಸ್ಕರಿಗೆ ಸಂಬಂಧಿತ ಇಂಟರ್ನ್‌ಶಿಪ್‌ಗಳು ಯೋಗ್ಯವಾಗಿವೆ.


ನಿಮ್ಮ ವೃತ್ತಿಜೀವನದ ಗುರಿಗಳೊಂದಿಗೆ ಹೊಂದಿಕೊಳ್ಳುವ ಕಂಪನಿಗಳನ್ನು ಅನ್ವೇಷಿಸಿ ಮತ್ತು ಸ್ವಯಂಸೇವಕರಾಗಿ ಅರ್ಜಿ ಸಲ್ಲಿಸಿ. ಈ ಅನುಭವಗಳು ನಿಮ್ಮ ರೆಸ್ಯೂಮೆ ಹಾಗೂ ಲಿಂಕ್ಡ್‌ಇನ್ ತಾಣ ಎರಡಕ್ಕೂ ಮಹತ್ವದ್ದಾಗಿದೆ.


ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ


ನೀವು ಬಯಸಿದ ಸ್ಥಳದಲ್ಲಿ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವುದನ್ನು ಒಂದು ಗುರಿಯನ್ನಾಗಿರಿಸಿಕೊಳ್ಳಿ. ಸಂಪರ್ಕ ಸಾಧಿಸಲು ಟೆಕ್ ಕಾನ್ಫರೆನ್ಸ್‌ಗಳು, ಮೀಟ್‌ಅಪ್‌ಗಳು ಮತ್ತು ಉದ್ಯೋಗ ಮೇಳಗಳಿಗೆ ಹಾಜರಾಗುವ ಮೂಲಕ ಕ್ಷೇತ್ರಗಳನ್ನು ಬಳಸಿಕೊಳ್ಳಿ.


ಟೆಕ್ ಕ್ಷೇತ್ರದಲ್ಲಿ ಉದ್ಯೋಗ ಬದಲಾಯಿಸಿಕೊಂಡ ಹಳೆಯ ಸಹೋದ್ಯೋಗಿಗಳನ್ನು ಹುಡುಕಿ ಹಾಗೂ ನಿಮಗೆ ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳಿಗಾಗಿ ಹುಡುಕಿ.


ವೃತ್ತಿಪರರೊಂದಿಗೆ ಸಂಪರ್ಕಸಾಧಿಸಲು ಸಾಮಾಜಿಕ ಮಾಧ್ಯಮವು ಪ್ರಬಲ ಸಾಧನವಾಗಿದೆ. ಲಿಂಕ್ಡ್‌ಇನ್, ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ನಿಮ್ಮ ವೃತ್ತಿಪರ ನೆಟ್‌ವರ್ಕ್ ಅನ್ನು ನಿರ್ಮಿಸುವ ಮೂಲಕ ನೀವು ತಜ್ಞರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಆ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.


ಪ್ರಬಲ ಟೆಕ್ ಸಮುದಾಯದ ಸದಸ್ಯರಾಗುವ ಮೂಲಕ ನಿಮ್ಮ ಗೋಚರತೆಯನ್ನು ಹೆಚ್ಚಿಸಬಹುದು. ವೃತ್ತಿಪರರೊಂದಿಗೆ ನಿಮ್ಮ ಸಂಪರ್ಕ ಹೆಚ್ಚಿದಂತೆ ಉದ್ಯಮ ಕ್ಷೇತ್ರದಲ್ಲಿ ನಿಮ್ಮ ವಿಸ್ತರಣೆಯಾಗುತ್ತದೆ ಹಾಗೂ ಅಪೇಕ್ಷಿತ ಗುರಿಯನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ.


ಟೆಕ್ ಪ್ರಾಜೆಕ್ಟ್ ಆರಂಭಿಸಿ


ನೀವು ತಂತ್ರಜ್ಞಾನಕ್ಕೆ ಪರಿವರ್ತನೆಗೆ ಸಿದ್ಧರಾಗಿರುವಿರಿ ಎಂಬುದನ್ನು ತೋರಿಸುವ ಅಂಶವೆಂದರೆ ನಿಜವಾದ ಟೆಕ್ ಯೋಜನೆಗಳೊಂದಿಗೆ ಪಾಂಡಿತ್ಯವನ್ನು ಪ್ರದರ್ಶಿಸುವುದಾಗಿದೆ.


ನಿಮ್ಮ ಪೋರ್ಟ್‌-ಫೋಲಿಯೊಗೆ ಇವುಗಳು ಉತ್ತಮ ಅಂಶಗಳಾಗಿವೆ. ನವೀನ ವಿನ್ಯಾಸಗಳನ್ನು ಬೆಳೆಸಲು ಇದು ನೆರವನ್ನು ನೀಡುತ್ತದೆ. ಸಾಧಿಸಬಲ್ಲೆ ಎಂದು ನಿಮಗನ್ನಿಸುವ ಟೆಕ್ ಪ್ರಾಜೆಕ್ಟ್ ಅನ್ನು ಆರಿಸಿಕೊಳ್ಳಿ ಹಾಗೂ ಪ್ರಾಜೆಕ್ಟ್ ಸಾಧಿಸುವ ಗುರಿಯನ್ನಿರಿಸಿಕೊಳ್ಳಿ.


ನಿಮ್ಮ ವೃತ್ತಿಯನ್ನು ಈಗಷ್ಟೇ ನೀವು ಪ್ರಾರಂಭಿಸುತ್ತಿರುವುದರಿಂದ ಹೊಸ ಕ್ಷೇತ್ರದಲ್ಲಿ ತಜ್ಞರೊಂದಿಗೆ ಸಹಕರಿಸಿ. ಟೆಕ್ ಸ್ಟಾರ್ಟ್‌ಅಪ್‌ಗಳಿಗಾಗಿ ಸ್ಮಾರ್ಟ್ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸುವಂತಹ ಟೆಕ್ ಯೋಜನೆಗಳು ನಿಮಗೆ ಉತ್ತಮವಾಗಿವೆ ಹಾಗೂ ವೃತ್ತಿಗೂ ಇದು ಸೂಕ್ತವಾಗಿದೆ.


ಉದ್ಯೋಗಗಳಿಗೆ ಅರ್ಜಿ ಹಾಕಿ


ಇಂಟರ್ನ್‌ಶಿಪ್, ಸ್ವಯಂಸೇವಕರಾಗಿ ಗುರುತಿಸಿಕೊಂಡಿರುವುದು, ಟೆಕ್ ಪ್ರಾಜೆಕ್ಟ್‌ಗಳಲ್ಲಿ ಅನುಭವ ಇದೀಗ ನಿಮ್ಮ ಇಚ್ಛೆಯ ಕ್ಷೇತ್ರವನ್ನು ಆಯ್ದುಕೊಳ್ಳುವ ಸಮಯವಾಗಿದೆ.


ನಿಮಗೆ ಬೇಕಾದ ಉದ್ಯೋಗ ರಂಗಕ್ಕಾಗಿ ಅರ್ಜಿ ಸಲ್ಲಿಸಿ ಹಾಗೂ ವೃತ್ತಿರಂಗದಲ್ಲಿ ಉನ್ನತಕೀರಣ ಮಾಡಿಕೊಂಡಂತೆ ಉದ್ಯೋಗವನ್ನು ಅಪ್‌ಗ್ರೇಡ್ ಮಾಡಿ ಲಿಂಕ್ಡ್‌ಇನ್ ಮತ್ತು ಉದ್ಯೋಗ ವೇದಿಕೆಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ನಿಮಗೆ ಬೇಕಾದ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವನ್ನು ನೀಡುತ್ತದೆ.


ಸಮಸ್ಯೆಗಳನ್ನು ನಿವಾರಿಸಿಕೊಂಡು ಅನುಭವ ಪಡೆದುಕೊಳ್ಳಿ


ಹೀಗೆ ಯಾವುದೇ ಅನುಭವವಿಲ್ಲದೆ ಟೆಕ್ ರಂಗದಲ್ಲಿ ವೃತ್ತಿಜೀವನವನ್ನು ಆರಂಭಿಸಬಹುದಾಗಿದೆ. ಈ ಅಂಶಗಳನ್ನು ಅಳವಡಿಸುವ ಮೂಲಕ ನೀವು ವೃತ್ತಿಯನ್ನು ಟೆಕ್ ಕ್ಷೇತ್ರದಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ.


ನೀವು ಬಯಸಿದ ಸ್ಥಾನವನ್ನು ಅರ್ಥಮಾಡಿಕೊಳ್ಳುವ ಮೂಲಕ, ಎಲ್ಲಿ ಪ್ರಾರಂಭಿಸಬೇಕು ಎಂಬುದರ ಕುರಿತು ನಿರ್ದೇಶನವನ್ನು ಪಡೆಯಲು ಈ ಅಂಶಗಳು ಸಹಾಕಾರಿಯಾಗಿದೆ.


ಅಂತಿಮವಾಗಿ, ತಾಂತ್ರಿಕ ವೃತ್ತಿಜೀವನವನ್ನು ಪ್ರಾರಂಭಿಸುವಾಗ ನೀವು ಎದುರಿಸಬಹುದಾದ ವಿಚಿತ್ರ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.

First published: