Interview Questions: Infosys, TCS, Wipro ಕಂಪನಿಗಳಲ್ಲಿ ಕೆಲಸದ ಸಂರ್ಶನಕ್ಕೆ ಈ ಪ್ರಶ್ನೆಗಳು ಸಾಮಾನ್ಯವಾಗಿ ಇರುತ್ತವೆ, ತಿಳ್ಕೊಂಡಿರಿ!

ಟೆಕ್ ದೈತ್ಯ ಕಂಪೆನಿಗಳು ಸಂದರ್ಶನ ನಡೆಸುವ ವಿಧಾನಗಳೇನು? ಯಾವ ತರಹದ ಪ್ರಶ್ನೆಗಳನ್ನು ಸಂದರ್ಶಕರು ಕೇಳಬಹುದು? ಇದಕ್ಕೆ ನೀವು ನೀಡುವ ಉತ್ತರ ಹೇಗಿರಬೇಕು? ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಅರಿತುಕೊಂಡು ಪೂರ್ವಸಿದ್ಧತೆ ನಡೆಸುವುದು ಮುಖ್ಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

ಅಸೆಂಚರ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್‌ ಟೆಕ್ ದೈತ್ಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬೇಕೆಂಬುದು ಹೆಚ್ಚಿನ ಪದವೀಧರರ ಬಯಕೆಯಾಗಿರುತ್ತದೆ. ಆದರೆ ಈ ಕಂಪನಿಗಳಲ್ಲಿ ನೀವು ಉದ್ಯೋಗ ಪಡೆಯಬೇಕು ಎಂದಾದಲ್ಲಿ ಉತ್ತಮ ಸಂದರ್ಶನ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು. ಟೆಕ್ ದೈತ್ಯ ಕಂಪೆನಿಗಳು ಸಂದರ್ಶನ ನಡೆಸುವ ವಿಧಾನಗಳೇನು? ಯಾವ ತರಹದ ಪ್ರಶ್ನೆಗಳನ್ನು ಸಂದರ್ಶಕರು ಕೇಳಬಹುದು? ಇದಕ್ಕೆ ನೀವು ನೀಡುವ ಉತ್ತರ ಹೇಗಿರಬೇಕು? ಎಂಬುದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಅರಿತುಕೊಂಡು ಪೂರ್ವಸಿದ್ಧತೆ ನಡೆಸುವುದು ಮುಖ್ಯವಾಗಿದೆ.


ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.


ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್):


ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ಟಿಸಿಎಸ್ ಇತ್ತೀಚೆಗೆ ತಾನೇ ಸಾಕಷ್ಟು ಉದ್ಯೋಗವಕಾಶಗಳನ್ನು ಒದಗಿಸಿದೆ. ಹಾಗಿದ್ದರೆ ಈ ಸಂಸ್ಥೆಗೆ ನೀವು ಸಂದರ್ಶನಕ್ಕೆ ಹೋಗುತ್ತಿದ್ದೀರಿ ಎಂದಾದಲ್ಲಿ ಸಂದರ್ಶನದ ರೀತಿ, ವೈಖರಿಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ ನೋಡಿ.


1. ನಮ್ಮ ವೆಬ್ ಪೋರ್ಟಲ್‌ನಲ್ಲಿ ಆನ್‌ಲೈನ್ ಪಾವತಿ ಬಳಸುವುದು ಹೇಗೆ


2. ರೆಫರೆನ್ಸ್‌ಗಳು, ಪಾಯಿಂಟರ್‌ಗಳ ನಡುವಿನ ವ್ಯತ್ಯಾಸಗಳೇನು?


3. ಜಾವಾದಲ್ಲಿ ಎಫ್‌ಟಿಪಿ ಅಳವಡಿಸಲು ಏನು ಅಗತ್ಯವಾಗಿದೆ?


4. ಕ್ರಿಪ್ಟೋಗ್ರಫಿ ಆಧಾರಿತ ಕೀಗಳು ನೆಟ್‌ವರ್ಕ್‌ನಾದ್ಯಂತ ವರ್ಗಾವಣೆಗೊಂಡ ಡೇಟಾದ ಸಿಂಧುತ್ವವನ್ನು ಹೇಗೆ ಖಚಿತಪಡಿಸುತ್ತವೆ?


5. ಫಿಬೊನಾಕಿ ಸೀರಿಸ್ ಎಂದರೇನು? ಪ್ರೋಗ್ರಾಮ್‌ ಮೂಲಕ ವಿವರಿಸಿ


6. ಪ್ರಕ್ರಿಯೆ ನಿರ್ವಹಣೆಗೆ ಬಳಸುವ ಸಿಸ್ಟಮ್ ಕರೆಗಳು ಯಾವುವು?


7. MPLS IP ಮತ್ತು MPLS ಲೇಬಲ್ ಪ್ರೋಟೋಕಾಲ್ LDP ಕಮಾಂಡ್ ನಡುವಿನ ವ್ಯತ್ಯಾಸವೇನು?


8. ಅಂದಾಜಿನ ನಿಖರತೆಯನ್ನು ಆಧರಿಸಿ ಪರಿಣಾಮ ಬೀರುವ ಅಂಶಗಳನ್ನು ಪಟ್ಟಿಮಾಡಿ


9. ಲೋಕಲ್ ವೇರಿಯಬಲ್ ಮತ್ತು ಇನ್ಸ್ಟನ್ಸ್ ವೇರಿಯಬಲ್ ಎಂದರೆ ಏನು?


10. ಲಿನಕ್ಸ್ 2.4.x ನಲ್ಲಿ IP ಮಾಸ್ಕ್ವೆರೇಡ್‌ನ ಅವಶ್ಯಕತೆಗಳು


ಇನ್ಫೋಸಿಸ್‌:


ಸಾಫ್ಟ್‌ವೇರ್ ಡೆವಲಪರ್‌ಗಳ ಕನಸಿನ ಕಂಪನಿ ಎಂಬುದಾಗಿಯೇ ಇನ್ಫೋಸಿಸ್‌ ಹೆಸರು ಗಳಿಸಿದ್ದು ಅತ್ಯುತ್ತಮ ಮಾರುಕಟ್ಟೆ ಮೌಲ್ಯ ಗಳಿಸಿದೆ. 35,000 ಎಂಜಿನಿಯರ್‌ಗಳನ್ನು ನೇಮಕಾತಿ ಮಾಡಲು ಇನ್ಫೋಸಿಸ್‌ ಘೋಷಣೆ ಮಾಡಿದೆ. ಹಾಗಾದರೆ ಈ ಸಂಸ್ಥೆಗೆ ಸಂದರ್ಶನ ನಡೆಸಲು ನಿಮ್ಮ ಪೂರ್ವ ತಯಾರಿ ಹೇಗಿರಬೇಕು. ಇಲ್ಲಿದೆ ನೋಡಿ
 1. ವಿಭಿನ್ನ ಮೌಲ್ಯಗಳೊಂದಿಗೆ ನಾವು ಮ್ಯಾಕ್ರೋವನ್ನು ಹೇಗೆ ಮರು ವ್ಯಾಖ್ಯಾನಿಸಬಹುದು?

 2. ಸಿಸ್ಟಮ್ ಕ್ಲಾಸ್‌ನ ಉದ್ದೇಶವೇನು ಎಂದು ನೀವು ಯೋಚಿಸುತ್ತೀರಿ?

 3. ನಾವು ಪಾಯಿಂಟರ್‌ನಲ್ಲಿ ಇಂಕ್ರಿಮೆಂಟ್ ಆಪರೇಟರ್ ಬಳಸಿದಾಗ ಏನಾಗುತ್ತದೆ?

 4. ಒರಾಕಲ್ Apps DBAನಲ್ಲಿ ಪ್ಯಾಚಿಂಗ್ ಎಂದರೇನು

 5. ಆಪ್ಲೆಟ್ ವರ್ಗದ ತಕ್ಷಣದ ಸೂಪರ್ ಕ್ಲಾಸ್ ಎಂದರೇನು?

 6. RDBMS ಎಂದರೇನು?

 7. ನಾವು ಒಂದು ಶ್ರೇಣಿಯನ್ನು ಇನ್ನೊಂದಕ್ಕೆ ಹೇಗೆ ನಿಯೋಜಿಸಬಹುದು?

 8. ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ನಿರ್ವಾಹಕರ ಆದ್ಯತೆಯ ಕ್ರಮ ಯಾವುದು?

 9. ಡೇಟಾಬೇಸ್‌ನಲ್ಲಿರುವ ಫೀಲ್ಡ್ ಎಂದರೇನು?

 10. ನೋಟು ಅಮಾನ್ಯೀಕರಣದ ನಂತರ ನಾಗರಿಕರು ಯಾವ ಲಾಭ ಅಥವಾ ನಷ್ಟ ಎದುರಿಸಿದರು?


ಎಚ್‌ಸಿಎಲ್ ಟೆಕ್ನಾಲಜೀಸ್:


ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ಈ ಸಂಸ್ಥೆಯು ಹೆಚ್ಚಿನ ನೇಮಕಾತಿ ಪ್ರಕ್ರಿಯೆಗಳನ್ನು ಆಯೋಜಿಸಿದ್ದು ಸಂದರ್ಶಕರ ಪ್ರಶ್ನೆಗಳಿಗೆ ನೀವು ಪೂರ್ವತಯಾರಿ ನಡೆಸಿದಲ್ಲಿ ಸಂದರ್ಶನ ಸುಲಭವಾಗಿರುತ್ತದೆ. ಹಾಗಾದರೆ ಯಾವೆಲ್ಲಾ ಪ್ರಶ್ನೆಗಳಿಗೆ ಮಹತ್ವ ನೀಡಬೇಕು ಎಂಬುದನ್ನು ತಿಳಿದುಕೊಳ್ಳೋಣ.


1. UNIQUE ಹಾಗೂ ಪ್ರೈಮರಿ ಕೀ ನಿರ್ಬಂಧಗಳ ನಡುವಿನ ವ್ಯತ್ಯಾಸಗಳೇನು?


2. ಸ್ಟ್ರಿಂಗ್ ಅನ್ನು ಹೊಸ ಮತ್ತು ಲಿಟರಲ್ ರಚಿಸುವುದರ ನಡುವಿನ ವ್ಯತ್ಯಾಸವೇನು?


3. ಸ್ಟ್ರಿಂಗ್ ಬಫರ್, ಸ್ಟ್ರಿಂಗ್ ಮತ್ತು ಸ್ಟ್ರಿಂಗ್ ಬಿಲ್ಡರ್ ನಡುವಿನ ವ್ಯತ್ಯಾಸವೇನು?


4. ಲಿಂಕ್ ಮಾಡಿದ ಲಿಸ್ಟ್ ಎಂದರೇನು? ಸಿಂಗಲ್ ಹಾಗೂ ಡಬಲ್ ಅನ್ನು ಪ್ರತ್ಯೇಕವಾಗಿ ವಿವರಿಸಿ


5. ಕೆಲವೊಂದು ಈವೆಂಟ್ ನಡೆಯಬೇಕೆಂದು ಪ್ರೊಸೆಸ್ ನಿರೀಕ್ಷಿಸುತ್ತಿರುವಾಗ ಪ್ರೊಸೆಸರ್ ಸ್ಟೇಟಸ್ ಏನಾಗಿರುತ್ತದೆ?


6. ಜಾವಾದಲ್ಲಿ System.out.println ಹೇಗೆ ಕೆಲಸ ಮಾಡುತ್ತದೆ?


7. ಜಾವಾ ರನ್-ಟೈಮ್ ಕಾನ್ಸ್ಟಂಟ್ ಪೂಲ್ ಎಂದರೇನು?


8. ಅಬ್ಸ್ಟ್ರಾಕ್ಟ್ ಕ್ಲಾಸ್ ಎಂದರೇನು?


9. ಕ್ಯಾಸ್‌ಕೇಡಿಂಗ್ ಸ್ಟೈಲ್ ಶೀಟ್ ಎಂದರೇನು?


10. ಗಾರ್ಬೇಜ್ ಕಲೆಕ್ಟರ್ ಎಂದರೇನು?


ಇದನ್ನೂ ಓದಿ:Jill Biden: ಅಮೆರಿಕ ಅಧ್ಯಕ್ಷನ ಹೆಂಡತಿಯಾದ್ರೇನಂತೆ, ಕೆಲಸ ಮಾಡೋದು ತಪ್ಪಲ್ಲ..! ಡ್ಯೂಟಿಗೆ ವಾಪಸ್ಸಾದ ಬಿಡೆನ್ ಪತ್ನಿ

ಅಸೆಂಚರ್:


ಅಸೆಂಚರ್ ಕಂಪನಿಗೆ ನೀವು ಸಂದರ್ಶನಕ್ಕೆ ಹೋಗುತ್ತಿದ್ದೀರಿ ಎಂದಾದಲ್ಲಿ ಪೂರ್ವಸಿದ್ಧತೆ ಹೇಗಿರಬೇಕು ಹಾಗೂ ಅಲ್ಲಿ ಕೇಳುವ ಪ್ರಶ್ನೆಗಳು ಯಾವ ರೀತಿಯದ್ದಾಗಿರುತ್ತವೆ ಎಂಬುದರ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರಬೇಕಾಗುತ್ತದೆ. ಸಂದರ್ಶನದಲ್ಲಿ ಕೇಳುವ ಮುಖ್ಯ ಪ್ರಶ್ನೆಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ಸಹಕಾರಿಯಾಗಿರುತ್ತದೆ.
 1. JDK, JRE ಹಾಗೂ JVM ನಡುವಿನ ವ್ಯತ್ಯಾಸಗಳೇನು?

 2. TCP/IP ಹಾಗೂ UDP ಸಾಕೆಟ್‌ಗಿರುವ ವ್ಯತ್ಯಾಸಗಳೇನು?

 3. ಪ್ಲಗ್-ಇನ್‌ನ ಕ್ಲಾಸ್‌ಪಾತ್ ಏನು?

 4. ಕ್ಯಾಶೆ ಮೆಮೊರಿ ಹಾಗೂ ಅದರ ಬಳಕೆಯ ಕುರಿತು ಮಾಹಿತಿ ಏನು?

 5. ಫ್ಯಾಟ್ ಹಾಗೂ NTFSಗೆ ಇರುವ ವ್ಯತ್ಯಾಸಗಳೇನು?

 6. TCP / IP ಪ್ರೊಟೊಕಾಲ್ ಸೂಟ್‌ನ ವಿವಿಧ ಲೇಯರ್‌ಗಳಲ್ಲಿರುವ ಡೇಟಾ ಯುನಿಟ್‌ಗಳೇನು?

 7. SQL ಸರ್ವರ್ ಡೇಟಾಬೇಸ್‌ನ ಡಿಫಾಲ್ಟ್ ಐಸೋಲೇಶನ್ ಲೆವೆಲ್ ಯಾವುದು?

 8. ಡೇಟಾ ವೇರ್‌ಹೌಸ್‌ನ ಸರಿಯಾದ ಸೈಜ್ ಯಾವುದು?

 9. SAP SCM 4.1 ನ ಆರ್ಕಿಟೆಕ್ಚರ್ ಏನು?

 10. ಟೇಬಲ್‌ಸ್ಪೇಸ್‌ನಲ್ಲಿ ಫ್ರೀ ಎಕ್ಸ್‌ಟೆಂಟ್‌ಗಳನ್ನು ನೋಡಲು ಯಾವ ಡೇಟಾ ಡಿಕ್ಶನರಿ ವೀಕ್ಷಣೆ ಮಾಡುತ್ತೀರಿ?


ವಿಪ್ರೋ:


ವಿಪ್ರೋ ಅತ್ಯುನ್ನತ ಮಟ್ಟದ ಐಟಿ ಕಂಪನಿ ಎಂದೆನಿಸಿದ್ದು ಐಟಿ ಸಮೂಹಗಳಲ್ಲೇ ದೈತ್ಯ ಸಂಸ್ಥೆಯಾಗಿ ರೂಪುಗೊಂಡಿದೆ. ಈ ಕಂಪನಿಗೆ ಸಂದರ್ಶನಕ್ಕೆ ತಯಾರಿ ನಡೆಸಬೇಕು ಎಂದಾದಲ್ಲಿ ಪೂರ್ವ ತಯಾರಿ ನಡೆಸಿರಲೇಬೇಕು. ಇಲ್ಲಿ ಕೇಳುವ ಪ್ರಮುಖ ಪ್ರಶ್ನೆಗಳತ್ತ ಗಮನಹರಿಸೋಣ.
 1. asp.net ಹಾಗೂ HTML ನಡುವಿನ ವ್ಯತ್ಯಾಸವೇನು?

 2. ಜಾವಾ ಡೀಫಾಲ್ಟ್ ಆರ್ಗ್ಯುಮೆಂಟ್‌ಗಳನ್ನು ಅನುಮತಿಸುತ್ತದೆಯೇ?

 3. ಟೈಪ್‌ಕಾಸ್ಟಿಂಗ್ ವಿವರಿಸಿ

 4. ಜಾವಾ ಸಾಕೆಟ್‌ಗಳ ಪ್ರಯೋಜನಗಳೇನು?

 5. ವಾಲ್ಯೂಸ್ ಕಲೆಕ್ಶನ್ ವ್ಯೂ ಎಂದರೇನು?

 6. ಅರೇಸ್‌ ಮೇಲೆ ಅರೇ ಲಿಸ್ಟ್‌ನ ಅನುಕೂಲಗಳೇನು?

 7. ಒರೇಕಲ್ ಆಪ್ಸ್ ಡಿಬಿಎಯಲ್ಲಿ ಕ್ಲೋನಿಂಗ್ ಎಂದರೇನು?

 8. RDBMS ಎಂದರೇನು?

 9. ಡೈನಾಮಿಕ್ ಬೈಂಡಿಂಗ್ ವಿವರಿಸಿ

 10. ಜಾವಾದಲ್ಲಿ ಎನ್ಕ್ಯಾಪ್ಸುಲೇಷನ್ ಎಂದರೇನು?


ಟೆಕ್ ಮಹೀಂದ್ರಾ:


ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಗಳಿಸಿರುವ ಟೆಕ್ ಮಹೀಂದ್ರಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅತ್ಯುನ್ನತ ಉದ್ಯೋಗವಕಾಶಗಳನ್ನು ಒದಗಿಸುತ್ತಿವೆ. ಈ ಸಂಸ್ಥೆಯಲ್ಲಿ ನೀವು ಸಂದರ್ಶನಕ್ಕೆ ಹೋಗುವಾಗ ಯಾವೆಲ್ಲಾ ಪ್ರಶ್ನೆಗಳ ಮೇಲೆ ಗಮನ ಹರಿಸಬೇಕು ಎಂಬುದನ್ನು ಕುರಿತು ಮಾಹಿತಿ ನೀಡುತ್ತಿದ್ದೇವೆ
 1. ಜೆಕ್ವೆರಿ ಎಂದರೇನು?

 2. ಪ್ರಾಜೆಕ್ಟ್ ಇಪ್ಲಿಮೆಂಟೇಶನ್‌ನಲ್ಲಿ ರಿಸ್ಕ್ ಫ್ಯಾಕ್ಟರ್‌ಗಳೇನು?

 3. ಅರೇ ಲಿಸ್ಟ್ ಮತ್ತು ಲಿಂಕ್ಡ್ ಲಿಸ್ಟ್ ಭಿನ್ನತೆ ಏನು?

 4. 1,4,27, 256 ನಲ್ಲಿ ಮಿಸ್ ಆಗಿರುವ ಸಂಖ್ಯೆ ಯಾವುದು?

 5. set xನ ಸತತ ಐದು ಸಮಸಂಖ್ಯೆಗಳ ಮೊತ್ತವು 440 ಆಗಿದೆ. ಎರಡನೆಯ ಕನಿಷ್ಠ ಸಂಖ್ಯೆಯು 121 ಆಗಿದ್ದು ಸೆಟ್ xಗಿಂತ ಎರಡು ಪಟ್ಟು ಕಡಿಮೆಯಾಗಿರುವ ಪೂರ್ಣಾಂಕಗಳ ವಿಭಿನ್ನ ಗುಂಪಿನ ಮೊತ್ತ ಹುಡುಕಿ


ಕಾಗ್ನಿಜೆಂಟ್:


ಮಾರುಕಟ್ಟೆಯಲ್ಲಿ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಕಾಗ್ನಿಜೆಂಟ್ ಕಂಪನಿಯು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿ ಸ್ಥಾನ ಪಡೆದಿದೆ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳನ್ನು ನೋಡೋಣ.


1. ಮ್ಯಾನುವಲ್ ಟೆಸ್ಟಿಂಗ್ ಎಂದರೇನು?


2. ವೆಬ್ ಸರ್ವೀಸ್ ಎಂದರೇನು?


3. HTML ಹಾಗೂ HTML5 ಗೆ ಇರುವ ವ್ಯತ್ಯಾಸಗಳೇನು?


4. SCD ವಿಧಗಳು ಯಾವುವು?


5. ಡಾಟ್‌ನೆಟ್ ಎಂದರೇನು?


6. ಜಾವಾಸ್ಕ್ರಿಪ್ಟ್ ಎಂದರೇನು?


7. ಕಂಟಿನ್ಯಸ್‌ ಇಂಟಿಗ್ರೇಶನ್ ಎಂದರೇನು?


8. ಅಡ್ವಾನ್ಸ್ಡ್‌ HTML ಎಂದರೇನು?


ಕ್ಯಾಪ್‌ಜೆಮಿನಿ:


ತಮ್ಮ ವೃತ್ತಿಜೀವನವನ್ನು ಅತ್ಯುತ್ತಮಗೊಳಿಸಲು ಕ್ಯಾಪ್‌ಜೆಮಿನಿಯಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲವನ್ನು ಅನೇಕರು ಹೊಂದಿರುತ್ತಾರೆ. ಸಂದರ್ಶಕರು ಯಾವೆಲ್ಲಾ ಪ್ರಶ್ನೆಗಳನ್ನು ಕೇಳಬಹುದು? ಎಂಬುದನ್ನು ಅರಿತುಕೊಳ್ಳೋಣ


1. ಆಬ್ಜೆಕ್ಟ್ ಹಾಗೂ ಕ್ಲಾಸ್‌ಗೆ ಇರುವ ಭಿನ್ನತೆಗಳೇನು?


2. ಟೆಸ್ಟಿಂಗ್ ಲೈಫ್ ಸೈಕಲ್ ಎಂದರೇನು?


3. ಪೈಥಾನ್ ಎಂದರೇನು?


4. ಕ್ವಾಲಿಟಿ ಮ್ಯಾನುವಲ್ ಎಂದರೇನು?


5. ನಿಮ್ಮ ಫೈಲ್‌ಸ್ಟೆಮ್ ಪರಿಶೀಲಿಸಲು ಯಾವ ಕಮಾಂಡ್ ನೀವು ಬಳಸಬೇಕು?


6. ಜಾವಾ ಎಂದರೇನು?


7. ASQC ಎಂದರೇನು?


ಮೈಂಡ್‌ಟ್ರೀ:


ಮೈಂಡ್‌ಟ್ರೀನಲ್ಲಿ ನೀವು ಸಂದರ್ಶನಕ್ಕೆ ಹೋಗಬೇಕು ಎಂದಾದಲ್ಲಿ ಪ್ರಶ್ನಾವಳಿಗಳ ಪೂರ್ವಸಿದ್ಧತೆಗಳನ್ನು ಹೇಗೆ ನಡೆಸಬೇಕು? ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳ ಕುರಿತು ಇಲ್ಲಿದೆ ಕೆಲವೊಂದು ವಿವರಗಳು ಇಲ್ಲಿವೆ


1. ರಿಕರ್ಷನ್ ನಿರ್ವಹಿಸಲು ಬಳಸುವ ಡೇಟಾ ಸ್ಟ್ರಕ್ಚರ್‌ಗಳು ಯಾವುವು?


2. IP ಮಾಸ್ಕ್ವೆರೇಡ್ ಹೇಗೆ ಕೆಲಸ ಮಾಡುತ್ತದೆ?


3. ನೆಟ್‌ವರ್ಕ್‌ನಲ್ಲಿ ವೈರಸ್ ಮೂಲ ಪತ್ತೆಹಚ್ಚುವುದು ಹೇಗೆ?


4. OS ಒದಗಿಸಿದ ಬೇಸ್ ಸೇವೆಗಳು ಯಾವುವು?


5. ಮೆಮೊರಿಯಲ್ಲಿ ಪೇಜ್‌ಗಾಗಿ ಎರಡು ಪೇಜಿಂಗ್ ಸ್ಟೇಟ್‌ಗಳನ್ನು ಹೆಸರಿಸಿ?


ಇದನ್ನೂ ಓದಿ:Mysuru Dasara Elephant: ಪುಂಡಾಟಿಕೆ ಮೆರೆದು ಸೆರೆ ಸಿಕ್ಕ ನಾಲ್ಕೇ ವರ್ಷದಲ್ಲೇ ದಸರಾಗೆ ಆಯ್ಕೆಯಾದ ‘ಅಶ್ವತ್ಥಾಮ‘..!

ಎಲ್‌ ಅಂಡ್‌ ಟಿ ಇನ್‌ಫೋಟೆಕ್:


ಲಾರ್ಸೆನ್ ಮತ್ತು ಟ್ಯೂಬ್ರೊ ಲಿಮಿಟೆಡ್ ಎಂಜಿನಿಯರಿಂಗ್, ತಂತ್ರಜ್ಞಾನ, ಉತ್ಪಾದನೆ ಮತ್ತು ಸಲಹಾ ಕಂಪನಿಯಾಗಿದೆ. ಈ ಸಂಸ್ಥೆಯಲ್ಲಿ ಸಂದರ್ಶನ ಪ್ರಶ್ನೆಗಳು ಹೇಗಿರಬಹುದು ಎಂಬ ವಿವರಗಳು ಇಲ್ಲಿವೆ


1. SDLC ಎಂದರೇನು?


2. ಕ್ಯಾಸ್ಕೇಡಿಂಗ್ ಸ್ಟೈಲ್ ಶೀಟ್ಸ್ (CSS) ಎಂದರೇನು?


3. ಸಬ್‌ಸ್ಟ್ರಾಶನ್‌ಗಳನ್ನು ವಿನ್ಯಾಸಗೊಳಿಸುವುದು ಹೇಗೆ?


4. ASP.Net ನಲ್ಲಿ ಮಾಸ್ಟರ್ ಪೇಜ್ ಎಂದರೇನು?


5. ಅಬ್‌ಸ್ಟ್ರಾಕ್ಟ್ ಮತ್ತು ಇಂಟರ್ಫೇಸ್ ಎಂದರೇನು?


6. ಅರೇ ಎಂದರೇನು?


ಸೀಮೆನ್ಸ್ ಇನ್‌ಫಾರ್ಮೇಶನ್ ಸಿಸ್ಟಮ್‌ಗಳು:


ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಈ ಸಂಸ್ಥೆಯು ಅತ್ಯುತ್ತಮ ಉದ್ಯೋಗವಕಾಶ ಒದಗಿಸುತ್ತಿದ್ದು ಸಂದರ್ಶನಕ್ಕೆ ಹಾಜರಾಗುವ ಮುನ್ನ ಸಾಕಷ್ಟು ಪೂರ್ವಸಿದ್ಧತೆ ನಡೆಸಬೇಕಾಗುತ್ತದೆ. ಕೆಲವೊಂದು ಪ್ರಮುಖ ಪ್ರಶ್ನೆಗಳ ಕುರಿತು ತಿಳಿದುಕೊಳ್ಳೋಣ


1. MySQL ಸರ್ವರ್‌ಗಾಗಿ ಡೀಫಾಲ್ಟ್ ಪೋರ್ಟ್ ಎಂದರೇನು?


2. ವರ್ಚುವಲ್ ಮೆಮೊರಿ ಎಂದರೇನು?


3. ವರ್ಕಿಂಗ್ ಸೆಟ್ ಆಫ್ ಪ್ರೊಸೆಸ್ ಎಂದರೇನು?


4. UNIX ಕರ್ನಲ್ ವಿವರಿಸಿ


5. ಲಿನಕ್ಸ್ ಯಾವ ಪ್ಲಾಟ್‌ಫಾರ್ಮ್‌ಗಳನ್ನು ಬೆಂಬಲಿಸುತ್ತದೆ?


6. ಡಿಜನರೇಟ್ ಡೈಮೆನ್ಶನ್ ಟೇಬಲ್ ಎಂದರೇನು?


Published by:Latha CG
First published: