KSLU Recruitment 2022: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ 17 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

Job Alert: ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ಮೇ 16 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಗೆ ರೂ.450-525/- ವೇತನ ನೀಡಲಾಗುತ್ತದೆ.

17 ಹುದ್ದೆಗೆ ಅರ್ಜಿ ಹಾಕಿ

17 ಹುದ್ದೆಗೆ ಅರ್ಜಿ ಹಾಕಿ

  • Share this:
KSLU Recruitment 2022: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು (Karnataka State Law University) ಅಧಿಕೃತ ಅಧಿಸೂಚನೆ ಮೂಲಕ ಅತಿಥಿ ಬೋಧನಾ (Guest Faculty)  ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವವರು ಹಾಗೂ ಹುಬ್ಬಳ್ಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಅನ್ನು 16-05-2022 ರ ಮೊದಲು ಕಳುಹಿಸಬಹುದು.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ವಾಕ್-ಇನ್ ಗೆ ಹಾಜರಾಗುವ ಮೊದಲು ಪೂರ್ಣ ಅಧಿಸೂಚನೆಯನ್ನು ಓದಬಹುದು. ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ವಾಕ್-ಇನ್ ಸ್ಥಳದ ವಿವರಗಳು ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ. ವಿಶ್ವವಿದ್ಯಾಲಯದ ಹೆಸರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU)
 ಹುದ್ದೆಗಳ ಸಂಖ್ಯೆ 17
 ಉದ್ಯೋಗ ಸ್ಥಳ ಹುಬ್ಬಳ್ಳಿ - ಕರ್ನಾಟಕ
 ಹುದ್ದೆಯ ಹೆಸರು ಗೆಸ್ಟ್​ ಫ್ಯಾಕಲ್ಟಿ
 ವೇತನ ರೂ.450-525/- ಪ್ರತಿ ಗಂಟೆಗೆ
 ಶೈಕ್ಷಣಿಕ ಅರ್ಹತೆ ಸ್ನಾತಕೋತ್ತರ ಪದವಿ, Ph.D, NET, SLET, SET
 ಅರ್ಜಿ ಕಳುಹಿಸುವ ಮೇಲ್​ ಐಡಿ kslu.registrar@gmail.com
 ಅರ್ಜಿ ಕಳುಹಿಸುವ ವಿಳಾಸ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ, ಹುಬ್ಬಳ್ಳಿ-580025, ಕರ್ನಾಟಕ
 ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ
 ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ 16-05-2022

ಹುಬ್ಬಳ್ಳಿಯಲ್ಲಿ ಖಾಲಿ ಇರುವ 17 ಗೆಸ್ಟ್ ಫ್ಯಾಕಲ್ಟಿ ಹುದ್ದೆಗಳ ಭರ್ತಿಗೆ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅರ್ಜಿ ಆಹ್ವಾನಿಸಿದ್ದು, ಸ್ನಾತಕೋತ್ತರ ಪದವಿ, Ph.D, NET, SLET, SET ಅನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ಮೇ 16 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಗೆ ರೂ.450-525/- ವೇತನ ನೀಡಲಾಗುತ್ತದೆ.

ವಿಶ್ವವಿದ್ಯಾಲಯದ ಹೆಸರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU)
ಹುದ್ದೆಗಳ ಸಂಖ್ಯೆ: 17
ಉದ್ಯೋಗ ಸ್ಥಳ: ಹುಬ್ಬಳ್ಳಿ - ಕರ್ನಾಟಕ
ಹುದ್ದೆಯ ಹೆಸರು: ಗೆಸ್ಟ್ ಫ್ಯಾಕಲ್ಟಿ
ವೇತನ: ರೂ.450-525/- ಪ್ರತಿ ಗಂಟೆಗೆ

ಹುದ್ದೆಯ ವಿವರ

ಕಾನೂನು 11
ರಾಜ್ಯಶಾಸ್ತ್ರ-II 1
ಅರ್ಥಶಾಸ್ತ್ರ-I ಮತ್ತು II 1
ಉತ್ಪಾದನೆ ಮತ್ತು ಕಾರ್ಯಾಚರಣೆ ನಿರ್ವಹಣೆ ಅಂತಾರಾಷ್ಟ್ರೀಯ ವ್ಯಾಪಾರ 1
ಸಮಾಜಶಾಸ್ತ್ರ - I 1
ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ 1
ಮನೋವಿಜ್ಞಾನ (ಸಮಾಜಶಾಸ್ತ್ರ-III) 1

ಶೈಕ್ಷಣಿಕ ಅರ್ಹತೆ: KSLU ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, Ph.D, NET, SLET, SET ಅನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು KSLU ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.

ವಯೋಮಿತಿ ಸಡಿಲಿಕೆ:
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಐಟಿಐ ಆಗಿದಿಯಾ? ಹಾಗಾದ್ರೆ 238 ಹುದ್ದೆಗೆ ಬೇಗ ಅರ್ಜಿ ಹಾಕಿ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಹಾಕುವುದು ಹೇಗೆ?
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, kslu.registrar@gmail.com ಗೆ 16-05-2022 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು. ಅರ್ಜಿಗಳನ್ನು ಪೋಸ್ಟ್ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ, ಹುಬ್ಬಳ್ಳಿ-580025, ಕರ್ನಾಟಕ ಇಲ್ಲಿಗೆ ಸಹ ಕಳುಹಿಸಬಹುದು.

ವೆಬ್ಸೈಟ್: kslu.karnataka.gov.in

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 07-05-2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 16-05-2022
ಸಂದರ್ಶನದ ದಿನಾಂಕ: 18-05-2022
Published by:Sandhya M
First published: