IRCTC Job: ಭಾರತೀಯ ರೈಲ್ವೆಯಲ್ಲಿ 60 ಹುದ್ದೆಗಳ ನೇಮಕಾತಿ; ಡಿಗ್ರಿ ಆದವರು ಅರ್ಜಿ ಸಲ್ಲಿಸಿ

ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.  

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

 • Share this:
  ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (Indian Railway Catering and Tourism Corporation) ಹಾಸ್ಪಿಟಾಲಿಟಿ ಮಾನಿಟರ್ (Hospitality Monitors)​​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದ್ದು, ಆಸಕ್ತರು ಆಗಸ್ಟ್​ 28ರಂದು ನಡೆಯುವ ವಾಕ್​-ಇನ್​-ಇಂಟರ್​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ.

  ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.   ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಕೆಳಗಿನಂತಿವೆ.  ಹುದ್ದೆ ಮಾಹಿತಿಹುದ್ದೆ ವಿವರ
  ಸಂಸ್ಥೆಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
  ಹುದ್ದೆಹಾಸ್ಪಿಟಾಲಿಟಿ ಮಾನಿಟರ್ಸ್
  ಒಟ್ಟು ಹುದ್ದೆ60
  ಕಾರ್ಯ ನಿರ್ವಹಣೆ ಸ್ಥಳಆಂಧ್ರ ಪ್ರದೇಶ - ತೆಲಂಗಾಣ - ಮಹಾರಾಷ್ಟ್ರ - ಒಡಿಶಾ
  ವೇತನ30000 ರೂ ಪ್ರತಿ ತಿಂಗಳು

  ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಮ್ಯಾನೇಜ್​ಮೆಂಟ್​ನಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.

  ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಗರಿಷ್ಠ 28 ವರ್ಷಗಳು ಮೀರಿರಬಾರದು.

  ವಯೋಮಿತಿ ಸಡಿಲಿಕೆ:
  ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
  ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
  ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

  ಆಯ್ಕೆ ಪ್ರಕ್ರಿಯೆ
  ಲಿಖಿತ ಪರೀಕ್ಷೆ ಮತ್ತು ಸಂದರ್ಶನ

  ಇದನ್ನು ಓದಿ: ಎನ್​ಐಟಿಕೆಯಲ್ಲಿ 14 ಬೋಧಕ ಹುದ್ದೆಗಳಿಗೆ ವಾಕ್​-ಇನ್​-ಇಂಟರ್ವ್ಯೂ

  ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು
  ಭುವನೇಶ್ವರ್, ಒಡಿಶಾ: ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್​ಐ), ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹತ್ತಿರ, ವಿಎಸ್​ಎಸ್​. ನಗರ್, ಭುವನೇಶ್ವರ್, ಒಡಿಶಾ - 751007
  ಹೈದರಾಬಾದ್, ತೆಲಂಗಾಣ: ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್​ಐ), ಎಫ್-ರೋ, ವಿದ್ಯಾ ನಗರ, DD ಕಾಲೋನಿ, ಹೈದರಾಬಾದ್, ತೆಲಂಗಾಣ - 500007x

  ಪ್ರಮುಖ ದಿನಾಂಕಗಳು
  ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 08 ಆಗಸ್ಟ್​​ 2022
  ವಾಕ್-ಇನ್ ದಿನಾಂಕ: 24- 28 ಆಗಸ್ಟ್ 2022

  ವಾಕ್​ ಇನ್​ ಇಂಟರ್​ವ್ಯೂ ನಡೆಯುವ ಸ್ಥಳ ಮತ್ತು ದಿನಾಂಕ
  ಭುವನೇಶ್ವರ್, ಒಡಿಶಾ 24-25 ಆಗಸ್ಟ್ 2022
  ಹೈದರಾಬಾದ್, ತೆಲಂಗಾಣ 27-28 ಆಗಸ್ಟ್ 2022

  ಇದನ್ನು ಓದಿ: ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿ; ಮಾಸಿಕ 31 ಸಾವಿರ ರೂ ವೇತನ

  ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ವೆಬ್‌ಸೈಟ್: irctc.co.in

  ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

  ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
  ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
  ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
  ಜಾತಿ ಪ್ರಮಾಣ ಪತ್ರ
  ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
  ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
  Published by:Seema R
  First published: