Teachers Recruitment: ಹೊನ್ನಾವರದ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಅರ್ಜಿ ಆಹ್ವಾನ

ಫ್ರೌಡ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧನೆ ಮಾಡಲು ಆಸಕ್ತಿ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ (Shree Bharathi English Medium High School) ಶಿಕ್ಷಕ ವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫ್ರೌಡ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧನೆ ಮಾಡಲು ಆಸಕ್ತಿ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 3 ಕಡೆಯ ದಿನಾಂಕವಾಗಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.































    ಹುದ್ದೆ ಮಾಹಿತಿವಿವರ
    ಸಂಸ್ಥೆಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ
    ಹುದ್ದೆಸಹ ಶಿಕ್ಷಕರು
    ವಿಷಯಸಮಾಜ ವಿಜ್ಞಾನ
    ಹುದ್ದೆ ಸಂಖ್ಯೆ1
    ಉದ್ಯೋಗ ಸ್ಥಳಹೊನ್ನಾವರ, ಉತ್ತರ ಕನ್ನಡ
    ವೇತನಶಿಕ್ಷಣ ಸಂಸ್ಥೆಯ ನಿಯಮದ ಅನುಸಾರ

    ವಿದ್ಯಾರ್ಹತೆ: ಅಂಗೀಕೃತ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಬಿಎ ಪದವಿಯನ್ನು ಪೂರ್ಣಗೊಳಿಸಿರಬೇಕು. ಜೊತೆಗೆ ಬಿಎಡ್​ ಆಗಿರಬೇಕು.

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    ಆಫ್​ಲೈನ್​

    ಆಯ್ಕೆ ವಿಧಾನ

    ಶಿಕ್ಷಣ ಸಂಸ್ಥೆಯ ನಿಯಮ ಅನುಸಾರವಾಗಿ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು

    ಪ್ರಮುಖ ದಿನಾಂಕ
    ಅರ್ಜಿ ಸಲ್ಲಿಕೆ ಆರಂಭ: ಮೇ 26, 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜೂನ್​ 3, 2022

    ಸೂಚನೆ
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನ್ನಡ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡಬೇಕು

    ಆಯ್ಕೆ ವಿಧಾನ: ಸಂಸ್ಥೆಯ ನಿಯಮ ಅನುಸಾರ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ
    ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಇದನ್ನು ಓದಿ: 57 ಹುದ್ದೆಗೆ ನೇಮಕಾತಿ; ಅಸೋಸಿಯೇಟ್, ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಲಗತ್ತಿಸಿ.

    ಇದನ್ನು ಓದಿ: ಧಾರವಾಡ ಐಐಟಿಯಲ್ಲಿ ಪ್ರೊಫೇಸರ್ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 1,86ಸಾವಿರ ವೇತನ

    ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುವುದು ಎಂಬುದರ ಕುರಿತು ನಮೂದಿಸಿ, ಅರ್ಜಿಯನ್ನು ಸ್ಪೀಡ್​ ಪೋಸ್ಟ್​, ರಿಜಿಸ್ಟರ್​ ಪೋಸ್ಟ್​ ಮೂಲಕ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು. ಇಲ್ಲವಾದಲ್ಲಿ ಶಾಲಾ ಕಚೇರಿಯಲ್ಲಿ ಅಭ್ಯರ್ಥಿಗಳು ಖುದ್ದು ಹಾಜರಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಶ್ರೀ ಭಾರತೀ ಎಜುಕೇಶನ್​ ಟ್ರಸ್ಟ್​, ಕವಲಕ್ಕಿ, ಹೊನ್ನಾವರ.
    ಶಾಲಾ ಅವಧಿಯೂ 9.30 ರಿಂದ 4.30ರವರೆಗೆ ಇರಲಿದೆ.
    ಹೆಚ್ಚಿನ ಮಾಹಿತಿಗೆ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ಕೂಡ ಮಾಹಿತಿ ಪಡೆಯಬಹುದಾಗಿದೆ: 9482614164, 9480459662
    Published by:Seema R
    First published: