Hindustan Copper Limited: 10th, 12th ಮತ್ತು ITI ಪಾಸಾದವರಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್​ನಲ್ಲಿ ಉದ್ಯೋಗ

ಹಿಂದೂಸ್ತಾನ್ ಕಾಪರ್ ಲಿಮಿಟೆಡ್​​ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 20ರೊಳಗೆ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು. ಈ ಕೆಳಕಂಡ ಸುಲಭ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಿ.

ಹಿಂದೂಸ್ತಾನ್ ಕಾಪರ್ ಲಿಮಿಟೆಡ್

ಹಿಂದೂಸ್ತಾನ್ ಕಾಪರ್ ಲಿಮಿಟೆಡ್

  • Share this:
    Hindustan Copper Limited Recruitment 2021: ಹಿಂದೂಸ್ತಾನ ಕಾಪರ್ ಲಿಮಿಟೆಡ್​ ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ಪಾಸಾಗಿರುವ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ಕೊನೆಯ ದಿನಾಂಕದೊಳಗೆ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.















































    ಹಿಂದೂಸ್ತಾನ ಕಾಪರ್ ಲಿಮಿಟೆಡ್ ನೇಮಕಾತಿ 2021 ಮಾಹಿತಿ
    ಸಂಸ್ಥೆ

    ಹಿಂದೂಸ್ತಾನ ಕಾಪರ್ ಲಿಮಿಟೆಡ್

    ಜಾಹೀರಾತು

    HCL/TCP/HR/APP/2021

    ಹುದ್ದೆಯ ಹೆಸರು

    ಅಪ್ರೆಂಟಿಸ್

    ಒಟ್ಟು ಹುದ್ದೆಗಳು

    10

    ವಿದ್ಯಾರ್ಹತೆ

    10th, 12th, ITI

    ಕೆಲಸದ ಸ್ಥಳ

    ಬಾಲಾಘಟ್(ಮಧ್ಯಪ್ರದೇಶ)

    ಸಂಬಳ

    ನಿಯಮಾನುಸಾರ

    ಅರ್ಜಿ ಸಲ್ಲಿಕೆ ಆರಂಭ

    29/09/2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    20/10/2021

    ವಯೋಮಿತಿ: ಸಾಮಾನ್ಯ ವರ್ಗ: 25 ವರ್ಷದೊಳಗಿನವರಾಗಿರಬೇಕು.
    ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ



    ಹುದ್ದೆಯ ಮಾಹಿತಿ



























    ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
    ಫಿಟ್ಟರ್

    05

    ಟರ್ನರ್

    01

    ಎಲೆಕ್ಟ್ರಿಷಿಯನ್

    03

    ಲ್ಯಾಬ್ ಅಸಿಸ್ಟೆಂಟ್

    01

    ಒಟ್ಟು 10

    ಹುದ್ದೆಯ ಹೆಸರು : ಫಿಟ್ಟರ್-05, ಟರ್ನರ್-01, ಎಲೆಕ್ಟ್ರಿಷಿಯನ್-03, ಲ್ಯಾಬ್ ಅಸಿಸ್ಟೆಂಟ್-01, ಒಟ್ಟು 10 ಹುದ್ದೆಗಳು

    ಇದನ್ನೂ ಓದಿ:Indian Army Recruitment 2021: ಸಂಬಳ ತಿಂಗಳಿಗೆ ₹ 2,18,200, LLB ಪದವೀಧರರಿಗೆ ಸೇನೆಯಲ್ಲಿ ಬಂಪರ್ ಉದ್ಯೋಗ

    ವಿದ್ಯಾರ್ಹತೆ:























    ಹುದ್ದೆಯ ಹೆಸರು ವಿದ್ಯಾರ್ಹತೆ
    ಫಿಟ್ಟರ್ 10ನೇ ತರಗತಿ ಉತ್ತೀರ್ಣ ಆಗಿರಬೇಕು. ಐಟಿಐನಲ್ಲಿ ಫಿಟ್ಟರ್ ಟ್ರೇಡ್​​ ವಿಭಾಗದಲ್ಲಿ ಪಾಸ್ ಆಗಿರಬೇಕು.
    ಟರ್ನರ್ 10ನೇ ತರಗತಿ ಉತ್ತೀರ್ಣ. ಐಟಿಐನಲ್ಲಿ ಟರ್ನರ್​ ಟ್ರೇಡ್ ವಿಭಾಗದಲ್ಲಿ ಪಾಸಾಗಿರಬೇಕು.
    ಎಲೆಕ್ಟ್ರಿಶಿಯನ್ 10ನೇ ತರಗತಿ ಉತ್ತೀರ್ಣ. ಐಟಿಐನಲ್ಲಿ ಎಲೆಕ್ಟ್ರಿಶಿಯನ್​ ಟ್ರೇಡ್ ವಿಭಾಗದಲ್ಲಿ ಪಾಸಾಗಿರಬೇಕು.
    ಲ್ಯಾಬ್ ಅಸಿಸ್ಟೆಂಟ್ 10ನೇ ತರಗತಿ ಉತ್ತೀರ್ಣ ಆಗಿರಬೇಕು.(ವಿಜ್ಞಾನ ವಿಷಯ ಪ್ರಮುಖ)

    ವಿದ್ಯಾರ್ಹತೆ :

    ಫಿಟ್ಟರ್-10ನೇ ತರಗತಿ ಉತ್ತೀರ್ಣ ಆಗಿರಬೇಕು. ಐಟಿಐನಲ್ಲಿ ಫಿಟ್ಟರ್ ಟ್ರೇಡ್​​ ವಿಭಾಗದಲ್ಲಿ ಪಾಸ್ ಆಗಿರಬೇಕು.

    ಟರ್ನರ್-10ನೇ ತರಗತಿ ಉತ್ತೀರ್ಣ. ಐಟಿಐನಲ್ಲಿ ಟರ್ನರ್​ ಟ್ರೇಡ್ ವಿಭಾಗದಲ್ಲಿ ಪಾಸಾಗಿರಬೇಕು.

    ಎಲೆಕ್ಟ್ರಿಶಿಯನ್- 10ನೇ ತರಗತಿ ಉತ್ತೀರ್ಣ. ಐಟಿಐನಲ್ಲಿ ಎಲೆಕ್ಟ್ರಿಶಿಯನ್​ ಟ್ರೇಡ್ ವಿಭಾಗದಲ್ಲಿ ಪಾಸಾಗಿರಬೇಕು.

    ಲ್ಯಾಬ್ ಅಸಿಸ್ಟೆಂಟ್- 10ನೇ ತರಗತಿ ಉತ್ತೀರ್ಣ ಆಗಿರಬೇಕು.(ವಿಜ್ಞಾನ ವಿಷಯ ಪ್ರಮುಖ)

    ಆಯ್ಕೆ ಪ್ರಕ್ರಿಯೆ ಹೇಗೆ?

    • ದಾಖಲಾತಿ ಪರಿಶೀಲನೆ

    • ವೈಯಕ್ತಿಕ ಸಂದರ್ಶನ




    ಅರ್ಜಿ ಸಲ್ಲಿಸುವುದು ಹೇಗೆ?

    ಹಿಂದೂಸ್ತಾನ್ ಕಾಪರ್ ಲಿಮಿಟೆಡ್​​ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 20ರೊಳಗೆ ಪೋಸ್ಟ್ ಮೂಲಕ ಅರ್ಜಿ ಹಾಕಬೇಕು. ಈ ಕೆಳಕಂಡ ಸುಲಭ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಿ.

    • ಮೊದಲಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್​ನ ಅಧಿಕೃತ ವೆಬ್​ಸೈಟ್ www.hindustancopper.com.ಗೆ ಭೇಟಿ ನೀಡಿ.

    • ಅಲ್ಲಿ ಕಾಣುವ “Recruitment/ Career/ Advertisement menu”

    • ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    • ಬಳಿಕ Apprentice Jobs ಆಯ್ಕೆಯನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ.

    • ಅಧಿಕೃತ ನೋಟಿಫಿಕೇಶನ್​ ಹಾಗೂ ಅಪ್ಲಿಕೇಶನ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ.

    • ಅಧಿಕೃತ ನೋಟಿಫಿಕೇಶನ್​ ಹಾಗೂ ಅರ್ಹತಾ ಮಾನದಂಡಗಳನ್ನು ಜಾಗ್ರತೆಯಿಂದ ಓದಿ.

    • ಅರ್ಜಿಯ ನಮೂನೆಯನ್ನು ಪ್ರಿಂಟ್​ಔಟ್ ತೆಗೆದುಕೊಳ್ಳಿ.

    • ಅರ್ಜಿಯನ್ನು ಕೇಳಿರುವ ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ.

    • ಭರ್ತಿ ಮಾಡಿದ ಅರ್ಜಿಯೊಂದಿಗೆ ಕೇಳಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಟ್ಯಾಚ್ ಮಾಡಿ.

    • ಎಲ್ಲಾ ಮಾಹಿತಿ ಹಾಗೂ ದಾಖಲಾತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.

    • ನಂತರ ಅರ್ಜಿ ಶುಲ್ಕ ಪಾವತಿಸಿ.

    • ಮುಚ್ಚಿದ ಲಕೋಟೆಯಲ್ಲಿ ನಿಮ್ಮ ಅರ್ಜಿಯನ್ನು ಅ.20ರೊಳಗೆ The Dy. Manager (HR),
      Taloja Copper Project,
      E 33-36,
      MIDC Taloja-410208 - ಈ ವಿಳಾಸಕ್ಕೆ ಪೋಸ್ಟ್ ಮಾಡಿ.

    Published by:Latha CG
    First published: