High Court Jobs: ಹೈಕೋರ್ಟ್ನಲ್ಲಿ(High court) ಕೆಲಸ ಮಾಡುವ ಆಸಕ್ತಿ ಇದ್ದರೆ ಇಲ್ಲಿದೆ ಸುವರ್ಣಾವಕಾಶ. ಕೇವಲ 8ನೇ ತರಗತಿ(8th Pass) ಪಾಸಾಗಿದ್ರೆ ಆರಾಮಾಗಿ ಸರ್ಕಾರಿ ನೌಕರಿ(Government Job) ಗಿಟ್ಟಿಸಿಕೊಳ್ಳಬಹುದು. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಅದಕ್ಕೂ ಮುನ್ನ ಯಾವ್ಯಾವ ಹುದ್ದೆಗಳಿಗೆ ನೇಮಕಾತಿ(Recruitment) ನಡೆಸಲಾಗುತ್ತಿದೆ? ಎಷ್ಟು ಹುದ್ದೆಗಳಿವೆ? ಅರ್ಜಿ ಹಾಕಲು ಕೊನೆಯ ದಿನಾಂಕ ಯಾವುದು? ಎಂಬೆಲ್ಲಾ ಮಾಹಿತಿ ಇಲ್ಲಿದೆ.
ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ನಲ್ಲಿ ಚೌಕಿದಾರ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಪಂಜಾಬ್ & ಹರಿಯಾಣ ಹೈಕೋರ್ಟ್ನ ಅಧಿಕೃತ ವೆಬ್ಸೈಟ್ highcourtchd.gov.in ಗೆ ಭೇಟಿ ನೀಡಿ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಸಂಸ್ಥೆ | ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ |
ಹುದ್ದೆ | ಚೌಕಿದಾರ್ |
ಒಟ್ಟು ಹುದ್ದೆ | 50 |
ವೇತನ | ನಿಯಮಾನುಸಾರ |
ಅರ್ಜಿ ಹಾಕಲು ಕೊನೆ ದಿನ | ಜನವರಿ 9, 2023 |
ಇದನ್ನೂ ಓದಿ: ಕೇಂದ್ರ ಸರ್ಕಾರದ 251 ಹುದ್ದೆಗಳಿಗೆ ಅರ್ಜಿ ಹಾಕಿ-10th, ಪಿಯು ಪಾಸಾಗಿದ್ರೆ ಸಾಕು!
ಒಟ್ಟು 50 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಜನವರಿ 9 ಅರ್ಜಿ ಹಾಕಲು ಕೊನೆಯ ದಿನವಾಗಿದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳು 710 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ವಯೋಮಿತಿ:
ಕನಿಷ್ಠ 18 ವರ್ಷ
ಗರಿಷ್ಠ 35 ವರ್ಷ
ವೇತನ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಆದರೆ ಎಷ್ಟು ವೇತನ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಿಲ್ಲ.
ಇದನ್ನೂ ಓದಿ:SSLC, PUC ಪಾಸಾಗಿದ್ರೆ ತುಮಕೂರಿನಲ್ಲಿದೆ ಸರ್ಕಾರಿ ನೌಕರಿ- ಇಲ್ಲಿ ಅಪ್ಲೈ ಮಾಡಿ
ಉದ್ಯೋಗದ ಸ್ಥಳ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಹರಿಯಾಣದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ